ಅಂದು ಹಬ್ಬಕ್ಕೆ ಅಂತ ರವಿಚಂದ್ರನ್​​​ರನ್ನ 200 ರೂ. ಕೇಳಿದ್ರೆ ಏನು ಮಾಡಿದ್ರು ಗೊತ್ತಾ? ಜಗ್ಗೇಶ್ ಭಾವುಕ

ಅಂದು ಹಬ್ಬಕ್ಕೆ ಅಂತ ರವಿಚಂದ್ರನ್​​​ರನ್ನ 200 ರೂ. ಕೇಳಿದ್ರೆ ಏನು ಮಾಡಿದ್ರು ಗೊತ್ತಾ? ಜಗ್ಗೇಶ್ ಭಾವುಕ

ಮಠ ಗುರುಪ್ರಸಾದ್ ನವರಸ ನಾಯಕ ಜಗ್ಗೇಶ್ ಕಾಂಬಿನೇಷನ್‌ ‘ರಂಗನಾಯಕ’ ಚಿತ್ರೀಕರಣ ಶುರುವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರದ ಫೋಟೋಗಳು ಸಿಕ್ಕಾಪಟ್ಟೆ ವೈರಲ್​ ಕೂಡ ಆಗಿದೆ. ನವರಸ ನಾಯಕನ ಹೊಸ ಅವತಾರಕ್ಕೆ ಅಭಿಮಾನಿಗಳು ಫಿದಾ ಆಗಿಬಿಟ್ಟಿದ್ದಾರೆ, ಅಷ್ಟೇ ಅಲ್ಲ, ಈ ಚಿತ್ರದಲ್ಲಿ ಟಿವಿ ಸೀರಿಯಲ್​ನಲ್ಲಿ ನಟಿಸ್ತಾಯಿದ್ದ ನಟಿ ಮೊದಲ ಬಾರಿಗೆ ಬಿಗ್​ ಸ್ಕ್ರೀನ್​ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂಬುದು ವಿಶೇಷ.

ಚಿತ್ರೀಕರಣದ ವೇಳೆ ನ್ಯೂಸ್​ಫಸ್ಟ್​ನ ಜೊತೆ ಮಾತನಾಡಿದ ನಟ ಜಗ್ಗೇಶ್​ ತಮ್ಮ ಹಿಂದಿನ ದಿಗಳನ್ನು ನೆನೆದಿದ್ದಾರೆ. ಕೊರೊನಾ ಕಾರಣಕ್ಕಾಗಿ ಸುಮಾರು ಎರಡು ವರ್ಷಗಳ ಕಾಲ ಈ ಎಲ್ಲ ಖುಷಿ,ಸಂತೋಷ ನಿಂತು ಹೋಗಿತ್ತು, ಪರಿಣಾಮ ಎಷ್ಟೋ ಕಾರ್ಮಿಕರು ಬಹಳ ಸಂಕಷ್ಟದ ಜೀವನ ಸಾಗಿಸಿದ್ದಾರೆ. ಒಬ್ಬ ಹಿರಿಯ ನಾಯಕನಾಗಿ ಈ ಬಗ್ಗೆ ಯೋಚನೆ ಮಾಡಲೇ ಬೇಕು.

ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬದ ದಿನ ಅಭಿಮಾನಿಗಳಿಗೆ ಶುಭ ಸುದ್ದಿ ಕೊಟ್ಟ ಪ್ರೇಮ್​

ಇವತ್ತಿನ ಈ ಯಾಂತ್ರಿಕ ಜೀವನದಲ್ಲಿ ಎಲ್ಲರು ತಮ್ಮ ಜೀವನದಲ್ಲಿ ಬ್ಯೂಸಿಯಾಗಿದ್ದಾರೆ. ನಮ್ಮ ಕಾಲದಲ್ಲಿ ಹೀಗೀರಲಿಲ್ಲ ಎಂದ ಅವರು ನಮ್ಮ ಕಾಲದ ನಾಯಕ ನಟರಾದ ಟೈಗರ್​ ಪ್ರಭಾಕರ್​, ಅಂಬರೀಶ್​ ಅವರು ಸೆಟ್​ಗೆ ಬಂದು ನಮ್ಮ ಕುಶಲ ಕ್ಷೇಮ ಕುರಿತು ವಿಚಾರಿಸಿಕೊಳ್ತಿದ್ರು..   ಗಣೇಶ ಹಬ್ಬಕ್ಕೆ ಹಣ ಇರಲಿಲ್ಲ ರವಿಚಂದ್ರನ್​ಗೆ 200 ರೂಪಾಯಿ ಬೇಕಿತ್ತು ಅಂತ ಕೇಳಿದಾಗ 500 ರೂಪಾಯಿ ಕೊಟ್ಟು ಕಳಿಸಿದ್ರು.

ಹೀಗೆ ಆಗಿನ ಕಾಲದ ನಟರು  ಮನೆಯ ಬಗ್ಗೆ, ಮಕ್ಕಳ ಬಗ್ಗೆ ಕೇಳ್ತಿದ್ರೂ. ಏನಾದ್ರೂ ಹಣದ ಸಮಸ್ಯೆ ಅಂದ್ರೆ ನಿರ್ಮಾಪಕರಿಗೆ ಹೇಳಿ ಸ್ವಲ್ಪ ಹಣ ಕೊಡುವಂತೆ ಪ್ರೀತಿಯಿಂದ ಹೇಳ್ತಿದ್ರೂ.  ಈ ವಿಚಾರದಲ್ಲಿ ಪ್ರಭಾಕರ್​ ಮತ್ತು ಅಂಬರೀಶ್​ ಅವರು ತುಂಬ ನೆನಪಾಗ್ತಾರೆ ಎಂದು ಜಗ್ಗೇಶ್​ ತಮ್ಮ ಹಿಂದಿನ ದಿನಗಳನ್ನ ನ್ಯೂಸ್​ಫಸ್ಟ್​ನ ಜೊತೆ ಹಂಚಿಕೊಂಡಿದ್ದಾರೆ. ಆದ್ರೆ ಇಂದಿನ ಜಮಾನದ ಜನ ಯಾಂತ್ರಿಕ ಜೀವನದಲ್ಲಿ ಸಾಗ್ತಿದ್ದು, ಇನ್ನೊಬ್ಬರ ಸಹವಾಸವೇ ಬೇಡ ಅನ್ನೋ ಹಾಗಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿದರು.

Source: newsfirstlive.com Source link