ಟೀಮ್​ ಇಂಡಿಯಾ ಮುಂದಿನ ಕೋಚ್​ ಯಾರು? -ಕೋಚ್ ರೇಸ್​​​ನಲ್ಲಿ ಲಕ್ಷ್ಮಣ್​, ಸೆಹ್ವಾಗ್, ಟಾಮ್​ ಮೂಡಿ, ಜಯವರ್ಧನೆ!

ಟೀಮ್​ ಇಂಡಿಯಾ ಮುಂದಿನ ಕೋಚ್​ ಯಾರು? -ಕೋಚ್ ರೇಸ್​​​ನಲ್ಲಿ ಲಕ್ಷ್ಮಣ್​, ಸೆಹ್ವಾಗ್, ಟಾಮ್​ ಮೂಡಿ, ಜಯವರ್ಧನೆ!

NCA ಮುಖ್ಯಸ್ಥ ಸ್ಥಾನಕ್ಕೆ ರಾಹುಲ್ ದ್ರಾವಿಡ್​ ಮತ್ತೆ ಅರ್ಜಿ ಸಲ್ಲಿಸಿದ್ದು, ಕೋಚ್​ ಆಗ್ತಾರೆ ಅನ್ನೋ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಆದ್ರೀಗ ವಿರಾಟ್​ ಸೇನೆಗೆ ಮಾರ್ಗದರ್ಶನ ನೀಡುವ ಗುರು ಯಾರಾಗಲಿದ್ದಾರೆ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.

ರಾಹುಲ್​ ದ್ರಾವಿಡ್​ ಟೀಮ್​ ಇಂಡಿಯಾದ ಮುಂದಿನ ಕೋಚ್​​.!! ಇದು ಕೆಲ ದಿನಗಳ ಹಿಂದಿನ ಮಾತು. ಆದ್ರೀಗ ದ್ರಾವಿಡ್ ಕೋಚ್ ಆಗ್ತಾರೆಂಬ ಕೋಟ್ಯಂತರ ಅಭಿಮಾನಿಗಳ ಕನಸು, ಕಮರಿದೆ. ಯಾಕಂದ್ರೆ ದಿ ವಾಲ್,​​ ಮತ್ತೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ಸ್ಥಾನಕ್ಕೆ, ಮರು ನೇಮಕ ಬಯಸಿ ಅರ್ಜಿ ಸಲ್ಲಿಸಿದ್ದಾರೆ.

blank

ದ್ರಾವಿಡ್​​ರ​ ಎನ್​​​ಸಿಎ ಮುಖ್ಯಸ್ಥನ ಅವಧಿ ಮುಕ್ತಾಯಗೊಂಡಿದ್ದು, ಆಗಸ್ಟ್​​​ 15ಕ್ಕೆ. ಆದ್ರೆ ಇದಕ್ಕೂ ಮುನ್ನವೇ BCCI, ಈ ಹುದ್ದೆಗೆ ಅರ್ಜಿ ಆಹ್ವಾನಿಸಿತ್ತು. ಇತ್ತ ಟಿ-ಟ್ವೆಂಟಿ ವಿಶ್ವಕಪ್‌ ಬಳಿಕ ಮುಖ್ಯ ಕೋಚ್ ರವಿ ಶಾಸ್ತ್ರಿ ಒಪ್ಪಂದ ಕೊನೆಗೊಳ್ಳಲಿದ್ದು, ಆ ಸ್ಥಾನಕ್ಕೆ ದ್ರಾವಿಡ್ ಆಯ್ಕೆ ಆಗಲಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ NCAಗೆ ದ್ರಾವಿಡ್​​ ಮತ್ತೆ ಅರ್ಜಿ ಸಲ್ಲಿಸುವ ಮೂಲಕ, ಗಾಳಿ ಸುದ್ದಿಗಳಿಗೆ ಬ್ರೇಕ್​ ಹಾಕಿದ್ದಾರೆ.

