ಮತ್ತೊಂದು ಲುಕ್​ನಲ್ಲಿ ಕಾಣಿಸಿಕೊಂಡ ಧೋನಿ -ಈ ಹೊತ್ತಿನ ಟಾಪ್​​ 10 ಸುದ್ದಿಗಳ ಕ್ವಿಕ್​​ರೌಂಡಪ್

ಮತ್ತೊಂದು ಲುಕ್​ನಲ್ಲಿ ಕಾಣಿಸಿಕೊಂಡ ಧೋನಿ -ಈ ಹೊತ್ತಿನ ಟಾಪ್​​ 10 ಸುದ್ದಿಗಳ ಕ್ವಿಕ್​​ರೌಂಡಪ್

1. ನಾಡಿನಾದ್ಯಂತ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ

blank

ಇಂದು ನಾಡಿನಾದ್ಯಂತ ವರಮಹಾಲಕ್ಷ್ಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ವರ ಮಹಾಲಕ್ಷ್ಮಿ ಪೂಜೆ ಹಿನ್ನೆಲೆ ಹೂವು, ಹಣ್ಣು, ಬಾಳೆದಿಂಡಿನ ವ್ಯಾಪಾರ ಜೋರಾಗಿದೆ. ಆದ್ರೆ ಕೊರೊನಾದಿಂದಾಗಿ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಸುಪ್ರಸಿದ್ದ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಾಲಯದ ಬಾಗಿಲು ಬಂದ್ ಆಗಲಿದೆ. ದೇವಸ್ಥಾನದ ಅರ್ಚಕರು ಮಾತ್ರ ಮುಂಜಾನೆ 5 ಗಂಟೆಗೆ ಪೂಜೆ ನೇರವೇರಿಸಿ ಬಾಗಿಲು ಬಂದ್ ಮಾಡಲಿದ್ದಾರೆ. ಇಂದಿನಿಂದ ನಾಲ್ಕು ದಿನಗಳ ಕಾಲ ದೇಗುಲ ಮುಚ್ಚಲಿದ್ದು, ಹಬ್ಬದ ಪ್ರಯುಕ್ತ ಮಹಾಲಕ್ಷ್ಮೀ ನೋಡಲು ಬರುವ ಭಕ್ತಾದಿಗಳಿಗೆ ಭಾರೀ ನಿರಾಸೆಯಾಗಿದೆ.

2. 2ನೇ ಡೋಸ್‌ ಲಸಿಕೆ ಪಡೆಯಲು ಜನರ ಹಿಂದೇಟು!

blank

ದೇಶದಲ್ಲಿ 3.86 ಕೋಟಿಗೂ ಹೆಚ್ಚು ಜನರು ಕೊರೊನಾ ಲಸಿಕೆಯ ಎರಡನೇ ಡೋಸ್‌ ಅನ್ನು ನಿಗದಿತ ಅವಧಿಯಲ್ಲಿ ಪಡೆದಿಲ್ಲ ಅಂತ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ಹಂಚಿಕೊಂಡಿದೆ. ರಮಣ ಶರ್ಮ ಎಂಬ ಆರ್‌ಟಿಐ ಕಾರ್ಯಕರ್ತರು ಸಲ್ಲಿಸಿದ್ದ ಅರ್ಜಿಗೆ ಸಚಿವಾಲಯ ಉತ್ತರಿಸಿದೆ. ಕೋವಿಶೀಲ್ಡ್‌ನ ಮೊದಲ ಡೋಸ್‌ ಪಡೆದಿದ್ದ 3.40 ಕೋಟಿ ಹಾಗೂ ಕೋವ್ಯಾಕ್ಸಿನ್‌ನ ಮೊದಲ ಡೋಸ್‌ ಪಡೆದಿದ್ದ 46.78 ಲಕ್ಷ ಜನರು ನಿಗದಿತ ಅವಧಿಯಲ್ಲಿ ಎರಡನೇ ಡೋಸ್‌ ಲಸಿಕೆ ಪಡೆದಿಲ್ಲ ಅಂತ ಸಚಿವಾಲಯ ಮಾಹಿತಿ ನೀಡಿದೆ.

