ತಾಲಿಬಾನಿಗಳ ವಿರುದ್ಧ ಟೊಂಕ ಕಟ್ಟಿ ನಿಂತ ಆ ಪ್ರಾಂತ್ಯ ಯಾವುದು? ಆ ಪ್ರಾಂತ್ಯದ ಹೋರಾಟದ ಇತಿಹಾಸ ಏನು ಗೊತ್ತಾ?

ತಾಲಿಬಾನಿಗಳ ವಿರುದ್ಧ ಟೊಂಕ ಕಟ್ಟಿ ನಿಂತ ಆ ಪ್ರಾಂತ್ಯ ಯಾವುದು? ಆ ಪ್ರಾಂತ್ಯದ ಹೋರಾಟದ ಇತಿಹಾಸ ಏನು ಗೊತ್ತಾ?

ತಾಲಿಬಾನಿ ಉಗ್ರರು ಅಫ್ಘಾನ್‌ ವಶಪಡಿಸಿಕೊಂಡಿದ್ದೇವೆ. ತಾವೇ ಸರ್ಕಾರ ರಚಿಸುತ್ತೇವೆ ಅಂತ ಹೇಳುತ್ತಿದ್ದಾರೆ. ಆದ್ರೆ, ಅಫ್ಘಾನ್‌ನ ಪಂಜ್‌ಶೇರ್‌ ಎಂಬ ಪ್ರಾಂತ್ಯ ತಾಲಿಬಾನಿಗಳಿಗೆ ಸೆಡ್ಡು ಹೊಡೆದಿದೆ. ಈ ಪ್ರಾಂತ್ಯದ ಹೆಸರು ಕೇಳಿದ್ರೆ ತಾಲಿಬಾನಿಗಳೇ ನಡುಗುತ್ತಿದ್ದಾರೆ. ಅಷ್ಟಕ್ಕೂ ಪಂಜ್‌ಶೀರ್‌ ಹಿನ್ನೆಲೆ ಏನು? ಇದೀಗ ಪಂಜ್‌ಶೀರ್‌ಗೆ ಅಂತಹ ಶಕ್ತಿ ತುಂಬಿದ ನಾಯಕ ಯಾರು? ಮಹಾಭಾರತದಲ್ಲಿ ಪಂಜ್‌ಶೀರ್‌ ಬಗ್ಗೆ ಇರೋ ಉಲ್ಲೇಖ ಏನು?

blank

ಅಮೆರಿಕ ಸೇನೆ ಅಫ್ಘಾನ್‌ನಿಂದ ಯಾವಾಗ ವಾಪಸ್‌ ಆಗಲು ಆರಂಭಿಸಿತ್ತೋ ಆವಾಗಲೇ ತಾಲಿಬಾನಿಗಳ ಆಕ್ರಮಣ ಆರಂಭವಾಗಿತ್ತು. ಅಫ್ಘಾನ್‌ನ ಒಂದೊಂದೆ ಪ್ರಾಂತ್ಯವನ್ನು ವಶಪಡಿಸಿಕೊಳ್ಳುತ್ತಾ ಸಾಗಿದ್ರು. ಅಂತಿಮವಾಗಿ ಅಫ್ಘಾನ್‌ ರಾಜಧಾನಿ ಕಾಬುಲ್‌ಗೂ ಎಂಟ್ರಿ ಕೊಡ್ತಾರೆ. ಆಮೇಲೆ ನಡೆದಿದ್ದೆಲ್ಲವೂ ಇತಿಹಾಸವಾಗಿ ನಿರ್ಮಾಣವಾಗಿ ಬಿಡ್ತು.

