ಕೊರೊನಾ ನಿಯಂತ್ರಣಕ್ಕೆ ಬಂದರೂ ಫಂಗಸ್ ಕಾಟ ನಿಲ್ತಿಲ್ಲ, ಸೋಂಕಿತರ ಸಂಖ್ಯೆ 3,832ಕ್ಕೆ ಏರಿಕೆ

ಕೊರೊನಾ ನಿಯಂತ್ರಣಕ್ಕೆ ಬಂದರೂ ಫಂಗಸ್ ಕಾಟ ನಿಲ್ತಿಲ್ಲ, ಸೋಂಕಿತರ ಸಂಖ್ಯೆ 3,832ಕ್ಕೆ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಒಂದು ಹಂತಕ್ಕೆ ಕೊರೊನಾ ಸೋಂಕಿನ ಪ್ರಮಾಣ ಕಂಟ್ರೋಲ್​ನಲ್ಲಿ ಇದೆ. ಆದರೆ ಬ್ಲ್ಯಾಕ್ ಫಂಗಸ್​​​ ಹಾವಳಿ ಮಾತ್ರ ಏರಿಕೆ ಆಗುತ್ತಲೇ ಇರೋದು ತೀವ್ರ ಆತಂಕಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಈ ವರೆಗೆ ಒಟ್ಟು 3,832 ಬ್ಲ್ಯಾಕ್ ಫಂಗಸ್​ ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿ: ಮಾರುಕಟ್ಟೆಯಲ್ಲಿ ಕೊರೊನಾ ಸೋಂಕು ನಿಯಂತ್ರಿಸಲು ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ

ರಾಜ್ಯ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ಬೆಂಗಳೂರು ನಗರ ಒಂದರಲ್ಲೇ 1,206 ಬ್ಲ್ಯಾಕ್ ಫಂಗಸ್ ಪ್ರಕರಣಗಳ ವರದಿಯಾಗಿದೆ. ರಾಜ್ಯದಲ್ಲಿ ದಿನಕ್ಕೆ ಸರಾಸರಿ ಎಂಟು ಹೊಸ ಬ್ಲ್ಯಾಕ್ ಫಂಗಸ್ ಪ್ರಕರಣ ಪತ್ತೆಯಾಗುತ್ತಿದೆ. ಅದರಲ್ಲೂ ಕಳೆದ 33 ದಿನಗಳಲ್ಲಿ 285 ಹೊಸ Mucormycosis ಪ್ರಕರಣ ಪತ್ತೆಯಾಗಿದೆ.

ಬ್ಲ್ಯಾಕ್ ಫಂಗಸ್ ರೋಗಿಗಳ ಸಂಖ್ಯೆ

  • ಬೆಂಗಳೂರು 1,207
  • ಧಾರವಾಡದಲ್ಲಿ 342
  • ವಿಜಯಪುರ 228
  • ಕಲಬುರಗಿ 213
  • ಬಳ್ಳಾರಿ 169

ಇನ್ನು ಬ್ಲ್ಯಾಕ್ ಫಂಗಸ್​ನಿಂದ ರಾಜ್ಯದಲ್ಲಿ 441 ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ 149 ಮಂದಿ ಬೆಂಗಳೂರಿನಲ್ಲಿ ಸಾವನ್ನಪ್ಪಿದ್ದಾರೆ. ಇನ್ನು ಧಾರವಾಡದಲ್ಲಿ 40 ಸೋಂಕಿತರು, ಬಳ್ಳಾರಿಯಲ್ಲಿ 28, ದಕ್ಷಿಣ ಕನ್ನಡದಲ್ಲಿ 25 ಮತ್ತು ಕಲಬುರಗಿಯಲ್ಲಿ 24 ಮಂದಿ ಮೃತಪಟ್ಟಿದ್ದಾರೆ ಅಂತಾ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ: ದೇಶದಲ್ಲಿ ಒಂದೇ ದಿನ 88.13 ಲಕ್ಷ ಮಂದಿಗೆ ಕೊರೊನಾ ವ್ಯಾಕ್ಸಿನೇಷನ್

Source: newsfirstlive.com Source link