ಜೀ ವಾಹಿನಿ ಪಾಲಾಯ್ತು KGF​-2 ಚಿತ್ರದ ದಕ್ಷಿಣ ಭಾರತ ಭಾಷೆಗಳ ಸ್ಯಾಟ್​ಲೈಟ್ಸ್​ ರೈಟ್ಸ್​

ಜೀ ವಾಹಿನಿ ಪಾಲಾಯ್ತು KGF​-2 ಚಿತ್ರದ ದಕ್ಷಿಣ ಭಾರತ ಭಾಷೆಗಳ ಸ್ಯಾಟ್​ಲೈಟ್ಸ್​ ರೈಟ್ಸ್​

‘ಕೆಜಿಎಫ್ ಚಾಪ್ಟರ್-2’ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ. ಏನಾದ್ರೊಂದು ಧಮಾಕೇ ಧಾರ್ ಸಮಾಚಾರಗಳನ್ನ ನೀಡುತ್ತಾ ಕೆಜಿಎಫ್​ ಸಿನಿಮಾ ತಂಡ ಪ್ರೇಕ್ಷಕರ ಮನದಲ್ಲಿ ಕನವರಿಕೆಯನ್ನ ಮಾಡುತ್ತಲಿರುತ್ತೆ.

ಅದ್​ ಯಾವಾಗಪ್ಪ ಕೆಜಿಎಫ್ ಚಾಪ್ಟರ್-2 ಚಿತ್ರ ರಿಲೀಸ್​ ಆಗೋದು ಅಂತಾ ಇಡೀ ಭಾರತೀಯ ಚಿತ್ರರಂಗವೇ ಕಾತುರದಿಂದ ಕಾದು ಕುಳಿತಿದೆ. ಹೀಗಿರುವಾಗಲೇ ಕೆಜಿಎಫ್-2 ​ ಚಿತ್ರತಂಡದಿಂದ ಮತ್ತೊಂದು ಇಂಟ್​ರೆಸ್ಟಿಂಗ್​ ವಿಚಾರ ಹೊರಬಂದಿದೆ.

ಮೊನ್ನೆಯಷ್ಟೇ ಒಟಿಟಿ ಪ್ಲಾಟ್‌ಫಾರ್ಮ್‌ ಸಂಸ್ಥೆಯೊಂದು ಕೆಜಿಎಫ್-2 ಚಿತ್ರ ನೇರವಾಗಿ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡಕ್ಕೆ ಬರೋಬರಿ 255 ಕೋಟಿ ರೂಪಾಯಿಗಳ ಬಿಗ್ ಆಫರ್ ನೀಡಿತ್ತು. ಅದ್ರೆ ಕೆಜಿಎಫ್​ ಚಿತ್ರತಂಡ ಮಾತ್ರ ಇದರ ಬಗ್ಗೆ ಇನ್ನು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.

ಇದೀಗ ಕೆಜಿಎಫ್​ -2 ಚಿತ್ರದ ದಕ್ಷಿಣ ಭಾರತ ಭಾಷೆಗಳ ಸ್ಯಾಟ್​ಲೈಟ್​ ಹಕ್ಕನ್ನು ಕಿರುತೆರೆಯ ನಂ.1 ವಾಹಿನಿ ಜೀ ನೆಟ್​ವರ್ಕ್​ ಪಡೆದುಕೊಂಡಿದೆ. ಹೌದು ಇಂದು ವರ ಮಹಾಲಕ್ಷ್ಮಿ ದಿನ ಈ ಸಂಬಂಧ ಹೊಂಬಾಳೆ ಫಿಲಂಸ್ ನಿರ್ಮಾಣ ಸಂಸ್ಥೆಯೊಂದಿಗೆ ಜೀ ವಾಹಿನಿ ಒಪ್ಪಂದಕ್ಕೆ ಸಹಿ ಹಾಕಿದೆ.

ಇನ್ನು ಭಾರೀ ಮೊತ್ತಕ್ಕೆ ಕೆಜಿಎಫ್-2 ಸ್ಯಾಟ್ ಲೈಟ್ ಹಕ್ಕು ಖರೀದಿಯಾಗಿದೆ ಎಂದು ಹೇಳಲಾಗಿದೆ. ನಿರ್ಮಾಪಕ ವಿಜಯ್ ಕಿರಗಂದೂರ್ ಒಪ್ಪಂದ ಪತ್ರವನ್ನು ಜೀ ಕನ್ನಡ ವಾಹಿನಿ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರ್ ಅವರಿಗೆ ಹಸ್ತಾಂತರಿಸಿದ್ದಾರೆ. ಕೇವಲ ಕನ್ನಡ ಮಾತ್ರವಲ್ಲದೇ, ತಮಿಳು, ತೆಲುಗು, ಮಲಯಾಳಂ ಭಾಷೆಗಳ ಸ್ಯಾಟ್ ಲೈಟ್ ಹಕ್ಕು ಕೂಡಾ ಜೀ ಟಿವಿ ಪಾಲಾಗಿದೆ.

Source: newsfirstlive.com Source link