ಇದನ್ನೂ ಓದಿ: ತಾಲಿಬಾನ್​​ ವಿರುದ್ಧ ಹೋರಾಟಕ್ಕೆ ಶಸ್ತ್ರಾಸ್ತ್ರ ಒದಗಿಸಿ; ಪಂಜ್​ಶೀರ್ ಹೋರಾಟಗಾರನ ಪುತ್ರ ಮನವಿ

ತಾಲಿಬಾನಿಗಳ ಕ್ರೌರ್ಯಕ್ಕೆ ಹೆದರಿ ಅದೆಷ್ಟೊ ಜನರು, ರಾಜಕಾರಣಿಗಳು, ಅಧಿಕಾರಿಗಳು ದೇಶ ಬಿಟ್ಟು ಓಡಿ ಹೋದ್ರು. ಮಹಿಳೆಯರು, ಮಕ್ಕಳು ಕಣ್ಣೀರು ಹಾಕಿದ್ರು. ಆದ್ರೆ, ಅಫ್ಘಾನ್‌ನ ಪಂಜ್‌ಶೇರ್‌ ಎಂಬ ಪ್ರಾಂತ್ಯ ಮಾತ್ರ ತಾಲಿಬಾನಿಗಳ ಕಪಿಮುಷ್ಠಿಗೆ ಸಿಲುಕದೇ ಸ್ವತಂತ್ರವಾಗಿ ಉಳಿದಿದೆ. ಅದೇಕೆ ಈ ಪ್ರಾಂತ್ಯವನ್ನು ತಾಲಿಬಾನಿಗಳಿಗೆ ವಶಪಡಿಸಿಕೊಳ್ಳಲು ಸಾಧ್ಯವಾಗಿಲ್ಲ ಗೊತ್ತಾ? ಪಂಜ್‌ಶೀರ್‌ಗೆ ಶಕ್ತಿ ತುಂಬಿದ ನಾಯಕ ಯಾರು ಗೊತ್ತಾ? ಇದನ್ನೆಲ್ಲಾ ಹೇಳ್ತೀವಿ ಅದಕ್ಕೂ ಮುನ್ನ ಪಂಜ್‌ಶೀರ್‌ ಭೌಗೋಳಿಕತೆ ಬಗ್ಗೆ ಸ್ವಲ್ಪ ನೋಡೋಣ ಬನ್ನಿ.

ಪಂಜ್‌ಶೀರ್‌ ಪ್ರಾಂತ್ಯದಲ್ಲಿವೇ 7 ಜಿಲ್ಲೆಗಳು
ಇಲ್ಲಿಯ ಜನಸಂಖ್ಯೆ 1 ಲಕ್ಷದ 70 ಸಾವಿರ
ಸುಂದರ ಕಣಿವೆಗಳಿಂದ ಕೂಡಿರೋ ಪ್ರಾಂತ್ಯ

ಅಫ್ಘಾನ್‌ ರಾಜಧಾನಿ ಕಾಬುಲ್‌ನಿಂದ 100 ಕಿಲೋ ಮೀಟರ್‌ ಪ್ರಯಾಣಿಸಿದ್ರೆ ಪಂಜ್‌ಶೀರ್‌ ಸಿಗುತ್ತದೆ. ಸುಂದರ ಕಣಿವೆಗಳನ್ನು ಹೊಂದಿರೋ ಪ್ರದೇಶವಿದು. ಈ ಪ್ರಾಂತ್ಯದಲ್ಲಿ 7 ಜಿಲ್ಲೆ, 512 ಹಳ್ಳಿಗಳು ಸೇರಿವೆ. ಏಳು ಜಿಲ್ಲೆಗಳಿಂದ ಸುಮಾರು 1 ಲಕ್ಷದ 70 ಸಾವಿರ ಜನಸಂಖ್ಯೆ ಇದೆ. ಈ ಪ್ರಾಂತ್ಯದ ವ್ಯಾಪ್ತಿ ದೊಡ್ಡದಾಗಿದ್ರೂ ಜನವಸತಿ ಪ್ರದೇಶಗಳು ಕಡಿಮೆ ಇವೆ. ಇದೇ ಕಾರಣಕ್ಕೆ ಜನಸಂಖ್ಯೆ ಕಡಿಮೆ ಪ್ರಮಾಣದಲ್ಲಿ ಇದೆ. ಆದ್ರೆ, ಇಲ್ಲಿಯ ಜನರ ಹೋರಾಟದ ಇತಿಹಾಸ ಕೇಳಿದ್ರೆ ಹೆಮ್ಮೆಪಡ್ತೀರಿ.

