ಕೇಂದ್ರ ಸಚಿವರ ಭೇಟಿಯಾದ NBF ನಿಯೋಗ; ಹೊಸ ನಿರೀಕ್ಷೆಯಲ್ಲಿ ಟಿವಿ ಚಾನೆಲ್​ಗಳು

ಕೇಂದ್ರ ಸಚಿವರ ಭೇಟಿಯಾದ NBF ನಿಯೋಗ; ಹೊಸ ನಿರೀಕ್ಷೆಯಲ್ಲಿ ಟಿವಿ ಚಾನೆಲ್​ಗಳು

ನವದೆಹಲಿ: ದೇಶದ ಅತಿದೊಡ್ಡ ಸುದ್ದಿ ಪ್ರಸಾರಕ ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಫೆಡರೇಶನ್ (ಎನ್‌ಬಿಎಫ್)ನ ನಿಯೋಗ ಏಪ್ರಿಲ್ 17 ರಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರನ್ನ ಭೇಟಿ ಮಾಡಿತು. ವಿಶೇಷ ಅಂದ್ರೆ NBF ನಿಯೋಗದಲ್ಲಿ ನ್ಯೂಸ್​ಫಸ್ಟ್​ ಕನ್ನಡ ಕೂಡ ಇತ್ತು.

ಭೇಟಿ ವೇಳೆ ನ್ಯೂಸ್​ ಇಂಡಸ್ಟ್ರಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಡಲಾಯಿತು. ನ್ಯೂಸ್​​ ಬ್ರಾಡ್​​ಕಾಸ್ಟಿಂಗ್ ಸೆಕ್ಟರ್​​ನ ಬೆಳವಣಿಗೆ, ಟ್ರೆಂಡ್ ಮತ್ತು ಎದುರಿಸುತ್ತಿರುವ ಸವಾಲು ಹಾಗೂ ಇತ್ತೀಚೆಗೆ ತಡೆ ಹಿಡಿಯಲಾಗಿರುವ ಟಿಆರ್​ಪಿ ರೇಟಿಂಗ್ಸ್​ಗಳನ್ನ ಪುನರ್ ಆರಂಭಿಸುವಂತೆ ಕೇಂದ್ರ ಸಚಿವರಿಗೆ ಎನ್​ಬಿಎಫ್​ ನಿಯೋಗ ಮನವಿ ಮಾಡಿದೆ.

ಏನಂದ್ರು ಕೇಂದ್ರ ಸಚಿವರು..?
ಬಳಿಕ ಮಾತನಾಡಿರುವ ಕೇಂದ್ರ ಸಚಿವ ಅನುರಾಗ ಠಾಕೂರ್​, ಹಿರಿಯ ಪತ್ರಕರ್ತ ಅರ್ನಾಬ್ ಗೋಸ್ವಾಮಿ ನೇತೃತ್ವದ ಎನ್​ಬಿಎಫ್​ ಆಡಳಿತ ಮಂಡಳಿ, ನನ್ನನ್ನ ಭೇಟಿ ಮಾಡಿ ತಮ್ಮ ಅಭಿಪ್ರಾಯವನ್ನ ಹಂಚಿಕೊಂಡಿರೋದು ತುಂಬಾ ಸಂತೋಷವಾಗಿದೆ. ಮಹತ್ವದ ಮಾತುಕತೆಗಳು ನಡೆದಿವೆ. ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸುವಲ್ಲಿ ಸುದ್ದಿ ಪ್ರಸಾರ ಮತ್ತು ಸುದ್ದಿ ಪ್ರಸಾರದ ಪಾತ್ರದ ಕುರಿತು ಎನ್‌ಬಿಎಫ್‌ನೊಂದಿಗೆ ತೊಡಗಿಸಿಕೊಳ್ಳಲು ಎದುರು ನೋಡುತ್ತಿದ್ದೇನೆ ಅಂತಾ ತಿಳಿಸಿದರು.

