ಸಂಸದ, ಶಾಸಕರ ಜೇಬಿಗೇ ಕಳ್ಳರ ಕತ್ತರಿ; ಪ್ಯಾಂಟ್ ಬದಲಿಸಿ ಉಫ್ ಎಂದ ಜನಪ್ರತಿನಿಧಿಗಳು..!

ಸಂಸದ, ಶಾಸಕರ ಜೇಬಿಗೇ ಕಳ್ಳರ ಕತ್ತರಿ; ಪ್ಯಾಂಟ್ ಬದಲಿಸಿ ಉಫ್ ಎಂದ ಜನಪ್ರತಿನಿಧಿಗಳು..!

ಹಾವೇರಿ: ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು ಇಂದು ಹಾವೇರಿಗೆ ಆಗಮಿಸಿದ ವೇಳೆ ನಗರದ ಕೆಇಬಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಳ್ಳರ ಕೈಚಳಕ ತೋರಿಸಿದ್ದಾರೆ.

ಅಂದಮಾತ್ರಕ್ಕೆ ಕಳ್ಳರು ಸಾಮಾನ್ಯ ಜನರ ಜೇಬಿಗೆ ಕಳ್ಳರು ಕತ್ತರಿ ಹಾಕಿಲ್ಲ. ಹಾವೇರಿ ಲೋಕಸಭಾ ಕ್ಷೇತ್ರದ ಸಂಸದ ಶಿವಕುಮಾರ ಉದಾಸಿ, ಶಾಸಕ ವಿರುಪಾಕ್ಷ ಬಳ್ಳಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಸೇರಿದಂತೆ ಹಲವರ ಜೇಬಿಗೆ ಖದೀಮ ಕಳ್ಳರು ಕತ್ತರಿ ಹಾಕಿರುವ ಘಟನೆ ಪೊಲೀಸರ ಭದ್ರತೆಯ ನಡುವೆಯೇ ನಡೆದಿದೆ.

blank

ಎಷ್ಟೆಷ್ಟು ಹಣ ಕಳ್ಳತನ..?
ಜೇಬಿಗೆ ಕತ್ತರಿಹಾಕಿರುವುದು ಗೊತ್ತಾಗುತ್ತಿದ್ದಂತೆಯ ಪ್ರವಾಸಿಮಂದಿರಕ್ಕೆ ಆಗಮಿಸಿ ಸಂಸದರು ಮತ್ತು ಶಾಸಕರ ಪ್ಯಾಂಟ್ ಬದಲಿಸಿದ್ದಾರೆ. ಪೊಲೀಸ್ ಭದ್ರತೆಯಲ್ಲೂ ಬಿಜೆಪಿ ಕಾರ್ಯಕರ್ತರ ಜೇಬಿಗೆ ಬ್ಲೇಡ್ ಹಾಕಿದ ಕಳ್ಳರು ನಗದು ಸೇರಿದಂತೆ ಹಲವು ಬೆಲೆಬಾಳುವ ಮೊಬೈಲ್‌ಗಳನ್ನು ಕದ್ದಿದ್ದಾರೆ.

blank

ಸಂಸದರು ಹಾಗೂ ಶಾಸಕರು, ಬಿಜೆಪಿ ಜಿಲ್ಲಾಧ್ಯಕ್ಷ ಎಷ್ಟು ಹಣ ಕಳೆದುಕೊಂಡಿದ್ದಾರೆ ಎನ್ನುವುದು ಗೊತ್ತಾಗಿಲ್ಲ. ಬಿಜೆಪಿ ಕಾರ್ಯಕರ್ತರ ನಜೀರ್‌ ಅಹ್ಮದ್ ನದಾಫ್ ಎನ್ನುವವರ ಜೇಬು ಕತ್ತರಿಸಿ 20,000 ರೂಪಾಯಿ ಇನ್ನೊಬ್ಬ ಬಿಜೆಪಿ ಕಾರ್ಯಕರ್ತರ ಜೇಬು ಕತ್ತರಿಸಿ 10,000 ರೂಪಾಯಿ ಹಾಗೂ ರಾಜು ಮುಕಣ್ಣನವರ 5000 ಸಾವಿರ ರೂಪಾಯಿ, ಮಂಜು ದಡ್ಡೂರ ಎನ್ನುವವರನ್ನು ಮೊಬೈಲ್ ಎಗರಿಸಿದ್ದಾರೆ.

Source: newsfirstlive.com Source link