ಬರೋಬ್ಬರಿ ₹10 ಕೋಟಿಗೆ ಹರಾಜಾಯ್ತು ₹1 ನಾಣ್ಯ -ನೀವು ಆಗ್ಬಹುದು ಕೋಟ್ಯಾಧಿಪತಿ

ಬರೋಬ್ಬರಿ ₹10 ಕೋಟಿಗೆ ಹರಾಜಾಯ್ತು ₹1 ನಾಣ್ಯ -ನೀವು ಆಗ್ಬಹುದು ಕೋಟ್ಯಾಧಿಪತಿ

ಹಳೆಯ ನಾಣ್ಯಗಳು ಹಾಗೂ ನೋಟುಗಳಿಗೆ ಆನ್​​ಲೈನ್​​​​ ಮಾರ್ಕೆಟ್​​ನಲ್ಲಿ ಭಾರೀ ಡಿಮ್ಯಾಂಡ್​​ ಇದೆ. ಹಲವರು ಭಾರೀ ಪ್ರಮಾಣದ ಹಣ ಕೊಟ್ಟು ಹಳೆ ಕಾಲದ ನಾಣ್ಯಗಳನ್ನು ಖರೀದಿ ಮಾಡಲು ಮುಂದೇ ಬರುತ್ತಿದ್ದಾರೆ. ಇತ್ತೀಚೆಗೆ 1 ರೂಪಾಯಿ ನಾಣ್ಯ ಹರಾಜಿನಲ್ಲಿ ಬರೋಬ್ಬರಿ 10 ಕೋಟಿ ರೂಪಾಯಿಗೆ ಮಾರಾಟವಾಗಿದೆ.

ಒಂದು ರೂಪಾಯಿ ನಾಣ್ಯ ಅಪರೂಪದ ನಾಣ್ಯವಾಗಿದ್ದು, ಇದನ್ನು 1885ರ ಬ್ರಿಟಿಷ್​​ ರಾಜ್​ ಇಂಡಿಯಾದಲ್ಲಿ ಟಂಕಿಸಲಾಗಿತ್ತು. ಸದ್ಯ ಈ ನಾಣ್ಯ ವ್ಯಕ್ತಿಯೊಬ್ಬರಿಗೆ ಭಾರೀ ಪ್ರಮಾಣದ ಮೊತ್ತದ ಹಣವನ್ನು ತಂದು ಕೊಟ್ಟಿದೆ. ನಿಮ್ಮ ಬಳಿಯೂ ಇಂತಹ ನಾಣ್ಯಗಳಿದ್ದರೇ, ನೀವು ಇವುಗಳನ್ನು ಮಾರಾಟ ಮಾಡಿ ಉತ್ತಮ ಮೊತ್ತವನ್ನು ಪಡೆಯಬಹುದಾಗಿದೆ.

ಆನ್​​ಲೈನ್​ನಲ್ಲಿ ಇಂತಹ ಪ್ರಾಚೀನ ಹಾಗೂ ವಿಶೇಷ ನಾಣ್ಯಗಳ ಮಾರಾಟಕ್ಕಾಗಿ ಕಾಯಿನ್​ ಬಜಾರ್​ ವೆಬ್​​ಸೈಟ್​ಗಳನ್ನು ತೆರೆಯಲಾಗಿದೆ. ನಿಮ್ಮ ಬಳಿ ನಾಣ್ಯ ಇಂತಹ ನಾಣ್ಯಗಳಿದ್ದರೇ ನೀವು ವೆಬ್​ತಾಣಕ್ಕೆ ಭೇಟಿ ಕೊಟ್ಟು ನಿಮ್ಮ ಹೆಸರು, ಇಮೇಲ್ ಐಡಿ ಹಾಗೂ ಮೊಬೈಲ್​​ ಸಂಖ್ಯೆಗಳೊಂದಿಗೆ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಆ ಬಳಿಕ ನಿಮ್ಮಲ್ಲಿರುವ ನಾಣ್ಯದ ಬಗೆಗಿನ ವಿವರಗಳನ್ನು ನೀವು ವೆಬ್​​ಸೈಟ್​ನಲ್ಲಿ ಹಂಚಿಕೊಂಡರೇ ಆಸಕ್ತಿ ಇರುವವರು ನಿಮ್ಮನ್ನು ನೇರವಾಗಿ ಸಂಪರ್ಕ ಮಾಡುತ್ತಾರೆ.

ಅಂದಹಾಗೇ, ಇಂತಹ ಘಟನೆ ನಡೆದಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಹಲವರು ಇದೇ ರೀತಿ ಹಣ ಪಡೆದುಕೊಂಡಿದ್ದಾರೆ. ಕೆಲ ದಿನಗಳ ನ್ಯೂಯಾರ್ಕ್​​ನಲ್ಲಿ ವ್ಯಕ್ತಿಯೊಬ್ಬರು 1933ರಲ್ಲಿ ಟಂಕಿಸಿದ್ದ ಯುಎಸ್​​ ಕಾಯಿನ್​​ಅನ್ನು ಬರೋಬ್ಬರಿ 18.9 ಮಿಲಿಯನ್ ಡಾಲರ್​​ (138 ಕೋಟಿ ರೂಪಾಯಿ)ಗೆ ಮಾರಾಟ ಮಾಡಿದ್ರು.

Source: newsfirstlive.com Source link