ಮಾಧ್ಯಮವನ್ನು ಮತ್ತಷ್ಟು ಶಕ್ತಗೊಳಿಸಲು ಕಾಯುತ್ತಿದ್ದೇವೆ

blank
ಅರ್ನಾಬ್ ಗೋಸ್ವಾಮಿ, ರಿಪಬ್ಲಿಕ್ ಟಿವಿ ನೆಟ್​ವರ್ಕ್ ಮುಖ್ಯಸ್ಥರು

ಇನ್ನು ಕೇಂದ್ರ ಸಚಿವರ ಭೇಟಿ ಬಳಿಕ ಮಾತನಾಡಿದ ಎನ್​ಡಿಎಫ್ ಫೌಂಡಿಂಗ್ ಪ್ರೆಸಿಡೆಂಟ್ ಅರ್ನಾಬ್ ಗೋಸ್ವಾಮಿ.. ಒಂದು ಸಶಕ್ತ ಸುದ್ದಿ ಪ್ರಸಾರಕರ ಒಕ್ಕೂಟವನ್ನು ಕಟ್ಟುವುದರ ಹಿಂದಿನ ಅವಶ್ಯಕತೆಯನ್ನು ಕೇಂದ್ರ ಸಚಿವರಿಗೆ ತಿಳಿಸಲಾಯಿತು. ಸಚಿವರೂ ಕೂಡ ಆಡಳಿತ ಮಂಡಳಿಯ ಸಮಸ್ಯೆಗಳನ್ನ ಆಲಿಸಿದ್ದಾರೆ. ಮಾಧ್ಯಮವನ್ನು ಮತ್ತಷ್ಟು ಶಕ್ತಗೊಳಿಸಲು ಮಾಹಿತಿ ಮತ್ತು ಪ್ರಸಾರ ಖಾತೆ ಕೈಜೋಡಿಸಲು ಎದುರು ನೋಡುತ್ತಿದ್ದೇವೆ ಎಂದು ತಿಳಿಸಿದರು.

ಪಾರದರ್ಶಕತೆ ಬಯಸುತ್ತೇವೆ
ನ್ಯೂಸ್ ನೇಷನ್ ನೆಟ್​​ವರ್ಕ್​​ನ ಎಡಿಟರ್ ಇನ್ ಚೀಫ್ ಮನೋಜ್ ಗೈರೋಲಾ ಮಾತನಾಡಿ.. ಎನ್​ಬಿಎಫ್​ ಸದಸ್ಯರಿಗೆ ಕೇಂದ್ರ ಸಚಿವರನ್ನ ಭೇಟಿಯಾಗಿ ಮಾತುಕತೆ ನಡೆಸುವ ಒಂದೊಳ್ಳೆ ಅವಕಾಶ ಒದಗಿ ಬಂದಿತ್ತು. ಕೇಂದ್ರ ಸಚಿವರು ನಮ್ಮ ಉದ್ದೇಶಗಳನ್ನ ಆಲಿಸಿದ್ದಾರೆ. ಕಳೆದ 10 ತಿಂಗಳಿನಿಂದ BARC ರೇಟಿಂಗ್ಸ್​ ತಡೆ ಹಿಡಿಯಾಲಾಗಿದೆ. ಇದರಿಂದ ನ್ಯೂಸ್ ಇಂಡಸ್ಟ್ರಿ ಬಹುದೊಡ್ಡ ಸಮಸ್ಯೆಯನ್ನ ಎದುರಿಸುತ್ತಿವೆ. ನಾವು ಇಂದು ಕೇಂದ್ರ ಸಚಿವರ ಬಳಿ ನಮ್ಮ ಕನ್ಸರ್ನ್​ ಹೇಳಿಕೊಂಡಿದ್ದೇವೆ. ನಾವೀಗ ರೇಟಿಂಗ್‌ಗಳು ಆದಷ್ಟು ಬೇಗನೇ ನಮಗೆ ಸಿಗುವಂತಾಗಲಿ ಎಂದು ಭಾವಿಸುತ್ತೇವೆ. ಇನ್ನೊಂದು ವಿಚಾರ ಏನಂದರೆ BARC ರೇಟಿಂಗ್ ವಿಷಯದಲ್ಲಿ ಪಾರದರ್ಶಕತೆ ಇರಬೇಕೆಂದು ಎನ್​ಬಿಎಫ್ ಬಯಸುತ್ತದೆ ಅಂತಾ ಇದೇ ವೇಳೆ ತಿಳಿಸಿದರು.

ಎನ್​ಬಿಎಫ್​ನ ಉಪಾಧ್ಯಕ್ಷ ಸಂಜೀವ್ ನರೈನ್ ಮಾತನಾಡಿ.. ನಾವು ಅನುರಾಗ್ ಠಾಕೂರ್​ ಜೊತೆ ಒಂದೊಳ್ಳೆ ಚರ್ಚೆಯನ್ನ ನಡೆಸಿದ್ದೇವೆ. ನಮ್ಮನ್ನ ಭೇಟಿಯಾಗಲು ಒಪ್ಪಿಕೊಂಡಿರೋದಕ್ಕೆ ಈ ಸಂದರ್ಭದಲ್ಲಿ ನಾನು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. 50 ನ್ಯೂಸ್ ಚಾನೆಲ್​ಗಳು ಒಟ್ಟಿಗೆ ನಡೆಸುವ ಕಾರ್ಯಕಮದ ಆಹ್ವಾನ ಸ್ವೀಕರಿಸಿ ಬರುವುದಾಗಿ ಹೇಳಿರುವ ಕೇಂದ್ರ ಸಚಿವರಿಗೆ ಹೃದಯಪೂರ್ವಕ ಧನ್ಯವಾದಗಳನ್ನ ಅರ್ಪಿಸುತ್ತೇನೆ ಎಂದರು.

