ರಾಬರಿ ಕೇಸಲ್ಲಿ ಒಳಗೆ ಹೋದ ಆರೋಪಿ ಜೈಲಲ್ಲೇ ಸಾವು; ಕಾರಣವೇನು ಗೊತ್ತಾ?

ರಾಬರಿ ಕೇಸಲ್ಲಿ ಒಳಗೆ ಹೋದ ಆರೋಪಿ ಜೈಲಲ್ಲೇ ಸಾವು; ಕಾರಣವೇನು ಗೊತ್ತಾ?

ಬೆಂಗಳೂರು: ರಾಬರಿ ಕೇಸ್​ನಲ್ಲಿ ಜೈಲು ಸೇರಿದ್ದ ಅರೋಪಿ ಸಾವನ್ನಪ್ಪಿರೋ ಘಟನೆ, ಪರಪ್ಪನ ಅಗ್ರಹಾರದಲ್ಲಿ ನಡೆದಿದೆ.

ಬೆಂಗಳೂರಿನ ಚಂದ್ರಲೇಔಟ್ ಪೊಲೀಸರಿಂದ ಕಾರ್ಯಾಚರಣೆ ನಡೆಸಿ, ಗಜೇಂದ್ರ @ಡಾಲಿ ಅನ್ನೋ ಆರೋಪಿಯನ್ನ ರಾಬರಿ ಕೇಸ್ ಮೇಲೆ ಬಂಧಿಸಿದ್ದಾರೆ. ಇತ್ತೀಚೆಗೆ ಚಂದ್ರಲೇಔಟ್​ನಲ್ಲಿ ರಾಬರಿಗೆ ಗಜೇಂದ್ರ ಯತ್ನಿಸಿದ್ದ. ಈ ವೇಳೆ, ಆರೋಪಿ ಗಜೇಂದ್ರ ಪತ್ತೆಗೆ ಪೊಲೀಸರು ಮುಂದಾಗಿದ್ರು, ಆಗ ಪೊಲೀಸರಿಂದ ತಪ್ಪಿಸಿಕೊಳ್ಳುವಾಗ ಗಜೇಂದ್ರ ಗಾಯಗೊಂಡಿದ್ದ. ಬಳಿಕ, ಆರೋಪಿ ಗಜೇಂದ್ರನನ್ನ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಆರೋಪಿ ಗಜೇಂದ್ರನಿದ್ದ. ಜೈಲು ಸೇರಿದ ದಿನವೇ ಗಾಯದ ಸಮಸ್ಯೆ ಹೆಚ್ಚಾಗಿ, ನರಳಾಟ ಅನುಭವಿಸಿದ್ದ. ಇದರಿಂದ ಆರೋಗ್ಯದಲ್ಲಿ ಏರುಪೇರಾಗಿ ಇಂದು ಗಜೇಂದ್ರ ಸಾವನ್ನಪ್ಪಿದ್ದಾನೆ.

ಈ ಗಜೇಂದ್ರ @ಡಾಲಿ ವಿರುದ್ಧ 30ಕ್ಕೂ ಹೆಚ್ಚು ಕೇಸ್​ಗಳು ದಾಖಲಾಗಿವೆ. ಕೆಪಿ ಅಗ್ರಹಾರ ನಿವಾಸಿಯಾಗಿದ್ದ ಗಜೇಂದ್ರ, ಸರಗಳ್ಳತನ, ದರೋಡೆ, ಚೈನ್ ಸ್ನ್ಯಾಚ್ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ೨೦ದಿನಗಳ ಹಿಂದಷ್ಟೆ ಜೈಲಿನಿಂದ ಬಿಡುಗಡೆಯಾಗಿದ್ದ ಡಾಲಿ, ಬಿಡುಗಡೆಯಾದ ದಿನವೇ ಆರು ಸರಗಳ್ಳತನ ಕೃತ್ಯ ಎಸಗಿ ಎಸ್ಕೇಪ್ ಆಗಿದ್ದ, ಬಳಿಕ ಇದೇ ತಿಂಗಳ 12ರಂದು ಮೂರು ಸರಗಳ್ಳತನ ಕೃತ್ಯ ಮಾಡಿ, ಚಂದ್ರಾಲೇಔಟ್​ ಪೊಲೀಸ್ರಿಂದ ಗಜೇಂದ್ರ ಸಿಕ್ಕಿಬಿದ್ದಿದ್ದ.

Source: newsfirstlive.com Source link