ತಾಲಿಬಾನ್​​ನಿಂದ ರಕ್ಷಣೆಗಾಗಿ ಕಂಪೌಂಡ್​ ರೇಜರ್ ವೈರ್​ಗಳಾಚೆ ಮಕ್ಕಳನ್ನ ಎಸೆಯುತ್ತಿದ್ದಾರೆ ತಾಯಂದಿರು

ತಾಲಿಬಾನ್​​ನಿಂದ ರಕ್ಷಣೆಗಾಗಿ ಕಂಪೌಂಡ್​ ರೇಜರ್ ವೈರ್​ಗಳಾಚೆ ಮಕ್ಕಳನ್ನ ಎಸೆಯುತ್ತಿದ್ದಾರೆ ತಾಯಂದಿರು

ಅಫ್ಘಾನ್​ನಲ್ಲಿ ಮಹಿಳೆಯರಿಗೆ ಸಮಸ್ಯೆ ಕೊಡೋದಿಲ್ಲ.. ಶರಿಯಾ ನಿಯಮಗಳ ಅನ್ವಯ ಅವರಿಗೆ ಅಗತ್ಯ ಸೌಲಭ್ಯಗಳನ್ನು ನೀಡ್ತೇವೆ. ನಾವು ಬದಲಾಗಿದ್ದೇವೆ ಎಂದು ಹೇಳಿಕೊಂಡಿದ್ದ ತಾಲಿಬಾನ್​ ತನ್ನ ಕೌರ್ಯದ ಮುಖವನ್ನು ತೋರಿಸುತ್ತಿದೆ. ದೇಶದಲ್ಲಿ ಪ್ರಜಾಪ್ರಭುತ್ವದ ಸರ್ಕಾರ ಯಾವುದೇ ಕಾರಣಕ್ಕೆ ಅವಕಾಶ ಕೊಡೋದಿಲ್ಲ. ಅಫ್ಘಾನ್​ನಲ್ಲಿ ಶರಿಯಾ ಕಾನೂನು ಅನ್ವಯ ಸರ್ಕಾರ ನಡೆಯಲಿದೆ ಎಂದು ನಾಯಕರು ಸ್ಪಷ್ಟಪಡಿಸಿದ್ದಾರೆ.

ಈ ನಡುವೆಯ ತಾಲಿಬಾನಿಗಳ ಅಟ್ಟಹಾಸಕ್ಕೆ ನಲುಗಿ ಹೋಗಿರುವ ಮಹಿಳೆಯರು ತಮ್ಮ ಮಕ್ಕಳೊಂದಿಗೆ ದೇಶ ತೊರೆಯಲು ಮುಂದಾಗಿದ್ದು, ಕಾಬೂಲ್ ಏರ್​ಪೋರ್ಟ್​ಗೆ ಜನ ಇನ್ನೂ ಬರುತ್ತಲೇ ಇದ್ದಾರೆ. ದೇಶ ತೊರೆಯುವುದಕ್ಕೆ ಹಾತೊರೆಯುತ್ತಿರುವ ಅಫ್ಘನ್ನರು, ತಾಲಿಬಾನಿ ಆಡಳಿತದಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಡುತ್ತಿದ್ದು, ಕಾಬೂಲ್ ಏರ್​ಪೋರ್ಟ್​​ನ ಎಲ್ಲ ಗೇಟ್​ಗಳಲ್ಲೂ ಜನದಟ್ಟಣೆ ಹೆಚ್ಚಾಗಿದೆ ಅಂತ ನ್ಯಾಟೋ ಮಾಹಿತಿ ನೀಡಿದೆ.

blank

ಈ ನಡುವೆ ಹಮೀದ್ ಕರ್ಜಾಯಿ ಇಂಟರ್‌ನ್ಯಾಷನಲ್ ಪ್ರದೇಶದ, ಕಾಬೂಲ್ ಏರ್​ಪೋರ್ಟ್​​ ಬಳಿ ಅಫ್ಘಾನ್​ ನಿರಾಶ್ರಿತರಿಗೆ ಬ್ರಿಟನ್ ಸೇನಾ ಪಡೆಗಳು ರಕ್ಷಣೆ ನೀಡುತ್ತಿವೆ. ಇತ್ತ ತಾಲಿಬಾನಿಗಳು ದೇಶ ತೊರೆಯುತ್ತಿದ್ದ ನಾಗರಿಕರನ್ನು ತಡೆಯಲು ಗುಂಡಿನ ದಾಳಿ ನಡೆಸುತ್ತಿದ್ದ ಕಾರಣ ಆ ಪ್ರದೇಶದಲ್ಲಿ ಹಿಂಸಾಚಾರ ಆರಂಭವಾಗಿದೆ. ಈ ವೇಳೆ ಹಲವು ತಾಯಂದಿರು ತಮ್ಮ ಮಕ್ಕಳು ನ್ಯಾಟೋ ಪಡೆಗಳ ವಶದಲ್ಲಿದ್ದ ಪದೇಶಕ್ಕೆ ಕಳುಹಿಸಲು ತಂತಿ ಬೇಲಿಯಿಂದ ಮಕ್ಕಳನ್ನು ಒಳಗೆ ನೀಡುತ್ತಿದ್ದಾರೆ.. ಅಲ್ಲದೇ ಕೆಲವರು ಮಕ್ಕಳನ್ನು ಎಸೆದು ದಯವಿಟ್ಟು ನಮ್ಮ ಮಕ್ಕಳನ್ನು ಕಾಪಾಡಿ ಎಂದು ಮನವಿ ಮಾಡಿಕೊಳ್ಳುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.

ದೃಶ್ಯಗಳಲ್ಲಿ ಇನ್ನು ತಾಯಿಯ ಮಡಿಲಲ್ಲಿ ಇರಬೇಕಿದ್ದ ಕೆಲವೇ ತಿಂಗಳುಗಳ ಮಕ್ಕಳು, ಬಾಲಕರು, ಬಾಲಕಿಯರು ತಮ್ಮ ಪೋಷಕರೊಂದಿಗೆ ನ್ಯಾಟೋ ಪಡೆಗಳಿಗೆ ಮನವಿ ಮಾಡಿಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ. ಈ ಕುರಿತು ಮಾಹಿತಿ ನೀಡಿದ್ದ ಬ್ರಿಟನ್ ಸೇನಾ ಪಡೆಯ ಯೋಧರೊಬ್ಬರು ಮಾಧ್ಯಮದೊಂದಿಗೆ ಮಾತನಾಡಿದ್ದು, ತಾಲಿಬಾನ್​​ಗಳಿಂದ ಹತಾಶರಾಗಿದ್ದ ಮಹಿಳೆಯರು ತಮ್ಮ ಮಕ್ಕಳನ್ನು ರಕ್ಷಣೆ ಮಾಡಲು ಸಹಾಯಕ್ಕಾಗಿ ಕೂಗಿಕೊಳ್ಳುತ್ತಿದ್ದರು. ಈ ವೇಳೆ ಕೆಲ ಮಕ್ಕಳು ತಂತಿ ಬೇಲಿಗೆ ಸಿಲುಕಿ ಗಾಯಗೊಂಡಿದ್ದರು. ತಾಲಿಬಾನಿಗಳು ಮಹಿಳೆಯನ್ನು ಹೊಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು ಎಂದು ವಿವರಿಸಿದ್ದಾರೆ.

Source: newsfirstlive.com Source link