ರಮೇಶ್​​ ಜಾರಕಿಹೊಳಿ ಸಿಡಿ ಕೇಸ್​​: ಶ್ರೀರಾಮುಲು ಮತ್ತು ಸತೀಶ್​​​ ಜಾರಕಿಹೊಳಿ ನಡುವೆ ನಡೆದ ಚರ್ಚೆಯೇನು?

ರಮೇಶ್​​ ಜಾರಕಿಹೊಳಿ ಸಿಡಿ ಕೇಸ್​​: ಶ್ರೀರಾಮುಲು ಮತ್ತು ಸತೀಶ್​​​ ಜಾರಕಿಹೊಳಿ ನಡುವೆ ನಡೆದ ಚರ್ಚೆಯೇನು?

ಬೆಂಗಳೂರು: ಎಸ್​​ಟಿ ಮೀಸಲಾತಿ ವಿಚಾರದ ಬಗ್ಗೆ ಚರ್ಚಿಸಲು ಮಾಜಿ ಸಚಿವ ಸತೀಶ್​​ ಜಾರಕಿಹೊಳಿ ಮತ್ತು ಸಾರಿಗೆ ಬಿ. ಶ್ರೀರಾಮುಲು ಸಿಎಂ ಬಸವರಾಜ್​​ ನೇತೃತ್ವದ ಸಭೆಗೆ ಆಗಮಿಸಿದ್ದರು. ಸಭೆ ಆರಂಭಕ್ಕೂ ಮುನ್ನ ಸುಮಾರು ಹತ್ತು ನಿಮಿಷಗಳ ಕಾಲ ಮಾಜಿ ಸಚಿವ ರಮೇಶ್​​ ಜಾರಕಿಹೊಳಿ ಸಿಡಿ ಪ್ರಕರಣದ ಬಗ್ಗೆ ಸತೀಶ್​​ ಜಾರಕಿಹೊಳಿ ಜತೆ ಬಿ. ಶ್ರೀರಾಮುಲು ಮಾತಾಡಿದ್ದಾರೆ. ಈ ವೇಳೆ ಹಲವರು ವಿಚಾರಗಳನ್ನು ಚರ್ಚೆ ಮಾಡಲಾಗಿದೆ ಎನ್ನಲಾಗಿದೆ.

ಹೇಗಿದ್ದೀರಿ ಸತೀಶಣ್ಣಾ? ಎಂದು ಮಾತುಕತೆ ಆರಂಭಿಸಿದ ರಾಮುಲು‌, ರಮೇಶ್​​ ಜಾರಕಿಹೊಳಿ ಬಗ್ಗೆ ಮಾತಾಡಿದ್ದಾರೆ. ರಮೇಶಣ್ಣಾ, ನಾವು ಅಧಿಕಾರಿಕ್ಕೆ ಬರಲು ಕಾರಣ. ಅವರ ವಿರುದ್ಧ ಇಂದು ಆರೋಪ ಕೇಳಿ ಬಂದಿದೆ. ಇನ್ನು ಈ ಆರೋಪದಿಂದ ರಮೇಶಣ್ಣಾ ಮುಕ್ತನಾಗಿಲ್ಲ. ಇದೊಂದು ಹನಿಟ್ರ್ಯಾಪ್ ಪ್ರಕರಣ ಎಂಬುದು ತಿಳಿದಿದೆ. ಮುಂದೆ ಏನು ಮಾಡ್ತಾರಂತೆ ರಮೇಶಣ್ಣಾ? ನಿಮ್ಮ ಬಳಿ ಚರ್ಚೆ ಮಾಡಿದ್ದಾರಾ? ಎಂದು ಪ್ರಶ್ನಿಸಿದ್ದಾರಂತೆ.

ಶ್ರೀರಾಮುಲು ಮಾತಿಗೆ ನಯವಾಗಿ ಉತ್ತರಿಸಿದ ಸತೀಶ್ ಜಾರಕಿಹೊಳಿ, ಈ ಕೇಸಿನಿಂದ ನಮ್ಮ ಕುಟುಂಬದ ಮರ್ಯಾದೆ ಹೋಗಿದೆ. ರಾಜಕಾರಣ ಸೇರಿದಂತೆ ಇಡೀ ಜಿಲ್ಲೆಯಲ್ಲಿ ಒಳ್ಳೆಯ ಹೆಸರಿತ್ತು. ಈ ಒಂದು ಪ್ರಕರಣ ನಮ್ಮ ಕುಟುಂಬಕ್ಕೆ ಕಳಂಕ ತಂದಿದೆ. ರಮೇಶ್ ಸದ್ಯ ಗೋಕಾಕ್‌ನಲ್ಲಿದ್ದಾರೆ. ಸರ್ಕಾರ ತರುವುದಕ್ಕೆ ಕಷ್ಟಪಟ್ಟು ಸಹಾಯ ಮಾಡಿದ್ದು ನಿಜ. ಆದರೆ, ಈ ಪ್ರಕರಣದಲ್ಲಿ ಅವನು ಸಿಲುಕಿದ್ದು ನಿಜಕ್ಕೂ ನೋವು ತಂದಿದೆ ಎಂದಿದ್ದಾರಂತೆ.

ಇದನ್ನೂ ಓದಿ: ಅಫ್ಘಾನಿಸ್ತಾನದ ನೂತನ ತಾಲಿಬಾನ್ ಸರ್ಕಾರಕ್ಕೆ ಸಾಲ ನೀಡಲು ಸಾಧ್ಯವಿಲ್ಲ; ಐಎಂಎಫ್

ಹೀಗೆ ಮುಂದುವರಿದ ಸತೀಶ್​ ಜಾರಕಿಹೊಳಿ, ನಾವು ಸಂಪಾದನೆ ಮಾಡಿದ ಹೆಸರು ಇಂದು ಹಾಳಾಗಿದೆ. ಈಗ ನಾವು ಹೇಗೆ ಮತ್ತೆ ಕ್ಯಾಬಿನೆಟ್​​ಗೆ ಸೇರ್ಪಡೆ ಮಾಡಿಕೊಳ್ಳಿ ಎಂದು ಕೇಳಲು ಸಾಧ್ಯ. ಸದ್ಯ ಪ್ರಕರಣ ಕೋರ್ಟ್ ಅಂಗಳದಲ್ಲಿದೆ. ಬಾಲಚಂದ್ರ ಎಲ್ಲಾ ಕೋರ್ಟ್ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾನೆ. ಈ ಪ್ರಕರಣದಿಂದ ರಮೇಶ್ ಬೇಗ ಮುಕ್ತನಾಗಲಿ ಎಂದಷ್ಟೇ ನಾವು ಕೇಳಿಕೊಳ್ಳಬಹುದು ಎಂದು ಬೇಸರ ವ್ಯಕ್ತಪಡಿಸಿದರಂತೆ. ದೇವರ ಮೊರೆ ಹೋಗೋದು ಬಿಟ್ಟರೆ ನಮ್ಮ ಮುಂದೇನು ಇಲ್ಲ ಎಂದ ಸತೀಶ್​​ ಜಾರಕಿಹೊಳಿಗೆ, ಆಗಲಿ ಅಣ್ಣ ಎಂದು ಶ್ರೀರಾಮುಲು ಸಭೆಗೆ ಹೊರಟಿದ್ದಾರೆ.

Source: newsfirstlive.com Source link