ಅನುಷ್ಕಾ ಬಿಟ್ಟು ‘ರೌಡಿ ಬೇಬಿ’ ಹಿಂದೆ ಬಿದ್ರು ಕನ್ನಡದ ಸ್ಟಾರ್ ನಿರ್ದೇಶಕ

ಅನುಷ್ಕಾ ಬಿಟ್ಟು ‘ರೌಡಿ ಬೇಬಿ’ ಹಿಂದೆ ಬಿದ್ರು ಕನ್ನಡದ ಸ್ಟಾರ್ ನಿರ್ದೇಶಕ

ಸಾಯಿ ಪಲ್ಲವಿ..ಸೌಥ್ ಸಿನಿ ದುನಿಯಾ ಸ್ಟಾರ್ ನಟಿಮಣಿ..ಈಕೆಯ ಅಂದ ಅರ್ಧ ಕೆಜಿ ಇದ್ರೆ ಈಕೆಯ ನಟನೆಯ ಚೆಂದ ನೂರು ಕೇಜಿ.. ಅದ್ಭುತ ನೈಜ ಅಭಿನಯದಿಂದ ಸೌಥ್ ಇಂಡಿಯಾ ಫೇಮಸ್ ಆಗಿರೋ ಸಾಯಿ ಪಲ್ಲವಿ ಕನ್ನಡ ಚಿತ್ರರಂಗಕ್ಕೆ ಕರೆತರಲು ನಿರ್ದೇಶಕರೊಬ್ಬರಬ್ಬರು ಕಸರತ್ತು ಶುರು ಮಾಡಿದ್ದಾರೆ.

ಸೌಥ್ ಸಿನಿ ದುನಿಯಾದ ನಟಿಮಣಿಯರ ದಾರಿ ಅವರ ಸ್ಟೋರಿ ಒಂದೊಂದು ರೀತಿ ಇದ್ರೆ, ನಟಿ ಸಾಯಿ ಪಲ್ಲವಿಯವರ ದಾರಿ ಆ ದಾರಿಯ ದಾಖಲೆಯ ಸ್ಟೋರಿನೇ ಬೇರೆ. ಅದೆಂತಹ ಪಾತ್ರವೇ ಬರ್ಲಿ ಆ ಪಾತ್ರವೇ ಸೋತು ಸುಣ್ಣವಾಗಬೇಕು ಅಂತಹ ಅಭಿನೇತ್ರಿ ಸಾಯಿ ಪಲ್ಲವಿ.. ಗ್ಲಾಮರ್ ಇಲ್ಲ.. ರೂಪ್ ಇಲ್ಲ , ಶೇಪ್ ಇಲ್ಲ , ಎಕ್ಸ್​​ಪೋಸ್ ಅಂತು ಮೊದ್ಲೇ ಇಲ್ಲ.. ಆದ್ರೂ ಈಕೆಯ ಸಿನಿಮಾ ಅಂದ್ರೆ ಜನಮನ ಹುಚ್ಚೆದು ಕುಣಿಯುತ್ತೆ.. ಥಟ್ ಈಸ್ ಸೌಥ್ ಸಿನಿ ದುನಿಯಾದ ರೌಡಿ ಬೇಬಿ ಸಾಯಿ ಪಲ್ಲವಿ ಹವಾ ಮತ್ತು ಹವಮಾನ.

blank

ರೌಡಿ ಬೇಬಿ ಹಿಂದೆ ಬಿದ್ದಿರುವ ಕನ್ನಡದ ನಿರ್ದೇಶಕನ್ಯಾರು..?
ಮಲಯಾಳಂ , ತೆಲುಗು, ತಮಿಳು ಸಿನಿಮಾಗಳಲ್ಲಿ ಮಿಂಚೋ ಸಾಯಿ ಪಲ್ಲವಿಯವರನ್ನ ಕನ್ನಡಕ್ಕೆ ಕರೆತರೋಕೆ ಈಗಾಗಲೇ ಅನೇಕ ಸ್ಯಾಂಡಲ್​ವುಡ್ ಸಿನಿ ಮುಖಂಡರು ಪ್ರಯತ್ನಿಸಿದ್ದಾರೆ. ಆದ್ರೆ ಇನ್ನೂ ಇನ್ನು ಕೂಡ ಆಗಿಲ್ಲ.. ಬಟ್ ಈಗ ಒಂದು ಸುದ್ದಿ ಸಮಾಚಾರ ಗಾಂಧಿನಗರದಿಂದ ವಿಜಯನಗರ ನಾಗರಭಾವಿ ತನಕ ಹಬ್ಬಿದೆ. ಸಾಯಿ ಪಲ್ಲವಿ ಅವರಿಗೆ ಕನ್ನಡದ ರಾಷ್ಟ್ರ ಪಶಸ್ತಿ ವಿಜೇತ ಸಿನಿಮಾಗಳ ನಿರ್ದೇಶಕ ಅಭಿನಯ ಮಾಡಲು ಅಪ್ರೌಚ್ ಮಾಡಿದ್ದಾರಂತೆ. ಕಥೆ ಕೇಳಿ ಸಾಯಿ ಪಲ್ಲವಿ ಲಕ ಲಕ ಲವ್ಲಿ ಆದಷ್ಟು ಬೇಗ ಫುಲ್ ಸ್ಕ್ರೀಪ್ಟ್ ಕಳುಹಿಸಿ ಇಲ್ಲಿ ಎಂದಿದ್ದಾರಂತೆ.. ಹಾಗಾದ್ರೆ ಯಾರು ಆ ಡೈರೆಕ್ಟರ್ ಅನ್ನೋ ಪ್ರಶ್ನೆಗೆ ಉತ್ತರ ಮಂಸೋರೆ.