3. ದೆಹಲಿಯಲ್ಲಿ ತಲೆ ಎತ್ತಲಿದೆ ಸ್ಮಾಗ್​ ಟವರ್​

blank

ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಆಗಸ್ಟ್​ 23 ರಂದು ಸ್ಮಾಗ್​ ಟವರ್​ನ್ನು ಉದ್ಘಾಟಿಸಲಿದ್ದಾರೆ. ದೆಹಲಿಯ ಕನ್ನಾಟ್​ ಪ್ರದೇಶದಲ್ಲಿ ಈ ಸ್ಮಾಗ್​ ಟವರ್​ನ್ನು ನಿರ್ಮಿಸಲಾಗಿದೆ. ಉದ್ಘಾಟನೆ ಆಗಲಿರುವ ಈ ಸ್ಮಾಗ್​ ಟವರ್​ ದೇಶದ ಮೊದಲ ಸ್ಮಾಗ್​ ಟವರ್​ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದು ಪ್ರತಿ ಸೆಕೆಂಡಿಗೆ 1,000 ಘನ ಮೀಟರ್ ಗಾಳಿಯನ್ನು ಸ್ವಚ್ಛಗೊಳಿಸುತ್ತದೆ. ದೆಹಲಿಯಲ್ಲಿನ ವಾಯುಮಾಲಿನ್ಯವನ್ನು ತಡೆಗಟ್ಟಲು ಸ್ಮಾಗ್​ ಟವರ್​ ಅನುಕೂಲವಾಗಿದೆ ಅಂತ ದೆಹಲಿ ಸರ್ಕಾರ ಹೇಳಿದೆ.

4. ವಿರೋಧಿಗಳಿಗಾಗಿ ತಾಲಿಬಾನಿ ಉಗ್ರರ ತಲಾಶ್​

blank

ತಾಲಿಬಾನಿ ಉಗ್ರರ ಕೈಗೆ ಸಿಲುಕಿ ಅಫ್ಘಾನಿಸ್ತಾನದ ಜನರು ಇನ್ನಿಲ್ಲದಂತೆ ಚಿತ್ರಹಿಂಸೆ ಅನುಭವಿಸುತ್ತಿದ್ದಾರೆ. ಪ್ರಾರಂಭದಲ್ಲಿ ನಾವು ಯಾರನ್ನೂ ದ್ವೇಷಿಸಲ್ಲ, ಎಲ್ಲರನ್ನೂ ಕ್ಷಮಿಸಿದ್ದೇವೆ ಅಂತಿದ್ದ ತಾಲಿಬಾನಿಗಳು ಈಗ ತಮ್ಮ ವಿರೋಧಿಗಳನ್ನು ಹೆಡೆಮುರಿ ಕಟ್ಟೋಕೆ ತಲಾಶ್​ ಶುರುಮಾಡಿದ್ದಾರೆ. ಅಮೆರಿಕ, ಅಫ್ಘನ್​ ಸೈನ್ಯ, ಮತ್ತು ನ್ಯಾಟೋ ಪಡೆಗಳ ಜೊತೆ ಕೆಲಸ ಮಾಡಿದ್ದ ಜನರ ಹುಡುಕಾಟ ನಡೆಸ್ತಿದೆ. ಈಗಾಗಲೇ ತಾಲಿಬಾನಿಗಳು ತಮಗೆ ಬೇಕಾದ ಪಟ್ಟಿ ಸಿದ್ಧಪಡಿಸಿದ್ದಾರೆಂದು ವಿಶ್ವಸಂಸ್ಥೆ ಅಪಾಯ ಮೌಲ್ಯಮಾಪನ ಸಮಾಲೋಚಕರ ವರದಿ ತಿಳಿಸಿದೆ. ದಾಖಲೆ ಪ್ರಕಾರ, ಅಫ್ಘನ್ ಮಿಲಿಟರಿ, ಪೊಲೀಸ್ ಮತ್ತು ಗುಪ್ತಚರ ಘಟಕಗಳ ಕೇಂದ್ರಸ್ಥಾನದಲ್ಲಿ ಕೆಲಸ ಮಾಡಿದವರು ಹೆಚ್ಚಿನ ಅಪಾಯದಲ್ಲಿದ್ದಾರೆ ಎಂದು ತಿಳಿದು ಬಂದಿದೆ.

