ಮೊಹರಂ ಆಚರಣೆ ವೇಳೆ ವಿದ್ಯುತ್ ಅವಘಡ -ಸ್ಥಳದಲ್ಲೇ ಇಬ್ಬರ ಸಾವು, ಓರ್ವ ಗಂಭೀರ

ಮೊಹರಂ ಆಚರಣೆ ವೇಳೆ ವಿದ್ಯುತ್ ಅವಘಡ -ಸ್ಥಳದಲ್ಲೇ ಇಬ್ಬರ ಸಾವು, ಓರ್ವ ಗಂಭೀರ

ರಾಯಚೂರು: ಮೊಹರಂ ಆಚರಣೆ ವೇಳೆ ವಿದ್ಯುತ್ ಅವಘಡ ಸಂಭವಿಸಿ ಇಬ್ಬರು ಸಾವನ್ನಪ್ಪಿರುವ ಘಟನೆ ಮಸ್ಕಿ ತಾಲೂಕಿನ ಸಂತೆಕೆಲ್ಲೂರ ಗ್ರಾಮದಲ್ಲಿ ನಡೆದಿದೆ.

ಹಸೇನಸಾಬ್ ಮುಲ್ಲಾ (55), ಹುಲಿಗೆಮ್ಮ ( 25 ) ಮೃತ ದುರ್ದೈವಿಗಳು. ಇಂದು ಬೆಳಗಿನ ಜಾವ 5:30ಕ್ಕೆ ಘಟನೆ ನಡೆದಿದ್ದು, ಮೊಹರಂ ಕತ್ತಲರಾತ್ರಿ ನಿಮಿತ್ತ ಸಂತೆಕೆಲ್ಲೂರಿನಿಂದ ದಾದನದೊಡ್ಡಿಗೆ ದೇವರುಗಳು ಭೇಟಿ ನೀಡುವ ವೇಳೆ ದುರ್ಘಟನೆ ಸಂಭವಿಸಿದೆ.

blank

ಹುಸೇನ್ ಪಾಷಾ ದೇವರು ದಾದನ್ ದೊಡ್ಡಿ ದರ್ಗಾಕ್ಕೆ ಭೇಟಿ ನೀಡುವ ವೇಳೆ ವಿದ್ಯುತ್​ ಅವಘಡ ನಡೆದಿದ್ದು, ಹುಸೇನ್ ಪಾಷಾ ದೇವರನ್ನ ಭೇಟಿಗೆ ಕರೆದೊಯ್ಯುವ ವೇಳೆ ವಿದ್ಯುತ್ ವೈಯರ್ ದೇವರ ಪಂಜಾ ತಗುಲಿದೆ. ಈ ವೇಳೆ ದೇವರನ್ನು ಹಿಡಿದ ವ್ಯಕ್ತಿ ಮತ್ತು ದರ್ಶನ ಆಗಮಿಸಿದ್ದ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಕೊರೊನಾ ವೈರಸ್​ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮೊಹರಂ ಆಚರಣೆಗೆ ನಿಷೇಧ ವಿಧಿಸಿತ್ತು. ನಿಷೇಧದ ನಡುವೆಯೂ ಗ್ರಾಮಸ್ಥರು ಮೊಹರಂ ಆಚರಣೆಗೆ ಮುಂದಾಗಿದ್ದರು. ಘಟನೆಯಲ್ಲಿ ಮತ್ತೋರ್ವ ವ್ಯಕ್ತಿಗೆ ಗಂಭೀರ ಗಾಯವಾಗಿದ್ದು, ಆತನಿಗೆ ಲಿಂಗಸುಗೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Source: newsfirstlive.com Source link