ಜನಾರ್ದನ ರೆಡ್ಡಿ ಮೇಲೆ ‘ವರ’ಮಹಾಲಕ್ಷ್ಮೀ ಕೃಪೆ -ಬಳ್ಳಾರಿ ಜೊತೆ ಅನಂತಪುರಂ, ಕಡಪಗೂ ಭೇಟಿಗೂ ಗ್ರೀನ್​​ ಸಿಗ್ನಲ್

ಜನಾರ್ದನ ರೆಡ್ಡಿ ಮೇಲೆ ‘ವರ’ಮಹಾಲಕ್ಷ್ಮೀ ಕೃಪೆ -ಬಳ್ಳಾರಿ ಜೊತೆ ಅನಂತಪುರಂ, ಕಡಪಗೂ ಭೇಟಿಗೂ ಗ್ರೀನ್​​ ಸಿಗ್ನಲ್

ಬಳ್ಳಾರಿ ಗಣಿಧಣಿಯ ದಶಕಗಳ ವ್ರತಕ್ಕೆ ತಾಯಿ ವರಮಹಾಲಕ್ಷ್ಮೀ ಫಲ ನೀಡಿದ್ದಾಳೆ. ಬರೋಬ್ಬರಿ 10 ವರ್ಷದ ಬಳಿಕ ಜನಾರ್ದನ ರೆಡ್ಡಿಗೆ ಬಳ್ಳಾರಿ ಜಿಲ್ಲೆ ಪ್ರವೇಶಕ್ಕೆ ಸುಪ್ರೀಂಕೋರ್ಟ್​ ಅನುಮತಿ ಕೊಟ್ಟಿದೆ. ಈ ಮೂಲಕ ವರ್ಷಾನುಗಟ್ಟಲೇ ಮಾಡಿದ್ದ ವಿಶೇಷ ತಪಸ್ಸಿಗೆ ಆ ದೇವಿ ತಥಾಸ್ತು ಎಂದಿದ್ದಾಳೆ.

ಗಾಲಿ ಜನಾರ್ದನ ರೆಡ್ಡಿ.. ಮಾಜಿ ಸಚಿವ, ಅಕ್ರಮ ಗಣಿ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿ ಸದ್ಯ ಹೊರಗಿದ್ದಾರೆ. ಆದರೆ ರೆಡ್ಡಿಗೆ ತವರು ಪ್ರವೇಶಕ್ಕೆ ಅವಕಾಶ ಸಿಗದೇ ಅನಾಥ ಭಾವದಲ್ಲಿದ್ರು. ಈಗ ಮಾಜಿ ಸಚಿವ ಜನಾರ್ದನ ರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಪುರಸ್ಕರಿಸಿದೆ. ಸಿಬಿಐ ಆಕ್ಷೇಪದ ನಡುವೆ ಗಾಲಿ ರೆಡ್ಡಿ ಬಳ್ಳಾರಿಗೆ ತೆರಳಲು ಕೋರ್ಟ್ ಅನುಮತಿ ನೀಡಿದೆ.

blank

ಬಳ್ಳಾರಿ ಜಿಲ್ಲೆ ಪ್ರವೇಶಕ್ಕೆ ರೆಡ್ಡಿಗೆ ವರ ಕರುಣಿಸಿದ ಲಕ್ಷ್ಮೀ!
8 ವಾರಗಳು ಗಣಿಯೂರಲ್ಲಿ ತಂಗಲು ಸುಪ್ರೀಂ ಸಮ್ಮತಿ
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಗಾಲಿ ರೆಡ್ಡಿಗೆ ಅವತ್ತು ಜಾಮೀನು ನೀಡುವಾಗ ಬಳ್ಳಾರಿ, ಕರ್ನೂಲ್ ಮತ್ತು ಅನಂತಪುರ ಜಿಲ್ಲೆಗಳಿಗೆ ಭೇಟಿ ನೀಡಬಾರದು ಅನ್ನೋ ಷರತ್ತು ಸುಪ್ರೀಂಕೋರ್ಟ್ ವಿಧಿಸಿತ್ತು.. ಹೀಗಾಗಿ, ಕೋರ್ಟ್ ಅನುಮತಿ ಇಲ್ಲದೆ ರೆಡ್ಡಿ ಬಳ್ಳಾರಿ ಪ್ರವೇಶ ಸಾಧ್ಯ ಇರಲಿಲ್ಲ.. ಸದ್ಯ ಗಾಲಿ ರೆಡ್ಡಿಗೆ 8 ವಾರಗಳ ಕಾಲ ಅನುಮತಿ ಸಿಕ್ಕಿದೆ.. ಅದು ಕೂಡಾ ಅವರ ಇಷ್ಟದ ವರಮಹಾಲಕ್ಷ್ಮೀ ಹಬ್ಬಕ್ಕೆ.

