ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ; ಪೂಜೆ ಮಾಡಿ ಶುಭ ಕೋರಿದ ಡಿ.ಕೆ ರವಿ ಪತ್ನಿ ಕುಸುಮ

ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ; ಪೂಜೆ ಮಾಡಿ ಶುಭ ಕೋರಿದ ಡಿ.ಕೆ ರವಿ ಪತ್ನಿ ಕುಸುಮ

ಬೆಂಗಳೂರು: ನಾಡಿನಾದ್ಯಂತ ವರಮಹಾಲಕ್ಷ್ಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕಾಂಗ್ರೆಸ್​ ನಾಯಕಿ, ದಿವಂಗತ ಐಎಎಸ್​ ಅಧಿಕಾರಿ ಡಿ.ಕೆ ರವಿ ಅವರ ಪತ್ನಿ ಕುಸುಮ ಹನುಮಂತಪ್ಪ ರಾಯಪ್ಪ ಅವರು ಇಂದು ತಮ್ಮ ನಿವಾಸದಲ್ಲಿ ವರಮಹಾಲಕ್ಷ್ಮಿ ಹಬ್ಬ ಆಚರಣೆ ಮಾಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ಕುಸುಮ ಅವರು, ಎಲ್ಲರಿಗೂ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು. ನಿಮ್ಮ ಮನೆ-ಮನಗಳಲ್ಲಿ ಸುಖ, ಶಾಂತಿ, ನೆಮ್ಮದಿ ನೆಲಸಿ, ದೇವಿಯ ಆಶಿರ್ವಾದ ಎಲ್ಲರಿಗೂ ಲಭಿಸಲಿ ಎಂದು ಹಾರೈಸುತ್ತೇನೆ ಎಂದು ಮನವಿ ಮಾಡಿದ್ದಾರೆ.

ಇನ್ನು ವರ ಮಹಾಲಕ್ಷ್ಮಿ ಪೂಜೆ ಹಿನ್ನೆಲೆ ಹೂವು, ಹಣ್ಣು, ಬಾಳೆದಿಂಡಿನ ವ್ಯಾಪಾರ ಜೋರಾಗಿದೆ. ಆದ್ರೆ ಕೊರೊನಾದಿಂದಾಗಿ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಸುಪ್ರಸಿದ್ದ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಾಲಯದ ಬಾಗಿಲು ಬಂದ್ ಆಗಲಿದೆ. ದೇವಸ್ಥಾನದ ಅರ್ಚಕರು ಮಾತ್ರ ಮುಂಜಾನೆ 5 ಗಂಟೆಗೆ ಪೂಜೆ ನೆರವೇರಿಸಿ ಬಾಗಿಲು ಬಂದ್ ಮಾಡಿದ್ದಾರೆ. ಇಂದಿನಿಂದ ನಾಲ್ಕು ದಿನಗಳ ಕಾಲ ದೇಗುಲ ಮುಚ್ಚಲಿದ್ದು, ಹಬ್ಬದ ಪ್ರಯುಕ್ತ ಮಹಾಲಕ್ಷ್ಮೀ ನೋಡಲು ಬರುವ ಭಕ್ತಾದಿಗಳಿಗೆ ಭಾರೀ ನಿರಾಸೆಯಾಗಿದೆ.

Source: newsfirstlive.com Source link