NCAಗೆ ಅರ್ಜಿ ಸಲ್ಲಿಸಿದ ಏಕಮಾತ್ರ ಅಭ್ಯರ್ಥಿ ದ್ರಾವಿಡ್​.!
ಶ್ರೀಲಂಕಾ ಪ್ರವಾಸ ಅಂತ್ಯದ ಬಳಿಕ ಪೂರ್ಣಾವಧಿ ಕೋಚ್​​ ಆಗುವ ಬಗ್ಗೆ ಯೋಚಿಸಿಲ್ಲ ಎಂದಿದ್ದ ದ್ರಾವಿಡ್​, ಅದೇ ನಡೆ ಅನುಕರಿಸಿದ್ದಾರೆ. ಹಾಗಾಗಿ 2ನೇ ಬಾರಿಗೆ ನೇಮಕ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ವಿಶೇಷ ಅಂದ್ರೆ, ಅರ್ಜಿ ಸಲ್ಲಿಸಿದ ಏಕ ಮಾತ್ರ ವ್ಯಕ್ತಿ ದ್ರಾವಿಡ್ ಆಗಿದ್ದಾರೆ. ಹೀಗಾಗಿ ಮತ್ತೆ ಎನ್‌ಸಿಎ ಮುಖ್ಯಸ್ಥರಾಗಿ ದಿ ವಾಲ್​​ ಆಯ್ಕೆಯಾಗೋದು ಬಹುತೇಕ ಖಚಿತ ಎನ್ನಲಾಗ್ತಿದೆ.

blank

ನಿವೃತ್ತಿ ಬಳಿಕ ರಾಹುಲ್​ ದ್ರಾವಿಡ್

  • 2014-15 ಮೆಂಟರ್​, ರಾಜಸ್ಥಾನ್​ ರಾಯಲ್ಸ್
  • 2016-17 ಮೆಂಟರ್​​​, ಡೆಲ್ಲಿ ಡೇರ್​ ಡೆವಿಲ್ಸ್​
  • 2016-18 ಕೋಚ್​​, ಭಾರತ ಅಂಡರ್​-19
  • 2019 ನಿರ್ದೇಶಕ, ಎನ್​ಸಿಎ

ಅರ್ಜಿ ಸಲ್ಲಿಸಲು ಮತ್ತಷ್ಟು ಕಾಲಾವಕಾಶ ನೀಡಿದ ಬಿಸಿಸಿಐ!
ದ್ರಾವಿಡ್​​ಗೆ ಸರಿಸಮ ಯಾರೂ ಇಲ್ಲ ಅನ್ನೋದಕ್ಕೆ, ಯಾರೊಬ್ಬರೂ ಅರ್ಜಿ ಸಲ್ಲಿಸಿಲ್ಲ​. ಈಗಾಗಲೇ ಎನ್​ಸಿಎ ಮುಖ್ತಸ್ಥನಾಗಿ 2 ವರ್ಷಗಳ ಅವಧಿ ಪೂರೈಸಿರುವ ದ್ರಾವಿಡ್, ಮುಂದುವರಿಸುವ ನಿಯಮ ಇಲ್ಲ.! ಆದ್ದರಿಂದ ಸಂದರ್ಶನದ ಮೂಲಕ ನೇಮಕವಾಗಬೇಕು. ಆದ್ದರಿಂದ ಆಸಕ್ತರು ಅರ್ಜಿ ಸಲ್ಲಿಸಲು ಮತ್ತಷ್ಟು ಕಾಲಾವಕಾಶ ನೀಡಲಾಗಿದೆ ಎಂದು BCCI ಹೇಳಿದೆ.

‘ಎನ್‌ಸಿಎಯಲ್ಲಿ ಅದ್ಭುತ ಬದಲಾವಣೆಗಳಿಗೆ ದ್ರಾವಿಡ್ ಕಾರಣರಾಗಿದ್ದಾರೆ. ಹಾಗಾಗಿ ಮತ್ತೆ ಅದೇ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ’’

-ಬಿಸಿಸಿಐ ಅಧಿಕಾರಿ

ಒಟ್ನಲ್ಲಿ, ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಎನ್​ಸಿಎ ಮುಖ್ಯಸ್ಥನಾಗೋದು ಬಹುತೇಕ ಖಚಿತ. ಆ ಮೂಲಕ ಯುವ ಕ್ರಿಕೆಟಿಗರ ಪಾಲಿಗೆ ದ್ರಾವಿಡ್ ಗುರುವಾಗಿ ಮುಂದುವರೆಯಲು, ಬಯಸಿದ್ದಾರೆ.

Source: newsfirstlive.com Source link