blank

ತಾಲಿಬಾನಿಗಳ ವಶಕ್ಕೆ ಸಿಗದ ಏಕೈಕ ಪ್ರಾಂತ್ಯ ಪಂಜ್‌ಶೀರ್‌

ತಾಲಿಬಾನಿಗಳ ಇತಿಹಾಸವನ್ನು ಕೇಳಿದ್ರೆ ಎಂಥವರಾದ್ರೂ ಕೊಂಚ ವಿಚಲಿತರಾಗುತ್ತಾರೆ. ಅದೆಷ್ಟೇ ಹೊಡೆತ ನೀಡಿದ್ರೂ ಜಗಲ್ಲ ಇವರು. ಅಮೆರಿಕ ಸೇನೆ ಸತತ 20 ವರ್ಷಗಳ ದಾಳಿ ನಡೆಸಿದ್ರೂ ತಾಲಿಬಾನಿಗಳ ಹೆಡೆಮುರಿ ಕಟ್ಟಲು ಸಾಧ್ಯವಾಗಿಲ್ಲ. ಆದ್ರೆ, ಅಫ್ಘಾನ್‌ನಲ್ಲಿಯೇ ಇರುವ ಪಂಚ್‌ಶೀರ್‌ ಎಂಬ ಪ್ರಾಂತ್ಯ ಮಾತ್ರ ತಾಲಿಬಾನಿಗಳ ನಿದ್ದೆಗೆಡಿಸಿಬಿಟ್ಟಿದೆ. ಅದೇನೇ ಮಾಡಿದ್ರೂ ಈ ಪ್ರಾಂತ್ಯವನ್ನು ಮಾತ್ರ ಮುಟ್ಟಲು ಸಾಧ್ಯವಾಗುತ್ತಿಲ್ಲ. ಹೀಗಾಗಿಯೇ ಇಲ್ಲಿಯ ಜನ ತಾಲಿಬಾನಿಗಳ ಕ್ರೌರ್ಯ ಇಲ್ಲದೇ ನಿಶ್ಚಿಂತೆಯಿಂದ ಇದ್ದಾರೆ.

ತಾಲಿಬಾನ್‌ಗೆ ಪಂಜ್‌ಶೀರ್‌ ವಶಪಡಿಸಿಕೊಳ್ಳಲು ಯಾಕೆ ಸಾಧ್ಯವಾಗಿಲ್ಲ?
ಎಲ್ಲಾ ಗಡಿಯಲ್ಲಿಯೂ ಇದ್ದಾರೆ ತಾಲಿಬಾನಿ ವಿರೋಧಿ ಪಡೆ

blank

ಇಲ್ಲಿ ಗನ್‌ ಹಿಡಿದು ಕಾಯುತ್ತಾ ಇದ್ದಾರಲ್ಲ, ಇವರೇ ನೋಡಿ ತಾಲಿಬಾನಿ ವಿರೋಧಿ ಹೋರಾಟಗಾರರು. ಪಂಜ್‌ಶೀರ್‌ ಪ್ರಾಂತ್ಯದಲ್ಲಿ ಪ್ರತಿ ಗಡಿಯಲ್ಲಿಯೂ ಚೆಕ್‌ ಪೋಸ್ಟ್‌ ನಿರ್ಮಿಸಲಾಗಿದೆ. ಆ ಎಲ್ಲಾ ಚೆಕ್‌ ಪೋಸ್ಟ್‌ಗಳಲ್ಲಿಯೂ ಶಸ್ತ್ರಸಜ್ಜಿತ ಯೋಧರು ನಿಂತಿದ್ದಾರೆ.

