ಅಮಿತಾಭ್​​​ ಬಚ್ಚನ್​​​ ‘ಕೌನ್​ ಬನೇಗಾ ಕರೋಡ್​ಪತಿ’ಯಲ್ಲಿ ಹೊಸ ಫೀಚರ್ಸ್​; ಶೋ ಹೇಗಿರಲಿದೆ ಗೊತ್ತಾ?

ಅಮಿತಾಭ್​​​ ಬಚ್ಚನ್​​​ ‘ಕೌನ್​ ಬನೇಗಾ ಕರೋಡ್​ಪತಿ’ಯಲ್ಲಿ ಹೊಸ ಫೀಚರ್ಸ್​; ಶೋ ಹೇಗಿರಲಿದೆ ಗೊತ್ತಾ?

‘ಕೌನ್​ ಬನೇಗಾ ಕರೋಡ್​ಪತಿ’ ಕಾರ್ಯಕ್ರಮ ಯಾರಿಗೆ ಗೊತ್ತಿಲ್ಲ ಹೇಳಿ?.ಇಲ್ಲಿವರೆಗೂ ಸಾಕಷ್ಟು ಹೆಸರು ಮಾಡಿರೋ ಈ ಶೋ ಇದೀಗ ತನ್ನ 13ನೇ ಸೀಸನ್​ನ್ನನ ಶೂರು ಮಾಡ್ತಾಯಿದೆ. ಈವರೆಗೆ ಯಶಸ್ವಿಯಾಗಿ 12 ಸೀಸನ್​ಗಳನ್ನು ಮುಗಿಸಿದೆ. ಈಗ 13ನೇ ಸೀಸನ್​ಗೆ ಕೆಬಿಸಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದೂ ಹೊಸ ಹೊಸ ಫೀಚರ್​ಗಳೊಂದಿಗೆ.

ಸಾಮಾನ್ಯವಾಗ, ಕೆಬಿಸಿಯಲ್ಲಿ ಫೋನೋ ಫ್ರೆಂಡ್​, ಆಡಿಯನ್ಸ್​ ಪೋಲ್​, 50- 50 ಈ ರೀತಿ ಆಪಕ್ಷನ್​ಗಳಿದ್ವು. ಇದೀಗ, ಇದರ ಜೊತೆ ಹೊಸಾ ಫೀಚರ್​ಗಳನ್ನ ಌಡ್​ ಮಾಡಿದ್ದಾರೆ. ಅಲ್ಲದೇ, ಇದೀಗ, ‘ಶಾಂದರ್​ ಶುಕ್ರವಾರ’ ಅಂತ ಹೇಳಿ, ಹೊಸಾ ಫೀಚರ್​ವೊಂದನ್ನ ಶುರು ಮಾಡಿದ್ದಾರೆ. ಇಲ್ಲಿ, ಪ್ರತಿ ಶುಕ್ರವಾರ ಒಬ್ಬೊಬ್ಬ ಅತಿಥ ಬಂದು ಹಾಟ್​ ಸೀಟ್​ನಲ್ಲಿ ಕೂತು ಅಮಿತಾಭ್​ ಜೊತೆ ಈ ಶೋನಲ್ಲಿ ಭಾಗವಹಿಸಲಿದ್ದಾರೆ. ಈ ವಿಚಾರದ ಬಗ್ಗೆ ಈಗಾಗ್ಲೆ ಹೊಸ ಹೊಸ ಪ್ರೋಮೋಗಳನ್ನ ಬಿಟ್ಟಿದ್ದು, ಜನ ಹೊಸ ಕೆಬಿಸಿಯನ್ನ ನೋಡೋದಕ್ಕೆ ಕಾಯ್ತಾಯಿದ್ದಾರೆ.

Source: newsfirstlive.com Source link