blank
ಬರುಣ್ ದಾಸ್, TV9 ನೆಟ್​ವರ್ಕ್ ಗ್ರೂಪ್​ ಸಿಇಓ

ಕೇಂದ್ರ ಸಚಿವರಿಗೆ ಹೃದಯ ಪೂರ್ವಕ ಧನ್ಯವಾದಗಳು
ITV Network ಪ್ರಮೋಟರ್​ ಕಾರ್ತಿಕೇಯ ಶರ್ಮಾ ಮಾತನಾಡಿ.. ಮಾಧ್ಯಮ ಲೋಕದಲ್ಲಿ ಇದೊಂದು ದೊಡ್ಡ ಬೆಳವಣಿಗೆ ಆಗಿದೆ. ಕೇಂದ್ರ ಸಚಿವರ ಕಾಳಜಿಯನ್ನ ಸ್ವಾಗತಿಸುತ್ತೇವೆ. ಎನ್‌ಬಿಎಫ್‌ನ ಮಾಜಿ ಉಪಾಧ್ಯಕ್ಷರ ಕೆಪಾಸಿಟಿ ಎಂಐಬಿ ಮತ್ತು ಎನ್‌ಬಿಎಫ್‌ಗೆ ಒಂದು ಮೈಲಿಗಲ್ಲು. ಇದು ಪ್ರಾದೇಶಿಕ ಚಾನೆಲ್‌ಗಳಿಗೆ ಹೆಚ್ಚು ಪ್ರಯೋಜನ ನೀಡುತ್ತದೆ. ಎನ್​ಬಿಎಫ್​ನ ಕಾರ್ಯ ಆರಂಭವಾಗಿದೆ. ಇತರ ಸಂಸ್ಥೆಗಳು ಮತ್ತು ಸಂಸ್ಥೆಗಳು ಸಹ ಮಂಡಳಿಯಲ್ಲಿ ಬರುತ್ತವೆ ಎಂದು ನಾವು ಭಾವಿಸುತ್ತೇವೆ. NBF ಮೊದಲನೆಯದು, ಇದು ಖಂಡಿತವಾಗಿಯೂ ಹೆಮ್ಮೆಯ ಕ್ಷಣವಾಗಿದೆ ಎಂದಿದ್ದಾರೆ.

blank
ಹೇಮಂತ್ ಶರ್ಮಾ, ಟಿವಿ9 ಭರತವರ್ಷ ಇಡಿಟೋರಿಯಲ್ ಡೈರೆಕ್ಟರ್

ಕೇಂದ್ರ ಸಚಿವರ ಬಳಿ ನಮ್ಮ ಸಮಸ್ಯೆಯನ್ನ ಹೇಳಿಕೊಂಡಿದ್ದೇವೆ. ನಮ್ಮ ಮನವಿಯನ್ನ ಸ್ವೀಕರಿಸಿದ್ದಾರೆ. ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ನಿರೀಕ್ಷೆಯಲ್ಲಿದ್ದೇವೆ.