ತಾಲಿಬಾನಿಗಳೆನಾದ್ರೂ ನುಗ್ಗಲು ಬಂದ್ರೆ ಅವರ ಕಥೆ ಗೋವಿಂದ ಮಾಡೇ ಬಿಡ್ತಾರೆ. ಇಲ್ಲಿಯ ಜನರಲ್ಲಿ ಇಷ್ಟೊಂದು ಹೋರಾಟದ ಕಿಚ್ಚು ಇರಬೇಕು ಅಂದ್ರೆ ಅದಕ್ಕೆ ಒಂದು ಹಿನ್ನೆಲೆ ಇರಲೇಬೇಕಲ್ವ? ಹೌದು, ಪಂಜ್‌ಶೀರ್‌ ಪ್ರಾಂತ್ಯದಲ್ಲಿ ಜನರಲ್ಲಿ ಹೋರಾಟ ಅನ್ನೋದು ರಕ್ತಗತವಾಗಿಯೇ ಬಂದಿದೆ. ಅದಕ್ಕೊಂದು ಇತಿಹಾಸವೂ ಇದೆ.

ತಾಲಿಬಾನ್‌, ಸೋವಿಯತ್‌ ಒಕ್ಕೂಟ ಯಾರಿಗೂ ತಲೆಬಾಗಿಲ್ಲ ಪಂಜ್‌ಶೀರ್‌

ಅಫ್ಘಾನ್‌ ಪಂಜ್​ಶೀರ್‌ ಪ್ರಾಂತ್ಯದ ಹೋರಾಟದ ಬಗ್ಗೆ ದೊಡ್ಡ ಇತಿಹಾಸವಿದೆ. ಇವರ್ಯಾರು ತಾಲಿಬಾನಿಗಳಿಗಾಗಲಿ, ವಿದೇಶಿ ಶಕ್ತಿಗಳಿಗಾಗಲಿ ಯಾವಾಗಲೂ ತಲೆಬಾಗಿದವರಲ್ಲ. 1990 ಕ್ಕೂ ಮುನ್ನ ಸೋವಿಯತ್‌ ಒಕ್ಕೂಟ ಅಫ್ಘಾನ್‌ ಮೇಲೆ ಇನ್ನಿಲ್ಲದ ದಾಳಿ ನಡೆಸಿ ಇಡೀ ಅಫ್ಘಾನ್‌ ಮೇಲೆ ನಿಯಂತ್ರಣ ಪಡೆದಿತ್ತು. ಆದ್ರೆ, ಅವರಿಗೂ ಕೂಡ ಪಂಜ್​ಶೀರ್‌ ಪ್ರಾಂತ್ಯದ ಮೇಲೆ ಆಕ್ರಮಣ ನಡೆಸಲು ಸಾಧ್ಯವಾಗಿರಲಿಲ್ಲ. ಸೋವಿಯತ್‌ ಒಕ್ಕೂಟ ಹಿಂದೆ ಸರಿದ ಮೇಲೆ ತಾಲಿಬಾನಿಗಳು ಅಟ್ಟಹಾಸ ಮೆರೆಯುತ್ತಿದ್ರು. ಆದ್ರೆ, ತಾಲಿಬಾನಿಗಳಿಗೂ ಈ ಪ್ರಾಂತ್ಯವನ್ನು ಟಚ್‌ ಮಾಡಲು ಸಾಧ್ಯವಾಗರಿಲ್ಲ. ಹಾಗಾದ್ರೆ ಪಂಜ್​ಶೀರ್‌ ಹೋರಾಟದ ವೈಖರಿ ಹೇಗಿರಬಹುದು? ಪಂಜ್‌ಶೀರ್‌ ಸಿಂಹ ಅಂತ ಕರೆಯಿಸಿಕೊಂಡವರು ಯಾರು ಗೊತ್ತಾ?

ಇದನ್ನೂ ಓದಿ: ಹಾಡಹಗಲೇ ಅಫ್ಘಾನ್​​​​ ಸೇನೆಯ ನಾಲ್ವರು ಕಮಾಂಡರ್​​ಗಳನ್ನು ನೇಣಿಗೇರಿಸಿದ ತಾಲಿಬಾನ್