5. ಮಾಧ್ಯಮ ನಿರೂಪಕಿಗೆ ತಾಲಿಬಾನ್​ ನಿರ್ಬಂಧ

blank

ಇನ್ನು ಮಹಿಳೆಯರಿಗೂ ಹಕ್ಕು ಕೊಡೋದಾಗಿ ಹೇಳಿದ ಬೆನ್ನಲ್ಲೇ ತಾಲಿಬಾನಿ ಉಗ್ರರು ಮಾಧ್ಯಮಗಳಲ್ಲಿ ಕೆಲಸ ಮಾಡುವ ನಿರೂಪಕಿಯನ್ನು ಕೆಲಸದಿಂದ ವಜಾಗೊಳಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅಫ್ಘಾನ್​ನ ಖ್ಯಾತ ನಿರೂಪಕಿ ಶಬನಂ ದವ್ರಾನ್, ತಾಲಿಬಾನ್​ಗಳ ಭರವಸೆಯನ್ನು ಕೇಳಿ ಎಂದಿನಂತೆ ನಾನು ಕೆಲಸಕ್ಕೆ ಹೋದೆ. ಆದ್ರೆ ಈಗ ವ್ಯವಸ್ಥೆ ಬದಲಾಗಿದೆ. ನೀನು ಮನೆಗೆ ಹೋಗು. ಮಹಿಳೆಯರಿಗೆ ನೌಕರಿಯ ಅವಕಾಶವಿಲ್ಲ ಅಂತ ಕಳಿಸಿದ್ದಾಗಿ ಬೇಸರ ವ್ಯಕ್ತಪಡಿಸಿದ್ರು. ಈ ಸಂಬಂಧ ನಮ್ಮ ಪ್ರಾಣ ಅಪಾಯದಲ್ಲಿದೆ ಅಂತ ಶಬನಮ್​ ಸಾಮಾಜಿಕ ಜಾಲತಾಣದಲ್ಲಿ ಅಳಲು ತೋಡಿಕೊಂಡಿದ್ದಾರೆ.

6. ‘ಕ್ರೂರತ್ವದಲ್ಲಿ ಕೊರೊನಾವನ್ನೇ ಮೀರಿಸುವ ಉಗ್ರರು’

ಕ್ರೂರತ್ವದಲ್ಲಿ ಉಗ್ರರು ಕೊರೊನಾವನ್ನು ಮೀರಿಸಿದ್ದಾರೆ ಅಂತ ವಿದೇಶಾಂಗ ಸಚಿವ ಜೈಶಂಕರ್​​ ಹೇಳಿದ್ದಾರೆ. ವಿಶ್ವಸಂಸ್ಥೆಯಲ್ಲಿ ಮಾತನಾಡಿದ ಅವರು, ಕೊರೊನಾ ಹಾಗೂ ಉಗ್ರರು ಎರಡರಿಂದಲೂ ಜಗತ್ತಿಗೆ ಆಪತ್ತಿದೆ. ಭಾರತದಲ್ಲಿ ನಡೆದ ಮುಂಬೈ ದಾಳಿ, ಪಟಾಣ್​ಕೋಟ್​​​ ವಾಯುನೆಲೆ ದಾಳಿ ಮತ್ತು ಪುಲ್ವಾಮ ದಾಳಿ ಬಗ್ಗೆ ಪ್ರಸ್ತಾಪಿಸಿದ್ದಾರೆ. ಉಗ್ರರ ಚಟುವಟಿಕೆಗಳನ್ನ ಜಾಗತಿಕವಾಗಿ ಮಟ್ಟ ಹಾಕುವ ಬಗ್ಗೆ ಎಲ್ಲಾ ರಾಷ್ಟ್ರಗಳು ಚಿಂತನೆ ನಡೆಸಬೇಕಿದೆ. ಅಫ್ಘಾನ್​ ನಾಗರಿಕರನ್ನು ರಕ್ತಪಾತದಿಂದ ತಪ್ಪಿಸುವುದು ಎಲ್ಲರ ಜವಾಬ್ದಾರಿ ಅಂತ ಜೈಶಂಕರ್​ ಹೇಳಿದ್ದಾರೆ. ಇನ್ನು ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್​ ಘನಿಯನ್ನು ಭಾರತಕ್ಕೆ ಆಹ್ವಾನಿಸಬೇಕು ಅಂತ ಸಂಸದ ಸುಬ್ರಮಣ್ಯನ್​ ಸ್ವಾಮಿ ಆಗ್ರಹಿಸಿದ್ದಾರೆ.