blankನಮ್ಮ ಕನ್ನಡದ ಹೆಮ್ಮೆಯ ನಟ ಸಂಚಾರಿ ವಿಜಯ್ ಅವರ ಕ್ಲೋಸ್ ಫ್ರೇಂಡು, ಹರಿವು , ನಾತಿಚರಾಮಿ ಅವಾರ್ಡ್ ವಿನ್ನಿಂಗ್ ಸಿನಿಮಾಗಳ ನಿರ್ದೇಶಕ ಮಂಸೋರೆ ನಿರ್ದೇಶನ ಹೊಸ ಸಿನಿಮಾಕ್ಕೆ ಸಾಯಿ ಪಲ್ಲವಿ ಅವರಿಗೆ ಹೀರೋಯಿನ್ ಆಗಲು ಅಪ್ರೌಚ್ ಮಾಡಿದ್ದಾರಂತೆ ಮಂಸೋರೆ.. ಕಥೆ ಓಕೆ ಎಂದಿರೋ ಸಾಯಿ ಪಲ್ಲವಿ ಫುಲ್ ಬಾಂಡ್ ಸ್ಕ್ರೀಪ್ಟ್ ಕಳುಹಿಸಿ ಎಂದಿದ್ದಾರಂತೆ.

ಅನುಷ್ಕಾ ಬಿಟ್ಟು ಪಲ್ಲವಿ ಹಿಂದೆ ಹೊರಟ ಮಂಸೋರೆ..!
ಕಳೆದ ವರ್ಷ ಲಾಕ್ ಡೌನ್ ಓಪನ್ ಆಗುತ್ತಿದಂಗೆ ಆಕ್ಟ್ – 1978 ಸಿನಿಮಾದ ಮೂಲಕ ಪ್ರೇಕ್ಷಕರನ್ನ ರಂಜಿಸಿದ್ದರು ಮಂಸೋರೆ.. ಆಕ್ಟ್ -1978 ಸಿನಿಮಾ ಯಶಸ್ಸಿನ ನಂತರ ಅಬ್ಬಕ್ಕ ಅನ್ನೋ ಬಿಗ್ ಬಜೇಟ್ ಸಿನಿಮಾ ಮಾಡುವುದಾಗಿ ಘೋಷಿಸಿದ್ರು. ಅಬ್ಬಕ್ಕನ ಪಾತ್ರದಲ್ಲಿ ಟಾಲಿವುಡ್ ಸ್ವೀಟಿ ಅನುಷ್ಕಾ ಶೆಟ್ಟಿ ಅವರನ್ನ ಕರೆತಂದು ಪಾರ್ಟ್ ಮಾಡಿಸ ಬೇಕು ಅನ್ನೋ ಕಲ್ಪನೆಯಲ್ಲಿದ್ರು ಮಂಸೋರೆ.. ಆದ್ರೆ ಅಬ್ಬಕ್ಕನ ಕಥೆಯನ್ನ ಸೈಡಿಗಿಟ್ಟು ರಾಜಕೀಯ ಹೈ ಡ್ರಾಮಾ ಕಥೆಯೊಂದನ್ನ ಕನ್ನಡ ಪ್ರೇಕ್ಷಕರ ಮುಂದೆ ತೋರಿಸಬೇಕು ಅನ್ನೋ ಕಲ್ಪನೆಯಲ್ಲಿ ಕಥೆ ಸಿದ್ದ ಪಡಿಸಿದ್ದಾರೆ ಮಂಸೋರೆ. ಈ ಸಿನಿಮಾಕ್ಕೆ ಸಾಯಿ ಪಲ್ಲವಿ ಅವರನ್ನ ಕರೆತರಬೇಕು ಎಂದು ಮುಂದಾಗಿದ್ದಾರೆ ಅವಾರ್ಡ್ ವಿನ್ನಿಂಗ್​ ಡೈರೆಕ್ಟರ್.

ಈಗಾಗಲೇ ಕಥೆಯನ್ನ ಒಂದು ಬಾರಿ ಕೇಳಿರುವ ನಟಿ ಸಾಯಿ ಪಲ್ಲವಿ ಅವರಿಗೆ ಫುಲ್ ಸ್ಕ್ರೀಪ್ಟ್ ಅನ್ನ ಕಳೆಸುವ ಕಾರ್ಯದಲ್ಲಿ ಮಂಸೋರೆ ಇದ್ದಾರೆ. ಮೊನ್ ಮೊನ್ನೆ ಸಂಸಾರ ಜೀವನಕ್ಕೆ ಕಾಲಿಟ್ಟ ಮಂಸೋರೆ ಶೀಘ್ರದಲ್ಲೇ ಹೊಸ ಸಿನಿಮಾದ ಮೂಲಕ ಪ್ರೇಕ್ಷಕರನ್ನ ರಂಜಿಸಲು ಸಜ್ಜಾಗುತ್ತಿದ್ದಾರೆ.

blank

Source: newsfirstlive.com Source link