ಮೊಹ್ಮದ್‌ ಶಾ ಮಸೂದ್‌ ಯಾರು ಗೊತ್ತಾ?
ಪಂಜ್‌ಶೀರ್‌ ಸಿಂಹ ಎಂದೇ ಖ್ಯಾತರಾಗಿದ್ರು

ಪಂಜ್‌ಶೀರ್‌ ಪ್ರಾಂತ್ಯದಲ್ಲಿ ಜನಿಸಿದ ಮೊಹ್ಮದ್‌ ಶಾ ಮಸೂದ್‌ ಯಾರು ಗೊತ್ತಾ? ಆತನ ಹೋರಾಟದ ವೈಖರಿ ಹೇಗಿತ್ತು ಗೊತ್ತಾ? ಹೌದು, ಇಂದು ಪಂಜ್‌ಶೀರ್‌ ತಾಲಿಬಾನಿಗಳಿಗೆ ಸೆಡ್ಡುಹೊಡೆದಿದ್ದಾರೆ ಅಂದ್ರೆ ಅದರ ಹಿಂದೆ ಮೊಹ್ಮದ್‌ ಶಾ ಮಸೂದ್‌ ಅವರು ಹಾಕಿರೋ ಅಡಿಪಾಯವಿದೆ. ಮಸೂದ್‌ 1979 ಮತ್ತು 1989ರಲ್ಲಿ ಸೋವಿಯತ್‌ ಒಕ್ಕೂಟದ ವಿರುದ್ಧ ಹೋರಾಟ ನಡೆಸಿದವರು. ಆ ಸಂದರ್ಭದಲ್ಲಿ ಪಂಜ್‌ಶೀರ್‌ ವಿದೇಶಿ ಶಕ್ತಿಗೆ ಒಳಗಾಗದಂತೆ ನೋಡಿಕೊಂಡವರು. ಅಷ್ಟೇ ಅಲ್ಲ, ಮಿಲಿಟರಿ ಕಮಾಂಡರ್‌ ಆಗಿ, ರಾಜಕಾರಣಿಯಾಗಿ ಸೇವೆಸಲ್ಲಿಸಿದವರು. ತಾಲಿಬಾನಿಗಳ ನಿದ್ದೆಗೆಡಿಸಿದವರು. ಇದಕ್ಕಾಗಿಯೇ ಇವರನ್ನು ಪಂಜ್‌ಶೀರ್‌ ಸಿಂಹ ಅಂತಲೇ ಕರೆಯಲಾಗುತ್ತಿತ್ತು. ಆದ್ರೆ, 2001ರಲ್ಲಿ ದಾಳಿಯ ವೇಳೆ ಮೃತಪಟ್ಟಿರುತ್ತಾರೆ. ಇಷ್ಟೆಲ್ಲ ಇತಿಹಾಸ ಇರೋ ಪಂಜ್‌ಶೀರ್‌ ಹಿಂದೆ ಈಗ ಯಾರಿದ್ದಾರೆ ಗೊತ್ತಾ?

ಪಂಜ್‌ಶೀರ್‌ ಹಿಂದೆ ಇದ್ದಾರೆ ಅಮ್ರುಲ್ಲಾಹ್‌ ಸಲೇಹ್‌
ಅಫ್ಘಾನ್‌ ಉಪಾಧ್ಯಕ್ಷರಾಗಿದ್ದ ಸಲೇಹ್‌

blank

ಇಂದು, ಪಂಜ್‌ಶೀರ್‌ ಪ್ರಾಂತ್ಯ ತಾಲಿಬಾನಿಗಳ ಗುಂಡಿನ ಸದ್ದಿಗೆ ಹೆದರದೇ ಎದೆಯೊಡ್ಡಿನಿಂತಿದೆ ಅಂದ್ರೆ, ಅದರ ಹಿಂದೆ ಅಮ್ರುಲ್ಲಾಹ್‌ ಸಲೇಹ್‌ ಇದ್ದಾರೆ. ಇವರು ಅಫ್ಘಾನ್‌ನ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾ ಇದ್ರು. ಆದ್ರೆ, ತಾಲಿಬಾನಿಗಳು ಒಂದೊಂದೆ ಪ್ರಾಂತ್ಯವನ್ನು ವಶಪಡಿಸಿಕೊಳ್ಳಲು ಆರಂಭಿಸಿದಾಗ ಪಂಜ್‌ಶೀರ್‌ಗೆ ಬಂದು ನೆಲೆಸುತ್ತಾರೆ. ಸ್ವತಃ ಅಫ್ಘಾನ್‌ ಅಧ್ಯಕ್ಷರಾಗಿದ್ದ ಅಶ್ರಫ್‌ ಘನಿ ಯುಎಇಗೆ ಓಡಿಹೋಗುತ್ತಾರೆ. ಅದೆಷ್ಟೋ ರಾಜಕಾರಣಿಗಳು, ಅಧಿಕಾರಿಗಳು ಕೂಡ ಬೇರೆ ಬೇರೆ ದೇಶಕ್ಕೆ ಪಲಾಯನ ಮಾಡುತ್ತಾರೆ. ಆದ್ರೆ, ಸಲೇಹ್‌ ಮಾತ್ರ ಅಫ್ಘಾನ್‌ನ ಪ್ರಾಂತ್ಯವಾದ ಪಂಜ್‌ಶೀರ್‌ಗೆ ಬಂದು ನೆಲೆಸುತ್ತಾರೆ.

