ತಮಾಷೆಯಾಗೇ ಸರ್ಕಾರದ ಕಾಲೆಳೆದ ಹಾಸ್ಯ ನಟ -ನವ ಜೋಡಿಗೆ ಪೆಟ್ರೋಲ್ ಗಿಫ್ಟ್​ ನೀಡಿ ಶುಭಹಾರೈಕೆ

ತಮಾಷೆಯಾಗೇ ಸರ್ಕಾರದ ಕಾಲೆಳೆದ ಹಾಸ್ಯ ನಟ -ನವ ಜೋಡಿಗೆ ಪೆಟ್ರೋಲ್ ಗಿಫ್ಟ್​ ನೀಡಿ ಶುಭಹಾರೈಕೆ

ಚೆನ್ನೈ: ತಮಿಳು ಹಾಸ್ಯ ಕಲಾವಿದ ಮಾಯಿಲ್​​ಸಾಮಿ ಇತ್ತೀಚೆಗೆ ನವ ಜೋಡಿಗೆ ಅಸಮಾನ್ಯ ಉಡುಗೊರೆ ನೀಡಿ ಸಖತ್ ಟ್ರೆಂಡಿಂಗ್​ನಲ್ಲಿದ್ದಾರೆ. ವಿಶೇಷವಾದ ಗಿಫ್ಟ್​ ನೀಡುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದ್ದು, ಟ್ವಿಟರ್​ನಲ್ಲಿ ಅಂಕಣಕಾರ ಮನೋಬಾಲ ವಿಜಯಬಾಲನ್ ಅವರು ಹಂಚಿಕೊಂಡಿದ್ದಾರೆ.

ನವಜೋಡಿಗೆ ಶುಭ ಹಾರೈಸಲು ಬಂದ ಕಲಾವಿದ ಎರಡು ಕ್ಯಾನ್ ಪೆಟ್ರೋಲ್​ ತಂದಿದ್ದರು. ಒಂದು ಕ್ಯಾನ್​ ವಧುಗೆ ಹಾಗೂ ಇನ್ನೊಂದು ಕ್ಯಾನ್ ಪೆಟ್ರೋಲ್​ ವರನಿಗೆ ನೀಡಿ ಶುಭ ಹಾರೈಸಿದ್ದಾರೆ. ಹಾಸ್ಯ ಕಲಾವಿದರು ಏನೇ ಮಾಡಿದರೂ ತಮಾಷೆಯಾಗೇ ನೋಡುವ ಈ ಸಂದರ್ಭದಲ್ಲಿ, ಮದುವೆಗೆ ಬಂದವರೆಲ್ಲಾ ಬಿದ್ದು ಬಿದ್ದು ನಕ್ಕಿದ್ದಾರೆ ಅಂತಾ ವರದಿಯಾಗಿದೆ.

ಇತ್ತೀಚೆಗೆ ಪೆಟ್ರೋಲ್ ಬೆಲೆ 100ರ ಗಡಿ ದಾಟಿ ಮುನ್ನುಗ್ಗುತ್ತಿದೆ. ಇದನ್ನ ಖಂಡಿಸುವ ಉದ್ದೇಶದಿಂದ ಮಾಯಿಲ್ ಸಾಮಿ ಈ ಗಿಫ್ಟ್​ ನೀಡಿದ್ದಾರೆ. ಇನ್ನು ಮಾಯಿಲ್ ಸಾಮಿ ಕಳೆದ ಬಾರಿಯ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ವಿರುಗಂಪಾಕ್ಕಂ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಇವರು ತಮಿಳುನಾಡಿನ ಮಾಜಿ ಮುಖ್ಯಮಂತ್ರಿಗಳಾದ ಜಯಲಲಿತಾ ಹಾಗೂ ಎಂಜಿಆರ್​ ಅವರ ಅಪ್ಟಟ ಅಭಿಮಾನಿಯಾಗಿದ್ದಾರೆ.

Source: newsfirstlive.com Source link