ಕತ್ರಿನಾ ಕೈಫ್​​ ಜತೆ ತನ್ನ ಮಗನ ಎಂಗೇಜ್ಮೆಂಟ್​​​ ಬಗ್ಗೆ ನಟ ವಿಕಿ ಕೌಶಲ್ ತಂದೆ ಹೇಳಿದ್ದೇನು?

ಕತ್ರಿನಾ ಕೈಫ್​​ ಜತೆ ತನ್ನ ಮಗನ ಎಂಗೇಜ್ಮೆಂಟ್​​​ ಬಗ್ಗೆ ನಟ ವಿಕಿ ಕೌಶಲ್ ತಂದೆ ಹೇಳಿದ್ದೇನು?

ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಕತ್ರಿನಾ ಕೈಫ್ ಮತ್ತು ವಿಕಿ ಕೌಶಲ್ ಅವರ ನಿಶ್ಚಿತಾರ್ಥದ ವದಂತಿ ಬಗ್ಗೆ ಸಿಕ್ಕಾಪಟ್ಟೆ ವೈರಲ್​​ ಆಗಿದೆ. ಅದೇನ್​ ಮೀಮ್​ಗಳು, ಅದೇನ್​ ಫೋಟೋಗಳು, ಸೋಷಿಯಲ್​ ಮೀಡಿಯಾ ತುಂಬಾ ಅದೇ ಸುದ್ದಿಯಿದೆ. ಇದೀಗ, ಈ ಸುದ್ದಿಗೆ ಸಂಬಂಧಪಟ್ಟಂತೆ, ವಿಕಿ ಕೌಶಲ್​ ತಂದೆ ಉತ್ತರ ನೀಡಿದ್ದಾರೆ.

ಕತ್ರಿನಾ ಈ ಹಿಂದೆ ಸಲ್ಮಾನ್ ಖಾನ್ ಜೊತೆಗಿನ ಡೇಟಿಂಗ್ ಮೂಲಕ ಸುದ್ದಿಯಲ್ಲಿದ್ದರು. ಆದರೆ ಈಗ ಅವರು ವಿಕ್ಕಿ ಕೌಶಾಲ್ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನುವ ಮಾತುಗಳು ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿವೆ. ಆದರೆ ಈಗ ಕತ್ರಿನಾ ತಂಡವು ಯಾವುದೇ ರಹಸ್ಯ ರೋಕಾ ಸಮಾರಂಭದ ವರದಿಗಳನ್ನು ನಿರಾಕರಿಸಿದೆ.

ಇನ್ನೊಂದೆಡೆಗೆ ವಿಕ್ಕಿ ತಂದೆ ಶಾಮ್ ಕೌಶಾಲ್ ಕೂಡ ಈ ಸುದ್ದಿಯನ್ನು ನಿರಾಕರಿಸಿದ್ದಾರೆ. ನಟ- ನಟಿಯರಿಬ್ಬರೂ ತಮ್ಮ ಡೇಟಿಂಗ್​ ಬಗ್ಗೆ ಸಾಕಷ್ಟು ರಹಸ್ಯವಾಗಿದ್ದರೂ, ಇಂಥ ಸುದ್ದಿಗಳು ಸಿಕ್ಕಾಪಟ್ಟೆ ಹರಿದಾಡಲು ಶುರುವಾಗ್ಬಿಟ್ಟಿದೆ. ಇದೀಗ, ಈ ಸುದ್ದಿ ಬಗ್ಗೆ ವಿಕ್ಕಿ ಕೌಶಲ್​ ತಂದೆ, ಇಂಥವೆಲ್ಲಾ ಏನೂ ಇಲ್ಲ ಅಂತ ಹೇಳೋ ಮೂಲಕ ,ಸುದ್ದಿಯನ್ನ ಸೈಡ್​ಗೆ ತಳ್ಳಿದ್ದಾರೆ.

Source: newsfirstlive.com Source link