ಅಫ್ಘಾನ್‌ನ ಸಾವಿರಾರು ಸೈನಿಕರು ಕೂಡ ಸಲೇಹ್‌ ಜೊತೆ ಪಂಜ್‌ಶೀರ್‌ಗೆ ಬರುತ್ತಾರೆ. ಇವರೆಲ್ಲ ತಾಲಿಬಾನಿಗಳ ವಿರುದ್ಧ ಟೊಂಕಕಟ್ಟಿ ನಿಂತಿದ್ದಾರೆ. ವಿಶೇಷ ಅಂದ್ರೆ ಸಲೇಹ್‌ ಜೊತೆ ಮೊಹ್ಮದ್‌ ಶಾ ಮಸೂದ್‌ ಇದ್ರಲ್ಲ ಅವರ ಮಗ ಅಹಮ್ಮದ್‌ ಮಸೂದ್‌ ಕೂಡ ಕೈಜೋಡಿಸಿದ್ದಾರೆ. ಇದೇ ಕಾರಣಕ್ಕೆ ಪಂಜ್‌ಶೀರ್‌ ಸಿಂಹಗಳೆಲ್ಲಾ ಒಟ್ಟಾಗಿ ಬಿಟ್ಟಿವೆ ಅಂತ ಹೇಳಲಾಗುತ್ತಿದೆ.

ಅಫ್ಘಾನ್‌ ಉಪಾಧ್ಯಕ್ಷರಾಗಿರೋ ಸಲೇಹ್‌ ಇದ್ದಾರಲ್ಲ ಇವರು ಸಾಮಾನ್ಯ ವ್ಯಕ್ತಿಯಲ್ಲ. ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ, ಗುಪ್ತಚರ ಇಲಾಖೆಯ ನಿರ್ದೇಶನಾಲಯದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ. ಗೂಢಚಾರ್ಯೆ ವಿಚಾರದಲ್ಲಿ ನಿಸ್ಸಿಮರು. ಒಂದೇ ಮಾತಲ್ಲಿ ಹೇಳ್ಬೇಕು ಅಂದ್ರೆ ನಮ್ಮ ದೇಶದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಇದ್ದಾರಲ್ಲ. ಅವರಂತೆ ಬುದ್ಧಿವಂತ, ಗೂಢಚರ್ಯೆ ವಿಚಾರದಲ್ಲಿ ಚಾಣಾಕ್ಷರಾಗಿದ್ದಾರೆ. ಹೀಗಾಗಿಯೇ ಅದೆಷ್ಟೇ ಬಾರಿ ತಾಲಿಬಾನಿಗಳು ಹತ್ಯೆ ಮಾಡಲು ಪ್ರಯತ್ನಿಸಿದ್ರೂ ದಾಳಿಗೆ ತುತ್ತಾಗಿಲ್ಲ.

