ಸಾವಿನಲ್ಲೂ ಸಾರ್ಥಕತೆ -ಅಂಗಾಂಗ ದಾನ ಮಾಡಿ 14 ಮಂದಿಗೆ ಮರುಜೀವ ಕೊಟ್ಟ ಪುಣ್ಯಾತ್ಮರು

ಸಾವಿನಲ್ಲೂ ಸಾರ್ಥಕತೆ -ಅಂಗಾಂಗ ದಾನ ಮಾಡಿ 14 ಮಂದಿಗೆ ಮರುಜೀವ ಕೊಟ್ಟ ಪುಣ್ಯಾತ್ಮರು

ಮೈಸೂರು: ಅಪಘಾತದಲ್ಲಿ ಗಾಯಗೊಂಡು ಮೆದುಳು ನಿಷ್ಕಿಯಗೊಂಡಿದ್ದ ಅವರ ಅಂಗಾಗ ದಾನ ಮಾಡುವ ಮೂಲಕ ಬರೋಬ್ಬರಿ 14 ಮಂದಿಗೆ ಮರು ಜೀವ ನೀಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಹುಣಸೂರು ಮೂಲದ ಲಾರೆನ್ಸ್ (40), ಕುಶಾಲನಗರ ಮೂಲದ ಶೋಭಾ (48) ಎಂಬವರ ಅಂಗಾಂಗ ದಾನ ಮಾಡಿ ಕುಟುಂಬಸ್ಥರು ಮಾದರಿಯಾಗಿದ್ದಾರೆ. ಸದ್ಯ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿದ್ದ ಇಬ್ಬರು ದಾನಿಗಳಿಂದ 14 ಮಂದಿಗೆ ಮರು ಜೀವ ಲಭಿಸಿದೆ.

ಆಗಸ್ಟ್ 16 ರಂದು ನಡೆದಿದ್ದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಲಾರೆನ್ಸ್ ಅವರ ಮೆದುಳು ನಿಷ್ಕ್ರಿಯಗೊಂಡಿತ್ತು. ಈ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದ ಕುಟುಂಬಸ್ಥರು ಅಂಗಾಂಗ ದಾನ ಮಾಡಲು ಮುಂದೇ ಬಂದಿದ್ದರು. ಇನ್ನೂ ಮೆದುಳಿನ ರಕ್ತಸ್ರಾವದಿಂದ ಬಳಲುತ್ತಿದ್ದ ಶೋಭಾ ಅವರ ಅಂಗಾಂಗ ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದರು.

ಸದ್ಯ ಈ ಇಬ್ಬರು ದಾನಿಗಳಿಂದ 4 ಮೂತ್ರಪಿಂಡಗಳು, 2 ಲಿವರ್, 4 ಹೃದಯದ ಕವಾಟ, 4 ಕಾರ್ನಿಯಗಳನ್ನು ಪಡೆದುಕೊಳ್ಳಲಾಗಿದೆ, ಇಬ್ಬರು ದಾನಿಗಳಿಂದ ಬರೋಬ್ಬರಿ ಹದಿನಾಲ್ಕು ಮಂದಿಗೆ ಜೀವದಾನ ಸಿಕ್ಕಿದೆ.

Source: newsfirstlive.com Source link