ಗಲ್ಲಿ ಗಲ್ಲಿಯಲ್ಲೂ ತಾಲಿಬಾನಿಗಳು ಅಟ್ಯಾಕ್; US ಸೇನೆಗೆ ಸಹಾಯ ಮಾಡ್ತಿರೋರನ್ನ ಗಲ್ಲಿಗೇರಿಸಿ ಪ್ರತಿಕಾರ

ಗಲ್ಲಿ ಗಲ್ಲಿಯಲ್ಲೂ ತಾಲಿಬಾನಿಗಳು ಅಟ್ಯಾಕ್; US ಸೇನೆಗೆ ಸಹಾಯ ಮಾಡ್ತಿರೋರನ್ನ ಗಲ್ಲಿಗೇರಿಸಿ ಪ್ರತಿಕಾರ

ನವದೆಹಲಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಉಗ್ರರ ಪೈಶಾಚಿಕ ಕೃತ್ಯ ಮುಂದುವರಿದಿದೆ. ಈಗಾಗಲೇ ದೇಶವನ್ನ ಸುಪರ್ದಿಗೆ ತೆಗೆದುಕೊಂಡಿರುವ ತಾಲಿಬಾನ್​ ಉಗ್ರರು, ಇದೀಗ ಅಮೆರಿಕ ಸೇನೆಯ ಮೇಲೆ ಕೆಂಗಣ್ಣು ಇಟ್ಟಿದ್ದಾರೆ.

ಅದರ ಮುಂದುವರಿದ ಭಾಗವಾಗಿ ಆಘ್ಘಾನ್​ನಲ್ಲಿ ಯಾರೆಲ್ಲಾ ಅಮೆರಿಕ ಸೇನೆಗೆ ಬೆಂಬಲವನ್ನ ನೀಡುತ್ತಿದ್ದಾರೋ, ಅಂತವರ ಮನೆಗೆ ಮನೆಗೆ ಹೋಗಿ ದಾಳಿ ಮಾಡುತ್ತಿದ್ದಾರೆ. ಕೇವಲ ದಾಳಿ ಮಾತ್ರವಲ್ಲ, ಸೇನೆಗೆ ಬೆಂಬಲ ನೀಡ್ತೋರನ್ನ ಗಲ್ಲಿಗೇರಿಸುತ್ತಿದ್ದಾರೆ ಅನ್ನೋ ವರದಿಯಾಗುತ್ತಿದೆ.

ಅಫ್ಘಾನಿಸ್ತಾನದಲ್ಲಿರುವ ಪ್ರತೀ ಗಲ್ಲಿಗಲ್ಲಿಗೂ ಭೇಟಿ ನೀಡುತ್ತಿರುವ ಉಗ್ರರು, ಅಮೆರಿಕ ಸೇನೆಯ ಜೊತೆ ಸಂಪರ್ಕ ಹೊಂದಿರುವ ನಾಗರಿಕರ ಮೇಲೆ ಅಟ್ಯಾಕ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ‘ನಾನ್ಯಾಕೆ ದೇಶ ತೊರೆದೆ ಅಂದ್ರೆ..’ -ಅಫ್ಘಾನ್ ಅಧ್ಯಕ್ಷ ಘನಿ ಈಗ ಎಲ್ಲಿದ್ದಾರೆ ಗೊತ್ತಾ?

Source: newsfirstlive.com Source link