-ಹೇಮಂತ್ ಶರ್ಮಾ, ಟಿವಿ9 ಭಾರತ್​​ವರ್ಷ್​ ಇಡಿಟೋರಿಯಲ್ ಡೈರೆಕ್ಟರ್

ಸಕರಾತ್ಮ ಫಲಿತಾಂಶ ನಿರೀಕ್ಷೆ
ಎನ್​ಬಿಎಫ್​ ವೈಸ್​ಪ್ರೆಸಿಡೆಂಟ್ ಶಂಕರ್ ಬಾಲಾ ಪ್ರತಿಕ್ರಿಯಿಸಿ.. ಇಂದಿನ ಸಭೆ ಸಕರಾತ್ಮಕವಾಗಿತ್ತು. ಕೇಂದ್ರ ಸಚಿವರನ್ನು ಭೇಟಿ ಮಾಡಲು ನಮಗೆ ಒಳ್ಳೆಯ ಅವಕಾಶ ಸಿಕ್ಕಿತ್ತು. ಭೇಟಿ ಸಂದರ್ಭದಲ್ಲಿ ಕೇಂದ್ರ ಸಚಿವರು ತುಂಬಾ ಆತ್ಮೀಯವಾಗಿ, ತಾಳ್ಮೆಯಿಂದ ನಮ್ಮ ಮಾತುಗಳನ್ನ ಆಲಿಸಿದರು. ಸಮಸ್ಯೆಗಳು ಏನೇ ಇರಲಿ, ಅವುಗಳನ್ನು ಪರಿಹರಿಸುತ್ತೇವೆ. NBF ಬಗ್ಗೆ ನಾವು ನಿಜವಾಗಿಯೂ ಉತ್ಸುಕರಾಗಿದ್ದೇವೆ ಎಂದು ನಾವು ಹೇಳಿರೋದನ್ನ ಸ್ವೀಕರಿಸಿದರು. ಕೇಂದ್ರ ಸಚಿವರ ಭೇಟಿ ಬಳಿಕ ನಮ್ಮ ನಿರೀಕ್ಷೆ ಹೆಚ್ಚಾಗಿದೆ. ನಮ್ಮ ಕನ್ಸರ್ನ್​ ಅನ್ನ ಅವರ ಗಮನಕ್ಕೆ ತಂದಿದ್ದೇವೆ. ಸುದ್ದಿ ಚಾನೆಲ್‌ಗಳು ರೇಟಿಂಗ್ಸ್​ ಎಷ್ಟು ಮುಖ್ಯವಾಗಿವೆ ಅನ್ನೋದನ್ನ ತಿಳಿಸಿಕೊಟ್ಟಿದ್ದೇವೆ. ಹೀಗಾಗಿ ಶೀಘ್ರದಲ್ಲೇ ನಾವು ಸಕಾರಾತ್ಮಕ ಫಲಿತಾಂಶವನ್ನು ನಿರೀಕ್ಷಿಸುತ್ತಿದ್ದೇವೆ ಎಂದಿದ್ದಾರೆ.

ಎನ್​ಬಿಎಫ್ ಆಡಳಿತ ಮಂಡಳಿಯು ಮಾಹಿತಿ ಮತ್ತು ಪ್ರಸಾರ ಸಚಿವರನ್ನು ಭೇಟಿ ಮಾಡಿತು. ನ್ಯೂಸ್​ ಚಾನೆಲ್​ಗೆ ಸಂಬಂಧಿತ ಸಮಸ್ಯೆಗಳನ್ನು ಅವರ ಗಮನಕ್ಕೆ ತಂದಿದ್ದೇವೆ. ಕೇಂದ್ರ ಸಚಿವ ಠಾಕೂರ್ ಅವರು ನಮ್ಮ ಸಮಸ್ಯೆಯನ್ನ ತಾಳ್ಮೆಯಿಂದ ಕೇಳಿದರು. ನ್ಯೂಸ್​ ಚಾನಲ್​​ಗಳಿಗೆ ರೇಟಿಂಗ್ಸ್​ ಸಿಗದೇ ಸಮಸ್ಯೆಯನ್ನ ಎದುರಿಸುತ್ತಿವೆ. ಕಳೆದ 10 ತಿಂಗಳಿನಿಂದ ಎದುರಿಸುತ್ತಿರುವ ಸಮಸ್ಯೆಯನ್ನ ಬಗೆ ಹರಿಸುವಂತೆ ಮನವಿ ಮಾಡಿಕೊಂಡಿದ್ದೇವೆ.

-ಎನ್​ಬಿಎಫ್​ನ ಸೆಕ್ರೆಟರಿ ಜನರಲ್ ರಾ.ಜೈ ಕೃಷ್ಣ

blank
ಇಶಿತಾ, ಎನ್​ಬಿಎಫ್​ ಪಬ್ಲಿಕ್ ಪಾಲಿಸಿ ಅಸೋಸಿಯೇಟ್

ಎನ್​ಬಿಎಫ್​​ನ ಪಬ್ಲಿಕ್ ಪಾಲಿಸಿಯ ಸಹಾಯಕಿ ಇಶಿತಾ ಮಾತನಾಡಿ.. ಇಂದಿನ ಸಭೆ ತುಂಬಾ ಮಹತ್ವದ್ದಾಗಿತ್ತು. ಎನ್​ಬಿಎಫ್​ನ ನಮ್ಮ ಸದಸ್ಯರು ದೇಶದ ವಿವಿಧ ಭಾಗಗಳಿಂದ ಬಂದಿದ್ದರು. ಜೊತೆಗೆ ತಮ್ಮ ಸಮಸ್ಯೆಗಳು ಏನು ಅನ್ನೋದನ್ನ ಕೇಂದ್ರ ಸಚಿವರ ಬಳಿ ಹೇಳಿಕೊಂಡರು. ಈ ವೇಳೆ ಟಿಆರ್​ಪಿ ವಿಚಾರವನ್ನೂ ಸಹ ಪ್ರಸ್ತಾಪ ಮಾಡಿದ್ದೇವೆ ಎಂದಿದ್ದಾರೆ.

Source: newsfirstlive.com Source link