‘ನಾನು ಬಾಂಬೆಯವಳಲ್ಲ, ಕನ್ನಡತಿ’ – ಹೀಗೆಂದ ಜಗ್ಗೇಶ್​​ ಸಿನಿಮಾದ ಹೀರೋಯಿನ್​​​​

‘ನಾನು ಬಾಂಬೆಯವಳಲ್ಲ, ಕನ್ನಡತಿ’ – ಹೀಗೆಂದ ಜಗ್ಗೇಶ್​​ ಸಿನಿಮಾದ ಹೀರೋಯಿನ್​​​​

ಗುರುಪ್ರಸಾದ್ – ಜಗ್ಗೇಶ್ ಕಾಂಬಿನೇಷನ್‌ ‘ರಂಗನಾಯಕ’ ಚಿತ್ರೀಕರಣ ಶುರುವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರದ ಫೋಟೋಗಳು ಸಿಕ್ಕಾಪಟ್ಟೆ ವೈರಲ್​ ಕೂಡ ಆಗ್ತಾಯಿದೆ. ಅಷ್ಟೇ ಅಲ್ಲ, ಈ ಚಿತ್ರದಲ್ಲಿ ಟಿವಿ ಸೀರಿಯಲ್​ನಲ್ಲಿ ನಟಿಸ್ತಾಯಿದ್ದ ನಟಿ ಮೊದಲ ಬಾರಿಗೆ ಬಿಗ್​ ಸ್ಕ್ರೀನ್​ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ನಟಿ ರಚಿತಾ, ತಮಿಳು, ತೆಲುಗಿನ ಸೀರಿಯಲ್​ಗಳಲ್ಲಿ ನಟಿಸ್ತಾಯಿದ್ದ ನಟಿ, ಇದೀಗ ಕನ್ನಡದ ‘ರಂಗನಾಯಕ’ ಸಿನಿಮಾದಲ್ಲಿ ಹೀರೋಯಿನ್​ ಆಗಿ ಮೊದಲನೇ ಸಿನಿಮಾದಲ್ಲಿ ನಟಿಸಲಿದ್ದಾರೆ. ಇನ್ನೂ, ಈ ವೇಳೆ, ನವರಸ ನಾಯಕ ರಚಿತಾರ ಬಗ್ಗೆ ಮಾತಾಡುವಾಗ, ಇವ್ರು ಬಾಂಬೆಯವ್ರು ಅಂತ ಹೇಳಿದಾಗ, ರಚಿತಾ, ‘‘ನಾಣು ಬಾಂಬೆಯವಳಲ್ಲ, ನಾನು ಕನ್ನಡದವಳು’ ಅಂತ ಹೇಳಿದ್ರು. ಅಲ್ಲದೇ, ತಾವು ಜಗ್ಗೇಶ್​ರವರ ಜೊತೆ ಮೊದಲನೇ ಸಿನಿಮಾ ಮಾಡ್ತಾಯಿರೋದು ತಮ್ಮ ಭಾಗ್ಯವಂತ ಹೇಳಿಕೊಂಡಿದ್ದಾರೆ. ಟೋಟಲ್​ ಫನ್​ಯಿರೋ ಈ ಸಿನಿಮಾ ತೆರೆ ಮೇಲೆ ಬರೋದಕ್ಕೆ ಜನ ಈಗಾಗ್ಲೇ ಕಾಯ್ತಾಯಿದ್ದಾರೆ ಅಂದ್ರೆ ತಪ್ಪಾಗೋದಿಲ್ಲ.

Source: newsfirstlive.com Source link