ಯುಎಸ್​​​​ ಕ್ಯಾಪಿಟೊಲ್ ಪ್ರದೇಶದಲ್ಲಿ ಬಾಂಬ್​ ಬೆದರಿಕೆ; ಕಾಂಗ್ರೆಸ್​ ಲೈಬ್ರೇರಿ ಸುತ್ತ ಬಿಗಿ ಪೊಲೀಸ್​​ ಭದ್ರತೆ

ಯುಎಸ್​​​​ ಕ್ಯಾಪಿಟೊಲ್ ಪ್ರದೇಶದಲ್ಲಿ ಬಾಂಬ್​ ಬೆದರಿಕೆ; ಕಾಂಗ್ರೆಸ್​ ಲೈಬ್ರೇರಿ ಸುತ್ತ ಬಿಗಿ ಪೊಲೀಸ್​​ ಭದ್ರತೆ

ವಾಷಿಂಗ್ಟನ್: ಅಮೆರಿಕದ ಜನಪ್ರತಿನಿಧಿಗಳ ಸಭೆ ನಡೆಯುವ ವಾಷಿಂಗ್ಟನ್​ನ ಕ್ಯಾಪಿಟೊಲ್ ಪ್ರದೇಶದಲ್ಲಿ ಬಾಂಬ್ ಬೆದರಿಕೆ ಇದೆ ಎಂದು ಯುಎಸ್​​ ಪೊಲೀಸರು ತಿಳಿಸಿದ್ದಾರೆ. ಹಾಗಾಗಿ ಪತ್ರಕರ್ತರು ಸೇರಿದಂತೆ ಯಾರು ಕಾಂಗ್ರೆಸ್​ ಲೈಬ್ರೇರಿ ಸುತ್ತಮುತ್ತ ಓಡಾಡಬಾರದು ಎಂದು ಪೊಲೀಸರು ಟ್ವೀಟ್​​ ಮಾಡುವ ಮೂಲಕ ಮನವಿ ಮಾಡಿದ್ದಾರೆ.

ಕ್ಯಾಪಿಟೊಲ್ ಕಟ್ಟಡದ ಸಮೀಪ ಅನುಮಾನಾಸ್ಪದ ವಾಹನ ನಿಂತಿದೆ ಎಂದು ಪೊಲೀಸರು ತಕ್ಷಣವೇ ಎಲ್ಲರಿಗೂ ಸಂದೇಶ ರವಾನಿಸಿದ್ದಾರೆ. ಅಲ್ಲದೇ ಈ ವಾಹನದಲ್ಲಿ ಸ್ಫೋಟಕಗಳು ಇರಬಹುದು ಎಂಬ ಶಂಕೆಯಿಂದ ತಪಾಸಣೆ ನಡೆಸಿದರು.

ಇನ್ನು, ಫೆಡೆರಲ್​​​ ಬ್ಯೂರೋ ಆಫ್​​​ ಇನ್ವೆಸ್ಟಿಗೇಶನ್​​​​​ ಏಜೆಂಟ್​ಗಳು ಸ್ಥಳಕ್ಕೆ ಧಾವಿಸಿದ್ದಾರೆ. ಎಫ್​ಬಿಐ ನೆರವಿನೊಂದಿಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಕಾಂಗ್ರೆಸ್​ನ ಮುಖ್ಯ ಕಟ್ಟಡದಿಂದ ಎಲ್ಲರನ್ನೂ ದೂರ ಕಳಿಸಲಾಗಿದೆ. ಬಿಗಿ ಪೊಲೀಸ್ ಭದ್ರತೆ ಆಯೋಜಿಸಲಾಗಿದೆ.

ಇದನ್ನೂ ಓದಿ: ರಮೇಶ್​​ ಜಾರಕಿಹೊಳಿ ಸಿಡಿ ಕೇಸ್​​: ಶ್ರೀರಾಮುಲು ಮತ್ತು ಸತೀಶ್​​​ ಜಾರಕಿಹೊಳಿ ನಡುವೆ ನಡೆದ ಚರ್ಚೆಯೇನು?

Source: newsfirstlive.com Source link