ದುಬೈನಲ್ಲಿ ಧೋನಿ ಌಂಡ್ ಟೀಮ್ ಸಮರಾಭ್ಯಾಸ- ಐಪಿಎಲ್​ಗೆ ಭರ್ಜರಿ ತಯಾರಿ..!​​​​​

ದುಬೈನಲ್ಲಿ ಧೋನಿ ಌಂಡ್ ಟೀಮ್ ಸಮರಾಭ್ಯಾಸ- ಐಪಿಎಲ್​ಗೆ ಭರ್ಜರಿ ತಯಾರಿ..!​​​​​

ಸೆಪ್ಟೆಂಬರ್​ 19ರಿಂದ ಆರಂಭವಾಗಲಿರುವ ಐಪಿಎಲ್ 2ನೇ ಹಂತಕ್ಕೆ ಚೆನ್ನೈ ಸೂಪರ್ ಕಿಂಗ್ಸ್​ ಭರ್ಜರಿ ತಾಲೀಮು ನಡೆಸ್ತಿದೆ. ಆಗಸ್ಟ್​ 14ರಂದು ದುಬೈ ತೆರಳಿದ್ದ ಚೆನ್ನೈ ಆಟಗಾರರು, 6 ದಿನಗಳ ಕಡ್ಡಾಯ ಕ್ವಾರಂಟೀನ್​ ಪೂರ್ಣಗೊಳಿಸಿದ್ದು, ಈಗ ಹೊರಾಂಗಣದ ಅಭ್ಯಾಸಕ್ಕೆ ಅಣಿಯಾಗಿದ್ದಾರೆ. ದುಬೈನ ಐಸಿಸಿ ಅಕಾಡೆಮಿಯಲ್ಲಿ ಅಭ್ಯಾಸ ಆರಂಭಿಸಿರುವ ಚೆನ್ನೈ, ಐಪಿಎಲ್​ಗೆ ಭರದ ಸಿದ್ಧತೆ ನಡೆಸ್ತಿದೆ. ಇನ್ನು ಕಳೆದ ಆವೃತ್ತಿ ಸೇರಿದಂತೆ 14ನೇ ಆವೃತ್ತಿಯ ಮೊದಲಾರ್ಧದಲ್ಲಿ ಉತ್ತಮ ಪ್ರದರ್ಶನ ನೀಡದ ಮಹೇಂದ್ರ ಸಿಂಗ್ ಧೋನಿ, ನೆಟ್ಸ್​ನಲ್ಲಿ ಸಾಕಷ್ಟು ಬೆವರಿಳಿಸುತ್ತಿದ್ದಾರೆ.

ದ್ವಿತೀಯಾರ್ಧದಲ್ಲಿ ಸಿಎಸ್​ಕೆ ನಾಯಕ ಉತ್ತಮ ಪ್ರದರ್ಶನ ನೀಡುವ ಇರಾದೆಯಲ್ಲಿದ್ದಾರೆ. ಇನ್ನುಳಿದಂತೆ ರುತುರಾಜ್ ಗಾಯಕ್ವಾಡ್, ಸುರೇಶ್​ ರೈನಾ ಸೇರಿದಂತೆ ಬಹುತೇಕ ಆಟಗಾರರು, ಅಭ್ಯಾಸದಲ್ಲಿ ಪಾಲ್ಗೊಂಡು ಐಪಿಎಲ್​ಗೆ ತಯಾರಿ ನಡೆಸಿದರು. ಪ್ರಸಕ್ತ ಆವೃತ್ತಿಯಲ್ಲಿ 7 ಪಂದ್ಯಗಳನ್ನಾಡಿರುವ ಚೆನ್ನೈ ಸೂಪರ್ ಕಿಂಗ್ಸ್​, 5 ಪಂದ್ಯಗಳನ್ನ ಗೆದ್ದಿದ್ದು, ಉಳಿದೆರೆಡರಲ್ಲಿ ಸೋಲು ಅನುಭವಿಸಿದೆ. ಆ ಮೂಲಕ ಅಂಕಪಟ್ಟಿಯಲ್ಲಿ 10 ಅಂಕಗಳೊಂದಿಗೆ 2ನೇ ಸ್ಥಾನ ಕಾಯ್ದುಕೊಂಡಿದೆ.

Source: newsfirstlive.com Source link