7. ಅಮೆರಿಕ ಕ್ಯಾಪಿಟಲ್‌‌ ಕಟ್ಟಡ ಬಳಿ ಬಾಂಬ್​ ಭೀತಿ

ಅಮೆರಿಕಾ ಕ್ಯಾಪಿಟಲ್‌‌ ಕಟ್ಟಡ ಮತ್ತು ಲೈಬ್ರರಿ ಆಫ್‌ ಕಾಂಗ್ರೆಸ್‌ ಬಳಿ ವಾಹನವೊಂದು ಅನುಮಾನಾಸ್ಪದ ರೀತಿಯಲ್ಲಿ ಕಾಣಿಸಿಕೊಂಡಿದೆ.. ಈ ವಾಹನದಲ್ಲಿ ಸ್ಫೋಟಕಗಳಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.. ಅಲ್ಲದೆ, ಸ್ಥಳದಿಂದ ತೆರಳುವಂತೆ ಜನರಿಗೆ ಸೂಚಿಸಲಾಗಿದೆ.. ಲೈಬ್ರರಿ ಆಫ್‌ ಕಾಂಗ್ರೆಸ್‌ ಬಳಿಕ ಕಾಣಿಸಿಕೊಂಡ ಅನುಮಾನಾಸ್ಪದ ವಾಹನದ ಬಗ್ಗೆ ಯುಎಸ್‌ ಕ್ಯಾಪಿಟಲ್‌ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಯುಎಸ್‌ಸಿಪಿ ತಿಳಿಸಿದೆ.. ಇನ್ನು ಈ ವಿಚಾರವಾಗಿ ಸರಣಿ ಟ್ವೀಟ್‌ಗಳನ್ನು ಮಾಡಿರುವ ಯುಎಸ್‌ಸಿಪಿ, ಬಾಂಬ್ ಬೆದರಿಕೆ ಕರೆಯಿಂದ ತನಿಖೆ ಕೈಗೊಳ್ಳಲಾಗ್ತಿದೆ ಅಂತ ಹೇಳಿದೆ.

8. ‘ಜಾಗತಿಕವಾಗಿ ತಾಲಿಬಾನ್​ಗೆ ಬೆಂಬಲ ನೀಡಬೇಕು’

blank

ಭಾರತ, ಅಮೆರಿಕಾ ಹಾಗೂ ಬ್ರಿಟನ್​ ಸೇರಿದಂತೆ ಹಲವು ರಾಷ್ಟ್ರಗಳು ತಾಲಿಬಾನ್​ ವಿರುದ್ಧವಾಗಿದ್ರೆ ಚೀನಾ ಮಾತ್ರ ತಾಲಿಬಾನ್​ಗಳಿಗೆ ನೈತಿಕ ಬೆಂಬಲ ಸೂಚಿಸಿದೆ. ಪತ್ರಿಕಾ ಹೇಳಿಕೆ ನೀಡಿರುವ ಚೀನಾ ವಿದೇಶಾಂಗ ಸಚಿವ ವಾಂಗ್​ ಲೀ, ತಾಲಿಬಾನ್​ರನ್ನ ವಿಶ್ವದ ಎಲ್ಲಾ ರಾಷ್ಟ್ರಗಳು ಬೆಂಬಲಿಸಬೇಕು ಅಂತ ಮನವಿ ಮಾಡಿದ್ದಾರೆ. ತಾಲಿಬಾನ್​ಗಳು ತಾವು ಬದಲಾಗಿದ್ದೇವೆ, ಹಾಗೂ ಸಮಾಜದಲ್ಲೂ ಹಲವಾರು ಬದಲಾವಣೆ ತರುತ್ತೇವೆ ಅಂತ ಹೇಳಿದ್ದಾರೆ. ಹಾಗಾಗಿ ನಾವೆಲ್ಲಾ ಒಗ್ಗಟ್ಟಾಗಿ ತಾಲಿಬಾನ್​ಗಳಿಗೆ ಬೆಂಬಲ ನೀಡಬೇಕು ಮತ್ತು ಅವರೆಲ್ಲಾ ಸರಿದಾರಿಯಲ್ಲಿ ನಡೆಯುವಂತೆ ಪ್ರೇರೆಪಿಸಬೇಕು ಅಂತ ಹೇಳಿದೆ.

