ಕಿವೀಸ್​​​ ಆಲ್​ರೌಂಡ್ ಕ್ರಿಸ್ ಕ್ರೈನ್ಸ್​​ಗೆ ಹೃದಯ ಶಸ್ತ್ರಚಿಕಿತ್ಸೆ; ಆರೋಗ್ಯದಲ್ಲಿ ಕೊಂಚ ಚೇತರಿಕೆ

ಕಿವೀಸ್​​​ ಆಲ್​ರೌಂಡ್ ಕ್ರಿಸ್ ಕ್ರೈನ್ಸ್​​ಗೆ ಹೃದಯ ಶಸ್ತ್ರಚಿಕಿತ್ಸೆ; ಆರೋಗ್ಯದಲ್ಲಿ ಕೊಂಚ ಚೇತರಿಕೆ

ಹೃದಯ ಸಂಬಂಧ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿ ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ನ್ಯೂಜೆಲೆಂಡ್​ ಕ್ರಿಕೆಟ್ ತಂಡದ ಮಾಜಿ ಆಲ್​​​ರೌಂಡರ್ ಕ್ರಿಸ್​ ಕ್ರೈನ್ಸ್​ ಚೇತರಿಸಿಕೊಳ್ಳುತ್ತಿದ್ದು, ಆಫ್ ಲೈಫ್ ಸಪೋರ್ಟ್​ ಮೂಲಕ ಉಸಿರಾಟ ನಡೆಸುತ್ತಿದ್ದಾರೆ ಅಂತಾ ವರದಿಯಾಗಿದೆ. ​ ​

ಕ್ರಿಸ್​ ಕ್ರೈನ್ಸ್ ಸಿಡ್ನಿಯಲ್ಲಿರುವ ಸೇಂಟ್ ವಿನ್ಸೆಂಟ್ ಆಸ್ಪತ್ರೆಗೆ ದಾಖಲಾಗಿದ್ದರು. ಗಂಭೀರ ಸ್ವರೂಪದ ಸಮಸ್ಯೆಯಾದ ಏಯೋರ್ಟಿಕ್ ಡಿಸೆಕ್ಷನ್‌ಗೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಮೇಜರ್ ಸರ್ಜರಿ ಮಾಡಲಾಗಿತ್ತು. ಶಸ್ತ್ರಚಿಕಿತ್ಸೆಯ ಬಳಿಕವೂ ಅವರು ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಅಂತಾ ವರದಿಯಾಗಿತ್ತು. ಇದೀಗ ಅವರು ಗುಣಮುಖರಾಗುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಕ್ರಿಸ್ ಅವರು ಗುಣಮುಖರಾಗುತ್ತಿದ್ದಾರೆ. ಅವರ ಕುಟುಂಬದವರೊಂದಿಗೆ ಸಂಹವನ ನಡೆಸಲು ಸಾಧ್ಯವಾಗಿದೆ. ಈ ವಿಚಾರವನ್ನ ತಿಳಿಸಲು ನನಗೆ ತುಂಬಾ ಖುಷಿಯಾಗುತ್ತಿದೆ. ಅವರ ಬಗ್ಗೆ ಕಾಳಜಿ ವಹಿಸಿ ಆರೋಗ್ಯ ಸುಧಾರಣೆಗಾಗಿ ಪಾರ್ಥಿಸಿದ ತಮಗೆಲ್ಲರಿಗೂ ಕ್ರಿಸ್ ಹಾಗೂ ಅವರ ಕುಂಟು ಚಿರಋಣಿಯಾಗಿದೆ ಅಂತಾ ಅವರ ವಕೀಲ ಅರೋನ್ ತಿಳಿಸಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ 33ಕ್ಕೂ ಅಧಿಕ ಸರಾಸರಿಯಲ್ಲಿ 3,320 ರನ್‌ಗಳನ್ನು ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 29.40 ಸರಾಸರಿಯಲ್ಲಿ 218 ವಿಕೆಟ್ ಕಬಳಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 29.46ರ ಸರಾಸರಿಯಲ್ಲಿ 4950 ರನ್‌ಗಳಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 201 ವಿಕೆಟ್‌ಗಳನ್ನು ಕ್ರಿಸ್ ತಮ್ಮದಾಗಿಸಿಕೊಂಡಿದ್ದಾರೆ.

Source: newsfirstlive.com Source link