ಕ್ರಿಕೆಟ್ ಬಿಟ್ಟು ರಾಕ್​ಸ್ಟಾರ್ ಆದ್ರಾ ಧೋನಿ? ಫ್ಯಾನ್ಸ್​ ಅಂತೂ ಫುಲ್ ಫಿದಾ..!

ಕ್ರಿಕೆಟ್ ಬಿಟ್ಟು ರಾಕ್​ಸ್ಟಾರ್ ಆದ್ರಾ ಧೋನಿ? ಫ್ಯಾನ್ಸ್​ ಅಂತೂ ಫುಲ್ ಫಿದಾ..!

ಐಪಿಎಲ್ 2021ರ ಉಳಿದ ಪಂದ್ಯಗಳು ಸೆಪ್ಟೆಂಬರ್ 19 ರಿಂದ ಆರಂಭವಾಗಲಿದ್ದು, ಶೀಘ್ರದಲ್ಲೇ ಎಂಎಸ್ ಧೋನಿ ಮತ್ತೊಮ್ಮೆ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ದುಬೈನಲ್ಲಿ ಸಮರಾಭ್ಯಾಸ ಆರಂಭಿಸಿರುವ ಧೋನಿ, ಟೂರ್ನಿಗೂ ಮುನ್ನವೇ ಮಿಸ್ಟರ್​ ಕೂಲ್ ತಮ್ಮ ನ್ಯೂ ಹೇರ್‌ ಸ್ಟೈಲ್‌ನಿಂದಾಗಿ ಸಖತ್ ಸದ್ದು ಮಾಡ್ತಿದ್ದಾರೆ. ಇತ್ತೀಚಿಗೆ ಧೋನಿ ಜಾಹೀರಾತು ಚಿತ್ರೀಕರಣಕ್ಕಾಗಿ ಹೊಸ ಕೇಶವಿನ್ಯಾಸವನ್ನ ಮಾಡಿಕೊಂಡಿದ್ರು.

ಆ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಇದೀಗ ಮತ್ತೊಮ್ಮೆ ಧೋನಿಯ ಹೊಸ ಕೇಶವಿನ್ಯಾಸ ವೈರಲ್ ಆಗಿದೆ. ಐಪಿಎಲ್ 2021ರ ಹೊಸ ಜಾಹೀರಾತುಗಾಗಿ ಧೋನಿ ವರ್ಣರಂಜಿತ ಕೂದಲಿನ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಧೋನಿಯ ಕೂದಲು ವರ್ಣಮಯವಾಗಿದ್ದು, ರಾಕ್ ಸ್ಟಾರ್ ಲುಕ್​​​ನಲ್ಲಿ ಕಾಣಿಸಿಕೊಂಡಿದ್ದಾರೆ.

Source: newsfirstlive.com Source link