blank

ತಾನೇ ಅಫ್ಘಾನ್‌ ಅಧ್ಯಕ್ಷ ಅಂದ ಸಲೇಹ್‌
ವಿದೇಶಿ ನಾಯಕರನ್ನು ಸಂಪರ್ಕಿಸುತ್ತಿರೋ ಸಲೇಹ್‌

ಅಫ್ಘಾನ್‌ನ ಉಪಾಧ್ಯಕ್ಷರಾಗಿದ್ದ ಸಲೇಹ್‌ ಹೇಳುವ ಪ್ರಕಾರ, ಅಫ್ಘಾನ್‌ ಸಂವಿಧಾನದ ಪ್ರಕಾರ ರಾಷ್ಟ್ರೀಯ ಅಧ್ಯಕ್ಷರು ಗೈರಾಗಿದ್ರೆ, ಪಲಾಯನ ಮಾಡಿದ್ರೆ, ರಾಜೀನಾಮೆ ನೀಡಿದ್ರೆ, ಅಥವಾ ಸಾವನ್ನಪ್ಪಿದ್ರೆ ಉಪಾಧ್ಯಕ್ಷರು ಅಧ್ಯಕ್ಷರಾಗಿ ಭಡ್ತಿ ಪಡೆಯುತ್ತಾರೆ. ಸದ್ಯ ನಾನು ದೇಶದ ಒಳಗೆ ಇದ್ದೀನಿ. ಹೀಗಾಗಿ ನಾನೇ ಅಫ್ಘಾನ್‌ ಅಧ್ಯಕ್ಷನಾಗಿದ್ದೇನೆ. ಈ ವಿಚಾರವಾಗಿ ವಿದೇಶಿ ನಾಯರಿಗೂ ತಿಳಿಸಿದ್ದೇವೆ. ಎಲ್ಲಾ ನಾಯಕರನ್ನು ಸಂಪರ್ಕಿಸಿ ಬೆಂಬಲವನ್ನು ಕೋರಿದ್ದೇನೆ ಎಂದು ತಿಳಿಸಿದ್ದಾರೆ.

ಪಂಜ್‌ಶೀರ್‌ ಬಗ್ಗೆ ಮಹಾಭಾರತದಲ್ಲಿ ಉಲ್ಲೇಖ

ಇಂದು ತಾಲಿಬಾನಿಗಳ ಅಟ್ಟಹಾಸದಿಂದ ಅಫ್ಘಾನ್‌ ಅರಾಜತೆ ಎದುರಿಸುತ್ತಿದೆ. ಆದರೆ, ಅಫ್ಘಾನಿಸ್ತಾನ ಹಿಂದೊಮ್ಮೆ ಹೇಗಿತ್ತು ಗೊತ್ತಾ? ಹಿಂದೂ ಗ್ರಂಥಗಳಲ್ಲಿ ಅಲ್ಲಿಯ ಬಗ್ಗೆ ಇರೋ ಉಲ್ಲೇಖ ಏನು ಗೊತ್ತಾ? ಈ ವಿಷಯ ಕೇಳಿದ್ರೆ ನಿಮ್ಮಲ್ಲಿಯೂ ರೋಚಕ ಭಾವನೆ ಉದ್ಭವಗೊಳ್ಳುತ್ತದೆ.

blank

ಅತ್ತ ಇತ್ತ ಎತ್ತ ನೋಡಿದ್ರೂ ಕಣಿವೆಯ ಪ್ರದೇಶ. ಕಣಿವೆಗಳ ನಡುವೆಯೇ ನದಿಯೊಂದು ಪ್ರಶಾಂತವಾಗಿ ಹರಿಯುತ್ತಿದೆ. ಈ ನದಿಯ ಹೆಸರೇ ಪಂಚಮಿ. ಹೌದು, ಈ ನದಿಯಿಂದಾಗಿಯೇ ಪಂಜ್‌ಶೀರ್‌ ಎಂದು ಹೆಸರು ಬಂದಿದೆ ಎಂದು ನಂಬಲಾಗಿದೆ. ಈ ಬಗ್ಗೆ ಮಹಾಭಾರತದಲ್ಲಿ ಉಲ್ಲೇಖವಿದೆ. ಇದು ಪಂಚ್‌ಶೀರ್‌ ಪ್ರಾಂತ್ಯದ ಜನರ ನಂಬಿಕೆಯೂ ಹೌದು.

