ಅಪ್ಪ ಐ ಲವ್​ ಯೂ ಪಾ ಅಂತ ಕನ್ನಡ ಪ್ರೇಮ ಮೆರೆದ ಡೇವಿಡ್​​ ವಾರ್ನರ್​; ಮನಗೆದ್ದ ಬ್ಯಾಟ್ಸ್​​​ಮನ್

ಅಪ್ಪ ಐ ಲವ್​ ಯೂ ಪಾ ಅಂತ ಕನ್ನಡ ಪ್ರೇಮ ಮೆರೆದ ಡೇವಿಡ್​​ ವಾರ್ನರ್​; ಮನಗೆದ್ದ ಬ್ಯಾಟ್ಸ್​​​ಮನ್

ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರುವ ಡೇವಿಡ್​​ ವಾರ್ನರ್​​, ಇದೀಗ ಕನ್ನಡ ಪ್ರೇಮವನ್ನ ಮೆರೆದಿದ್ದಾರೆ. ತಮ್ಮ ಇನ್ಸ್​​ಸ್ಟಾಗ್ರಾಂ ಖಾತೆಯಲ್ಲಿ ವಾರ್ನರ್​​ ತಮ್ಮ ಮಗಳ ವಿಡಿಯೋವೊಂದನ್ನ ಪೋಸ್ಟ್​ ಮಾಡಿದ್ದಾರೆ. ಅದಕ್ಕೆ ಕನ್ನಡದ ಚೌಕ ಚಿತ್ರದ ’ಅಪ್ಪ ಐ ಲವ್ ಯು ಪ’ ಹಾಡನ್ನ ಹಿನ್ನೆಲೆಯಲ್ಲಿ ಬಳಸಿದ್ದಾರೆ.

ಆಸ್ಟ್ರೇಲಿಯಾದ ಬ್ಯಾಟ್ಸ್​ಮನ್ ಆಗಿರುವ​ ಡೇವಿಡ್​ ವಾರ್ನರ್​ ಅಗಸ್ಟ್​ 10ರಂದು ಐಪಿಎಲ್​ನ ಉಳಿದ ಪಂದ್ಯಗಳ ಭಾಗವಾಗೋದನ್ನ ತಿಳಿಸಿದ್ದಾರೆ. ಮೊದಲಾರ್ಧದ ಐಪಿಎಲ್​ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ವಾರ್ನರ್​​ ನಾಯಕನ ಪಟ್ಟದಿಂದ ಕೆಳಗಿಳಿದಿದ್ರು. ಆ ಬಳಿಕ ನಡೆದ ಪಂದ್ಯದಲ್ಲಿ ಬೆಂಚ್​ಗೆ ಸೀಮಿತವಾಗಿದ್ರು. ಸೆಪ್ಟೆಂಬರ್​​ 19ರಿಂದ ಆರಂಭವಾಗಲಿರುವ 14ನೇ ಆವೃತ್ತಿಯ ಉಳಿದ ಪಂದ್ಯಗಳ ಐಪಿಎಲ್​ ಟೂರ್ನಿ ಅಕ್ಟೋಬರ್​ 10ಕ್ಕೆ ಮುಗಿಯಲಿದೆ. ಆ ಬಳಿಕ ಯುಇಎನಲ್ಲೇ ನಡೆಯಲಿರುವ ವಿಶ್ವಕಪ್​ ಟೂರ್ನಿಯಲ್ಲಿ ವಾರ್ನರ್​ ಆಸಿಸ್​​ ಪರ ಬ್ಯಾಟ್​​ ಬೀಸಲಿದ್ದಾರೆ.

 

View this post on Instagram

 

A post shared by David Warner (@davidwarner31)

Source: newsfirstlive.com Source link