‘ಪಿಚ್ ರೋಲರ್’ ಕಳ್ಳತನ ಮಾಡಿದ್ರಾ ಟೀಮ್ ಇಂಡಿಯಾ ಆಲ್​ರೌಂಡರ್..?

‘ಪಿಚ್ ರೋಲರ್’ ಕಳ್ಳತನ ಮಾಡಿದ್ರಾ ಟೀಮ್ ಇಂಡಿಯಾ ಆಲ್​ರೌಂಡರ್..?

ಟೀಮ್ ಇಂಡಿಯಾದ ಕ್ರಿಕೆಟಿಗ ಪರ್ವೇಜ್ ರಸೂಲ್ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ. ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಸಂಸ್ಥೆಗೆ ಸೇರಿದ ಪಿಚ್ ರೋಲರ್​​ರನ್ನ, ಆಲ್​ರೌಂಡರ್ ಪರ್ವೇಜ್ ರಸೂಲ್ ಕಳ್ಳತನ ಮಾಡಿದ್ದಾರೆಂದು ಆರೋಪಿಸಲಾಗಿದೆ. ಇ-ಮೇಲ್ ಮೂಲಕ ಜೆ & ಕೆ ಕ್ರಿಕೆಟ್ ಸಂಸ್ಥೆ, ಪಿಚ್ ರೋಲರ್​ರನ್ನ ತಕ್ಷಣ ಹಿಂದಿರುಗಿಸುವಂತೆ ಕ್ರಿಕೆಟಿಗ ಪರ್ವೇಜ್ ರಸೂಲ್​​ಗೆ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಇಲ್ಲದಿದ್ದರೆ ಪೊಲೀಸ್ ಕ್ರಮ ಕೈಗೊಳ್ಳುವುದಾಗಿ ಜಮ್ಮು & ಕಾಶ್ಮೀರ ಕ್ರಿಕೆಟ್ ಅಸೋಸಿಯೇಶನ್‌ ಎಚ್ಚರಿಕೆ ನೀಡಿದೆ. ಇನ್ನು ರಾಜ್ಯ ಕ್ರಿಕೆಟ್ ಸಂಸ್ಥೆಯ ಗಂಭೀರ ಆರೋಪಗಳಿಗೆ ಕ್ರಿಕೆಟಿಗ ಪರ್ವೇಜ್ ರಸೂಲ್ ಪ್ರತಿಕ್ರಿಯಿಸಿದ್ದು, ನನ್ನ ವಿರುದ್ಧದ ಆರೋಪ ನಿಜಕ್ಕೂ ದುರದೃಷ್ಟಕರ ಎಂದು ಕರೆದಿದ್ದಾರೆ.

ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ನನ್ನ ದೇಶವನ್ನ ಪ್ರತಿನಿಧಿಸಿದ್ದೇನೆ. ಐಪಿಎಲ್, ದುಲೀಪ್ ಟ್ರೋಫಿ, ದೇವಧರ್ ಟ್ರೋಫಿ, ಇಂಡಿಯಾ ಎ, ಇರಾನಿ ಟ್ರೋಫಿ, ಕಳೆದ 6 ವರ್ಷಗಳಿಂದ ಜಮ್ಮು & ಕಾಶ್ಮೀರ ರಣಜಿ ತಂಡದ ನಾಯಕತ್ವ ವಹಿಸಿದ್ದೇನೆ. ಬಿಸಿಸಿಐನಿಂದ 2 ಬಾರಿ ಅತ್ಯುತ್ತಮ ಆಲ್​ರೌಂಡರ್ ಪ್ರಶಸ್ತಿಯನ್ನು ಪಡೆದಿದ್ದೇನೆ. ಇಂದು JKCA ಯಿಂದ ರೋಲರ್ ತೆಗೆದುಕೊಂಡಿದ್ದೇನೆ ಎಂದು ನೋಟಿಸ್ ಪಡೆದಿದ್ದೇನೆ. ಇದು ನಿಜವಾಗಿಯೂ ದುರದೃಷ್ಟಕರ. ನಾನು JKCAಯಿಂದ ಯಾವುದೇ ಪಿಚ್​​ ರೋಲರ್ ಅಥವಾ ಯಂತ್ರವನ್ನು ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ ಎಂದು ತಿಳಿಸಿದ್ದಾರೆ.

Source: newsfirstlive.com Source link