ರೆಡ್ಡಿ ಎಂಟ್ರಿಗೆ ‘ಸುಪ್ರೀಂ’ ಷರತ್ತು
ಸುಪ್ರೀಂಕೋರ್ಟ್​​ ಪ್ರಮುಖವಾಗಿ ಬಳ್ಳಾರಿ, ಅನಂತಪುರಂ, ಕಡಪಾಗೂ ಭೇಟಿ ನೀಡಬಹುದು ಅಂತ ಹೇಳಿದೆ. 8 ವಾರಗಳಲ್ಲಿ ಯಾವಾಗ ಬೇಕಾದ್ರೂ ಬರಬಹುದು ಭೇಟಿ ನೀಡಬಹುದು ಅಂತ ಒಪ್ಪಿಗೆ ನೀಡಿದೆ. ಆದರೆ ಬಳ್ಳಾರಿ ಜಿಲ್ಲೆಗೆ ಪ್ರವೇಶಿಸುವಾಗ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗೆ ಮಾಹಿತಿ ನೀಡಬೇಕು ಅಂತ ಸೂಚಿಸಿದೆ. ಅಲ್ಲದೆ, ಅಕ್ರಮ ಗಣಿ ಕೇಸ್​​​ನಲ್ಲಿ ಯಾವುದೇ ಸಾಕ್ಷ್ಯ ನಾಶ ಮಾಡುವಂತಿಲ್ಲ ಅಂತ ಆದೇಶದಲ್ಲಿ ಹೇಳಿದೆ.

ಜನಾರ್ದನ ರೆಡ್ಡಿಗೆ ಬಳ್ಳಾರಿಗೆ ಬರಲು ಅನುಮತಿ ಸಿಕ್ಕಿದ್ದು, ಆಪ್ತಮಿತ್ರ ಶ್ರೀರಾಮುಲುಗೆ ಸಂತಸ ಇಮ್ಮಡಿಸಿದೆ. ಬಹು ದಿನಗಳ ಬಳಿಕ ಬಳ್ಳಾರಿಗೆ ಬರ್ತಿದ್ದಾರೆ. ರಾಜಕೀಯ ಮತ್ತೆ ಬರೋ ವಿಚಾರವನ್ನ ಪಕ್ಷ ತೀರ್ಮಾನ ಮಾಡುತ್ತೆ ಎಂದಿದ್ದಾರೆ.

blank

ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಫಲಿಸಿತು ಮಾಡಿದ್ದ ವ್ರತ
ವರಮಹಾ ಲಕ್ಷ್ಮೀ ಹಬ್ಬ ರೆಡ್ಡಿಗೆ ಕುಟುಂಬದ ಪಾಲಿಗೆ ಶ್ರದ್ಧೆ ಭಕ್ತಿಯ ಹಬ್ಬ. ಪ್ರತಿ ವರ್ಷವೂ ಜನಾರ್ದನ ರೆಡ್ಡಿ ನಿವಾಸದಲ್ಲಿ ಮಹಾಲಕ್ಷ್ಮೀ ವ್ರತ ಮಾಡ್ತಾರೆ. ಶ್ರಾವಣ ಮಾಸದ ಶುಕ್ಲ ಪಕ್ಷದ 2ನೇ ಶುಕ್ರವಾರ ಜನಾರ್ದನ ರೆಡ್ಡಿ ವ್ರತ ಕೈಗೊಂಡಿದ್ದಾರೆ. ಈ ವ್ರತವೇ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಕೈಹಿಡಿದಿದೆ ಅನ್ನೋದು ಅವರ ಕುಟುಂಬದ ನಂಬಿಕೆ.

ಗಾಲಿ ರೆಡ್ಡಿಗೆ ಈ ಹಿಂದೆಯೂ ಎರಡು ದಿನಗಳ ಮಟ್ಟಿಗೆ ಬಳ್ಳಾರಿ ಭೇಟಿಗೆ ಅನುಮತಿ ನೀಡಲಾಗಿತ್ತು. ಶ್ರೀರಾಮುಲು ತಾಯಿ ಹೊನ್ನೂರಮ್ಮ ಅವರ ಪುಣ್ಯತಿಥಿಯ ಕಾರ್ಯದಲ್ಲಿ ರೆಡ್ಡಿ ಪಾಲ್ಗೊಂಡಿದ್ದರು. ಆದ್ರೆ, ಕಳೆದ ಹಲವು ಚುನಾವಣೆ ವೇಳೆ, ಬಳ್ಳಾರಿ ಗಡಿಯ ಆಸು ಪಾಸಿನಲ್ಲೇ ಓಡಾಡಿಕೊಂಡಿದ್ರು, ಕೋರ್ಟ್ ಆದೇಶ ಉಲ್ಲಂಘಿಸಿರಲಿಲ್ಲ.

Source: newsfirstlive.com Source link