ಗಾಡಿ ಕೊಂಡೊಯ್ಯಲು ಬಂದ ಟೋಯಿಂಗ್​​ ಸಿಬ್ಬಂದಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು

ಗಾಡಿ ಕೊಂಡೊಯ್ಯಲು ಬಂದ ಟೋಯಿಂಗ್​​ ಸಿಬ್ಬಂದಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು

ಬೆಂಗಳೂರು: ಸಾರ್ವಜನಿಕರು ಟೋಯಿಂಗ್ ಸಿಬ್ಬಂದಿಯೊಂದಿಗೆ ಜಗಳ ಮಾಡಿ ಹಲ್ಲೆ ನಡೆಸಿರುವ ಘಟನೆ ಇಂದಿರಾನಗರ ಮೆಟ್ರೋ ಸ್ಟೇಷನ್ ಬಳಿ ನಡೆದಿದೆ. ಪಾರ್ಕಿಂಗ್​​​ನಲ್ಲಿ ನಿಲ್ಲಿಸಿದ್ದ ವಾಹನಗಳನ್ನ ಕೊಂಡೊಯ್ಯಲು ಟೋಯಿಂಗ್ ಸಿಬ್ಬಂದಿ ಮುಂದಾದಾಗ  ಸಾರ್ವಜನಿಕರು ಹಲ್ಲೆ ಮಾಡಿದ ವಿಡಿಯೋ ವೈರಲ್​​ ಆಗಿದೆ.

ಪಾರ್ಕಿಂಗ್​​​ನಲ್ಲಿದ್ದ ವಾಹನಗಳನ್ನ ಕೊಂಡೊಯ್ಯಲು ಟೋಯಿಂಗ್ ಸಿಬ್ಬಂದಿ ಮುಂದಾದ ಕೂಡಲೇ ಜನರು ತಡೆದು ಬಿಡುವುದಿಲ್ಲ ಅಂತಾ ಪಟ್ಟುಹಿಡಿದಿದ್ದಾರೆ. ಅಲ್ಲದೇ, ಏಕಾಏಕಿ ಸಂಚಾರಿ ಪೊಲೀಸರ ವಿರುದ್ಧ ಮುಗಿಬಿದ್ದಿದ್ದಾರೆ.

ಇನ್ನು, ಸಾರ್ವಜನಿಕರು ಟೋಯಿಂಗ್ ಸಿಬ್ಬಂದಿಗೆ ಹೊಡೆದು ಸ್ಥಳದಿಂದ ಓಡಿಸಿದ್ದಾರೆ. ಘಟನಾ ಸಂಬಂಧ ಇಂದಿರಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ತಾಲಿಬಾನ್​​ ವಿರುದ್ಧ ಹೋರಾಟಕ್ಕೆ ಶಸ್ತ್ರಾಸ್ತ್ರ ಒದಗಿಸಿ; ಪಂಜ್​ಶೀರ್ ಹೋರಾಟಗಾರನ ಪುತ್ರ ಮನವಿ

Source: newsfirstlive.com Source link