ರೇ..ರೇ..ರೇ ಭಜರಂಗಿ.. ವರಮಹಾಲಕ್ಷ್ಮೀ ಹಬ್ಬಕ್ಕೆ ಭಜರಂಗಿ ಭಜನೆ ಮಾಡಿದ ಶಿವಣ್ಣ

ರೇ..ರೇ..ರೇ ಭಜರಂಗಿ.. ವರಮಹಾಲಕ್ಷ್ಮೀ ಹಬ್ಬಕ್ಕೆ ಭಜರಂಗಿ ಭಜನೆ ಮಾಡಿದ ಶಿವಣ್ಣ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಭಜರಂಗಿ-2 ಸಿನಿಮಾದ ಲಿರಿಕಲ್ ಟೈಟಲ್ ಸಾಂಗ್ ಇಂದು ರಿಲೀಸ್ ಆಗಿದ್ದು, ಕೈಲಾಶ್​ ಖೇರ್​ ಮಾಂತ್ರಿಕ ಧ್ವನಿಗೆ  ಪ್ರೇಕ್ಷಕರು ಫಿದಾ ಆಗಿದ್ದಾರೆ.

2013ರಲ್ಲಿ ತೆರೆಮೇಲೆ ಬಂದು ಸ್ಯಾಂಡಲ್‍ವುಡ್ ನಲ್ಲಿ ಕಮಾಲ್ ಮಾಡಿದ್ದ ಭಜರಂಗಿ ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಇದೀಗ ಬರೋಬ್ಬರಿ ಎಂಟು ವರ್ಷಗಳ ನಂತರ ಶಿವಣ್ಣ ಹಾಗೂ ಎ.ಹರ್ಷ ಕಾಂಬಿನೇಷನ್ ನಲ್ಲಿ ಮತ್ತೆ ಜನರನ್ನು ರಂಜಿಸಲು ಭಜರಂಗಿ-2 ಸಿನಿಮಾ ಮೂಲಕ ರೆಡಿಯಾಗಿ ಬರುತ್ತಿದ್ದಾರೆ ಶಿವಣ್ಣ.  ಸದ್ಯಕ್ಕೆ ಈ ಸಿನಿಮಾದ ಲಿರಿಕಲ್ ಸೈಕಲ್ ಸಾಂಗ್ ರಿಲೀಸ್ ಆಗಿ ಭಜರಂಗಿ ಭಕ್ತರನ್ನು ಸೆಳೆಯುತ್ತಿದೆ.

ಇದನ್ನೂ ಓದಿ: ಗಣೇಶನ ಹಬ್ಬಕ್ಕೆ ಶಿವಣ್ಣನ ದರ್ಶನ; ಬಿಗ್​ ಸ್ಕ್ರೀನ್​ಗೆ ಬರಲಿದೆ ‘ಭಜರಂಗಿ 2’

ಇದಕ್ಕು ಮುಂಚೆ ಚಿತ್ರತಂಡ ಸಿನಿಮಾದ ಟೀಸರ್ ಬಿಡುಗಡೆ ಮಾಡಿ ಜನರಿಂದ ಉತ್ತಮ ಪ್ರಶಂಸೆ ಪಡೆದುಕೊಂಡಿತ್ತು, ಇದೀಗ ಆನಂದ್ ಆಡಿಯೋ ಮೂಲಕ ಯೂಟ್ಯೂಬ್‍ನಲ್ಲಿ ಸಾಂಗ್ ಬಿಡುಗಡೆ ಮಾಡಿದ್ದು ಒಂದು ಗಂಟೆಯೊಳಗೆ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಈಗಾಗಲೇ ವೀಕ್ಷಿಸಿದ್ದಾರೆ.

Source: newsfirstlive.com Source link