9. 7 ಕೋಟಿಗೆ ಹರಾಜಿಗಿದೆ ಮೆಸ್ಸಿ ಕಣ್ಣೀರೊರೆಸಿದ ಟಿಶ್ಯೂ!

blank

ಫುಟ್ಬಾಲ್ ದಿಗ್ಗಜ ಲಿಯೋನೆಲ್​ ಮೆಸ್ಸಿ ಬಾರ್ಸಿಲೋನಾ ಕ್ಲಬ್​ ತೊರೆಯುವ ಬಗ್ಗೆ ಸುದ್ದಿಗೋಷ್ಟಿ ನಡೆಸಿದ್ರು. ಈ ವೇಳೆ, ಮೆಸ್ಸಿ ತಮ್ಮ ಸುದೀರ್ಘ ಕಾಲದ ಪ್ರಯಾಣದ ಬಗ್ಗೆ ಮೆಲುಕು ಹಾಕಿ, ಭಾವುಕರಾದ್ರು.. ಆಗ ಟಿಷ್ಯೂ ಪೇಪರ್​ನಿಂದ ಮೆಸ್ಸಿ ಕಣ್ಣೀರು ಒರೆಸಿದ್ದು, ಸದ್ಯ ಈ ಟಿಷ್ಯೂ ಹರಾಜಿಗಿಡಲಾಗಿದೆ. ಸುದ್ದಿಗೋಷ್ಟಿ ಮುಗಿದ ನಂತರ ಈ ಟಿಷ್ಯೂ ತೆಗೆದುಕೊಂಡ ವ್ಯಕ್ತಿಯೊಬ್ಬ ಇ-ಕಾಮರ್ಸ್​ ವೇದಿಕೆಯಲ್ಲಿ ಸುಮಾರು 7 ಕೋಟಿಯ 43 ಲಕ್ಷ ರೂಪಾಯಿಗೆ ಹರಾಜಿಗೆ ಇಟ್ಟಿದ್ದಾನೆ.

10. ಮತ್ತೊಂದು ಲುಕ್​ನಲ್ಲಿ ಕಾಣಿಸಿಕೊಂಡ ಧೋನಿ

blank

ಕ್ಯಾಫ್ಟನ್​ ಕೂಲ್​ ಮಹೇಂದ್ರ ಸಿಂಗ್​ ಧೋನಿ ಎಂ.ಎಸ್ ಧೋನಿ ವಿಭಿನ್ನ ಸ್ಟೈಲ್​ಗಳ ಮೂಲಕ ಸುದ್ದಿ ಆಗುತ್ತಾರೆ. ತಿಂಗಳ ಹಿಂದೆ ಹೊಸ ಹೇರ್‌ ಸ್ಟೈಲ್‌ ಮಾಡಿಸಿಕೊಂಡು ಸಖತ್​ ಸುದ್ದಿಯಾಗಿದ್ರು. ಸದ್ಯ ಧೋನಿ ಮತ್ತೆ ಹೇರ್​ ಸ್ಟೈಲ್​ ಬದಲಾಯಿಸಿದ್ದು ಕೂದಲು ಕಲರ್​ಫುಲ್​ ಆಗಿದೆ. ರಾಂಚಿ ಬಾಯ್​ ನಕ್ಷತ್ರಗಳಿಂದ ಕೂಡಿದ ಜಾಕೆಟ್ ಧರಿಸಿದ್ದು ರಾಕ್ ಸ್ಟಾರ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಧೋನಿಯ ಈ ಫೋಟೊ ಸದ್ದು ಮಾಡ್ತಿದ್ರೂ ಈ ಬಾರಿಯ ಹೈರ್​ ಸ್ಟೈಲ್​ ಕೆಲ ಅಭಿಮಾನಿಗಳಿಗೆ ಇಷ್ಟವಾಗಿಲ್ಲವಂತೆ.

Source: newsfirstlive.com Source link