ಮತ್ತೆ ಶೂಟಿಂಗ್ ಶುರು ಮಾಡಲಿರೋ ‘ಕಬ್ಜ’ ಟೀಮ್! ಚಿತ್ರತಂಡಕ್ಕೆ ಕಾಲಿಡ್ತಿದ್ದಾರೆ ‘ಕಿಚ್ಚ’

ಮತ್ತೆ ಶೂಟಿಂಗ್ ಶುರು ಮಾಡಲಿರೋ ‘ಕಬ್ಜ’ ಟೀಮ್! ಚಿತ್ರತಂಡಕ್ಕೆ ಕಾಲಿಡ್ತಿದ್ದಾರೆ ‘ಕಿಚ್ಚ’

ಮುಂಗಾರು ಮಳೆ ಸಿನಿಮಾ ಕನ್ನಡದ ನೆಲದ ದಾಖಲೆಯ ಸಿನಿಮಾ.. ಮುಂಗಾರು ಮಳೆ ಸ್ಯಾಂಡಲ್​​ವುಡ್ ಭೂಮಿಗೆ ಬಿದ್ದ ನಂತರ ಅನೇಕ ಅನೇಕ ಹೊಸ ಹೊಸ ಪ್ರತಿಭೆಗಳು ಕನ್ನಡ ಸಿನಿ ಅಂಗಳದಲ್ಲಿ ಅರಳಿ ಬೆಳ್ಳಿತೆರೆಯನ್ನ ಬೆಳಗುತ್ತಿದ್ದಾರೆ.. ಅದರಂತೆ ಬೆಂಗಳೂರಿನ ಸಾಗರ್ ಥಿಯೇಟರ್​​ನಲ್ಲಿ ಮುಂಗಾರು ಮಳೆ ಸಿನಿಮಾವನ್ನ ಹತ್ತಾರು ಬಾರಿ ನೋಡಿ ಸ್ಕ್ರೀಪ್ಟ್ ಬರೆದು ನಾನು ಡೈರೆಕ್ಟರ್ ಆಗ್ಲೇ ಬೇಕು ಶಪಥ ಮಾಡಿದವರು ಆರ್​.ಚಂದ್ರು.. ಇಂದು ಚಂದ್ರು ಬರಿ ನಿರ್ದೇಶಕ ಮಾತ್ರ ಅಲ್ಲ ಬಿಗ್ ಸಿನಿಮಾಗಳು ನಿರ್ಮಾಪಕ ಕೂಡ ಹೌದು.

blank

ಲವ್ ಯೂ ಸಿನಿಮಾದ ಸೂಪರ್ ಸಕ್ಸಸ್​​ ನಂತರ ಉಪೇಂದ್ರ ಅವರ ಜೊತೆ ಹತ್ತು ಹೆಜ್ಜೆ ಮುಂದೆ ಇಟ್ಟು ಕಬ್ಜ ಸಿನಿಮಾವನ್ನ ಮಾಡಲು ಮುಂದಾಗಿದ್ದಾರೆ ಆರ್​.ಚಂದ್ರು.. ಕೊರೊನಾ-ಲಾಕ್ ಡೌನ್ ಆಗದೇ ಇದ್ದಿದ್ರೇ ಇಷ್ಟೊತ್ತಿಗಾಗಲೇ ಕಬ್ಜ ಸಿನಿಮಾದ ಶೂಟಿಂಗ್ ಮುಗಿದು ಎಡಿಟಿಂಗ್ ಡಬ್ಬಿಂಗ್ ಅಂತೆಲ್ಲ ಕೆಲಸ ಕಾರ್ಯಗಳ ಆಗಬೇಕಿತ್ತು.. ಎರಡೆರಡು ಲಾಕ್ ಡೌನ್ ಎದುರಿಸಿರುವ ಕಬ್ಜ ಸಿನಿಮಾ ತಂಡ ಮತ್ತೆ ಫುಲ್ ಫ್ಲೆಡ್ಜ್ ಆಗಿ ಶೂಟಿಂಗ್ ಅಡ್ಡಕ್ಕೆ ಇಳಿಸಿದೆ.. ಈ ಹಿಂದೆ ಹಾಕಿದ ಸೆಟ್​​ ಮಳೆ ಬಿಸಿನಿಲಿನಿಂದ ಹಾಳಾಗಿದ್ದ ಕಾರಣ ಪೂರ್ಣ ಪ್ರಾಮಾಣದಲ್ಲಿ ಮತ್ತೆ ಸೆಟ್​​​ಗಳನ್ನ ಸಿದ್ದ ಪಡಿಸಿ ಶೂಟಿಂಗ್ ಅಡ್ಡಕ್ಕೆ ಇಳಿಯಲು ಕಬ್ಜ ಫಿಲ್ಮ್ ಟೀಮ್ ಹೆಜ್ಜೆ ಇಟ್ಟಿದೆ.

blank

ಈ ಸೋಮವಾರದಿಂದ ಕಬ್ಜ ಫಿಲ್ಮ್ ಶೂಟಿಂಗ್ ಶುರು. ಹೈದ್ರಾಬಾದ್​​ನಲ್ಲಿ ದೊಡ್ಡ ಮಟ್ಟದ ಸೆಟ್ ನಿರ್ಮಿಸಿರೋ ಆರ್.ಚಂದ್ರು ಬಳಗ ಆಲ್ ಮೋಸ್ಟ್ ಆಲ್ ಹೈದ್ರಾಬಾದ್​ನಲ್ಲೇ ಕಬ್ಜ ಫಿಲ್ಮ್ ಶೂಟಿಂಗ್​​ ಮುಗಿಸೋ ಯೋಜನೆ ರೂಪಿಸಿದೆ.. ಕಬ್ಜ ತಂಡ ಹೈದ್ರಾಬಾದ್​ಗೆ ತೆರಳಿದಾಗ ಕಬ್ಜ ತಂಡವನ್ನ ಕೂಡಿಕೊಳ್ಳಲಿದ್ದಾರೆ ಕಿಚ್ಚ..ಕಿಚ್ಚ ಸುದೀಪ್.. ಸದ್ಯ ವಿಕ್ರಾಂತ್ ರೋಣ ಸಿನಿಮಾವನ್ನ ಮುಗಿಸಿ ಹೊಸ ಸಿನಿಮಾದ ಕಡೆ ದೃಷ್ಠಿನೆಟ್ಟಿದ್ದಾರೆ.. ಕಬ್ಜ ದಲ್ಲಿ ಕಿಚ್ಚ ಸುದೀಪ್ ಅವರ ಪಾತ್ರ ಖಡಕ್ ಆಗಿದೆ.. ಈ ಕಾರಣಕ್ಕೆ ಸುದೀಪ್ ಅತಿಥಿ ಪಾತ್ರವನ್ನ ಒಪ್ಪಿಕೊಂಡಿರೋದಂತೆ.. ಈಗಾಗಲೇ ಸುದೀಪ್​​ ಲುಕ್​ನಿಂದ ಗಮನ ಸೇಳೆಯುವಲ್ಲಿ ಕಬ್ಜ ಟೀಮ್ ಗೆದ್ದಿದೆ.. ಸುದೀಪ್ ಸೆಪ್ಟೆಂಬರ್ ಮೂರನೇ ವಾರದಿಂದ ಕಬ್ಬ ಸಿನಿಮಾ ಶೂಟಿಂಗ್​​ನಲ್ಲಿ ಪಾಲ್ಗೊಳಲಿದ್ದಾರೆ.

 

Source: newsfirstlive.com Source link