ಮಾಹಾಭಾರತದಲ್ಲಿ ಅಫ್ಘಾನ್‌ ಹೆಸರು ಏನಿತ್ತು?
ಇಲ್ಲಿಯ ಜನ ಶಿವನ ಭಕ್ತರಾಗಿದ್ರಾ?
ಕಂದಹಾರ್‌ ಪದ ಹುಟ್ಟಿಕೊಂಡಿದ್ದು ಹೇಗೆ?

ಮಹಾಭಾರತದಲ್ಲಿ ಅಫ್ಘಾನ್‌ ಅನ್ನು ಗಾಂಧಾರ ಎಂದೇ ಕರೆಯಲಾಗುತ್ತಿತ್ತು ಎಂಬ ನಂಬಿಕೆ ಇದೆ. ಈ ಗಾಂಧಾರ ಸಾಮ್ರಾಜ್ಯವು ಇಂದಿನ ಪೂರ್ವ ಅಫ್ಘಾನ್‌, ಉತ್ತರ ಪಾಕಿಸ್ತಾನ, ವಾಯುವ್ಯ ಪಂಜಾಬ್‌ ಪ್ರದೇಶವನ್ನು ಒಳಗೊಂಡಿತ್ತು. ಗಾಂಧಾರ ಅಂದ್ರೆ ಶಿವನ ಆರಾಧಕರು ಅಂತ ಅರ್ಥ. ಯಾಕಂದ್ರೆ ಗಾಂಧಾರ ಅನ್ನೋದು ಶಿವನ ಮತ್ತೊಂದು ಹೆಸರು. ಹೀಗಾಗಿ ಅಫ್ಘಾನ್‌ನಲ್ಲಿದ್ದ ಪೂರ್ವಜರು ಶಿವನ ಭಕ್ತರು ಆಗಿದ್ರು ಎಂಬ ನಂಬಿಕೆ ಇದೆ.

ಇದನ್ನೂ ಓದಿ: ಕೇಂದ್ರ ಸಚಿವರ ಭೇಟಿಯಾದ NBF ನಿಯೋಗ; ಈ ಭೇಟಿ ಹಿಂದಿದೆ ಒಂದು ಪ್ರಮುಖ ಕಾರಣ

ಆದ್ರೆ, ತನ ನಂತರದಲ್ಲಿ ಚಂದ್ರಗುಪ್ತ, ಅಶೋಕ, ಮೌರ್ಯರು, ಮೋಘಲ್‌ ಚಕ್ರವರ್ತಿಗಳು ಆಳಿದ್ದಾರೆ. ಇವರ ಆಡಳಿತದ ಸಂದರ್ಭದಲ್ಲಿ ಇಲ್ಲಿಯ ಪ್ರದೇಶಗಳ ಹೆಸರು ಬದಲಾಗಿದೆ ಎಂಬ ನಂಬಿಕೆ ಇದೆ. ಕಂದಹಾರ್‌ ಎಂಬ ಪದ ಹುಟ್ಟಿಕೊಂಡಿದ್ದೇ ಗಾಂಧಾರ ಪದದಿಂದ ಎಂಬ ನಂಬಿಕೆ ಇದೆ.

ತಾಲಿಬಾನಿಗಳು ಕಪಿಮುಷ್ಟಿಯಲ್ಲಿ ಸಿಲುಕಿ ಅಫ್ಘಾನ್‌ ನಲುಗಿ ಹೋಗಿದೆ. ಆದ್ರೆ, ಅದೇ ಅಫ್ಘಾನ್‌ಗೆ ಹಿಂದೊಮ್ಮೆ ಸುಂದರ ಇತಿಹಾಸ ಇತ್ತು ಅನ್ನೋದನ್ನು ಮರೆಯಲಾಗದು. ಅಲ್ಲಿ ಶಾಂತಿ ನಲೆಸಬೇಕು ಅಂದ್ರೆ ಪಂಜ್‌ಶೀರ್‌ ಜನರಂತೆ ತಾಲಿಬಾನಿಗಳು ವಿರುದ್ಧ ಹೋರಾಟ ನಡೆಸಬೇಕು.

blank

 

Source: newsfirstlive.com Source link