ವರಮಹಾಲಕ್ಷ್ಮಿ ಹಬ್ಬದ ದಿನ ಅಭಿಮಾನಿಗಳಿಗೆ ಶುಭ ಸುದ್ದಿ ಕೊಟ್ಟ ಪ್ರೇಮ್​

ವರಮಹಾಲಕ್ಷ್ಮಿ ಹಬ್ಬದ ದಿನ ಅಭಿಮಾನಿಗಳಿಗೆ ಶುಭ ಸುದ್ದಿ ಕೊಟ್ಟ ಪ್ರೇಮ್​

ತನ್ನ ‘ಜೋಗಿ’ ಸಿನಿಮಾ 16 ವರ್ಷ ಪೂರೈಸಿದ ಸಂಭ್ರಮದಲ್ಲಿರುವ ಸ್ಯಾಂಡಲ್​ವುಡ್​ ನಿರ್ದೇಶಕ ಜೋಗಿ ಪ್ರೇಮ್​ ತಮ್ಮ ಫ್ಯಾನ್ಸ್​ಗಳಿಗೆ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಶುಭಾಶಯ ಕೋರಿ ಸಿಹಿ ಸುದ್ದಿಯೊಂದನ್ನ ಕೊಟ್ಟಿದ್ದಾರೆ.

ಹೌದು, ಪ್ರೇಮ್​ ತಮ್ಮ ಬಾಮೈದ ರಾಣಗೆ ನಿರ್ದೇಶನ ಮಾಡುತ್ತಿರುವ ‘ಏಕ್​ ಲವ್​ ಯಾ’ ಸಿನಿಮಾದ ಚಿತ್ರೀಕರಣವನ್ನು ಪೂರ್ಣಗೊಳಿಸಿ ಮುತ್ತತ್ತಿಯ ಆಂಜನೇಯ ದೇವಸ್ಥಾನದಲ್ಲಿ ಮೊನ್ನೆಯಷ್ಟೇ ಕುಂಬಳಕಾಯಿ ಹೊಡೆದಿದ್ರು.

ಇನ್ನು ಪ್ರೇಮ್ ಪತ್ನಿ ನಟಿ ರಕ್ಷಿತಾ ಪ್ರೇಮ್​ ಕೂಡ ಈ ಕುರಿತು ಕೆಲ ಫೋಟೋಗಳನ್ನ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಶೀಘ್ರದಲ್ಲೇ “ಏಕ್​ ಲವ್​ ಯಾ” ಚಿತ್ರದ ರಿಲೀಸ್​ ಡೇಟ್​ ಅನೌನ್ಸ್​ ಮಾಡುತ್ತೀವಿ ಅಂತಾ ಹೇಳಿದ್ರು.

ಇದೀಗ “ಏಕ್​ ಲವ್​ ಯಾ” ಚಿತ್ರದ ನಿರ್ದೇಶಕ ಜೋಗಿ ಪ್ರೇಮ್​ ಚಿತ್ರದ ಮೂರನೇ ವಿಡಿಯೋ ಸಾಂಗ್​ ಮತ್ತು ಚಿತ್ರದ ರಿಲೀಸ್​ ಡೇಟ್​ ಶೀಘ್ರದಲ್ಲೇ ಅನೌನ್ಸ್​ ಮಾಡುತ್ತೀವಿ ಅಂತಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

Source: newsfirstlive.com Source link