ಆಸಿಸ್​​​ ಕೋಚ್​​​ ಜಸ್ಟಿನ್ ಲ್ಯಾಂಗರ್ ತಲೆದಂಡ ಇಲ್ಲ- T20 ವಿಶ್ವಕಪ್, ಌಶಸ್ ಸರಣಿಗೂ ಲ್ಯಾಂಗರ್​ ಕೋಚ್​

ಆಸಿಸ್​​​ ಕೋಚ್​​​ ಜಸ್ಟಿನ್ ಲ್ಯಾಂಗರ್ ತಲೆದಂಡ ಇಲ್ಲ- T20 ವಿಶ್ವಕಪ್, ಌಶಸ್ ಸರಣಿಗೂ ಲ್ಯಾಂಗರ್​ ಕೋಚ್​

ಆಸ್ಟ್ರೇಲಿಯಾ ತಂಡದ ಮುಖ್ಯ ಕೋಚ್ ಆಗಿ ಜಸ್ಟಿನ್ ಲ್ಯಾಂಗರ್​ ಮುಂದುವರೆಯಲಿದ್ದಾರೆ. ಕೋಚ್​ ಹುದ್ದೆಯಿಂದ ತೆಗೆದುಹಾಕುವ ಊಹಾಪೋಹಗಳನ್ನ, ಕ್ರಿಕೆಟ್ ಆಸ್ಟ್ರೇಲಿಯಾ ತಳ್ಳಿಹಾಕಿದೆ. ಮುಂಬರುವ ಟಿ20 ವಿಶ್ವಕಪ್ ಹಾಗೂ ಌಶಸ್​ ಟೆಸ್ಟ್​ ಸರಣಿಯವರೆಗೆ ಲ್ಯಾಂಗರ್ ಅವಧಿ ವಿಸ್ತರಣೆಗೊಳಿಸಿ, ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಣೆ ಹೊರಡಿಸಿದೆ. ಇತ್ತೀಚಿಗೆ ದೇಶ, ವಿದೇಶಗಳಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಆಸ್ಟ್ರೇಲಿಯಾ ತಂಡ ವಿಫಲವಾಗಿದೆ. ಬಾಂಗ್ಲಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ 1-4 ಸೋಲು..!

ಇದಕ್ಕೂ ಟೀಮ್ ಇಂಡಿಯಾ ವಿರುದ್ಧ 2018-19 ಹಾಗೂ 2020-21ರ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಮುಖಭಂಗ.! ಹೀಗಾಗಿ ಆಸ್ಟ್ರೇಲಿಯಾ ಕೋಚ್ ಹುದ್ಡಯಿಂದ ಜಸ್ಟಿನ್ ಲ್ಯಾಂಗರ್ ಪದಚ್ಯುತಿಗೆ ಸಾಕಷ್ಟು ಒತ್ತಾಯಗಳು ಕೇಳಿಬಂದಿತ್ತು. ಸದ್ಯ ಕ್ರಿಕೆಟ್ ಆಸ್ಟ್ರೇಲಿಯಾ, ಲ್ಯಾಂಗರ್​ಗೆ ತಂಡದ ಕೋಚ್ ಹುದ್ದೆ ಜವಾಬ್ದಾರಿ ನೀಡಿದೆ. ಹಾಗೇ ಮುಂದಿನ ದಿನಗಳಲ್ಲಿ ಲ್ಯಾಂಗರ್​, ತಂಡವನ್ನ ಯಶಸ್ಸಿನತ್ತ ಕೊಡೊಯ್ಯುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದೆ.

 

Source: newsfirstlive.com Source link