ಖಾತೆ ಬದಲಾವಣೆಯ ಸರ್ಕಸ್: ಅಚ್ಚರಿಯಂತೆ ಸ್ವಪಕ್ಷೀಯ ಶಾಸಕರು ಸೈಲೆಂಟ್, ಸಿಎಂಗೆ ನೋ ಟೆನ್ಷನ್

ಖಾತೆ ಬದಲಾವಣೆಯ ಸರ್ಕಸ್: ಅಚ್ಚರಿಯಂತೆ ಸ್ವಪಕ್ಷೀಯ ಶಾಸಕರು ಸೈಲೆಂಟ್, ಸಿಎಂಗೆ ನೋ ಟೆನ್ಷನ್

ಸಂಪುಟ ರಚನೆಯ ವಿಚಾರದಲ್ಲಿ ಬಿಜೆಪಿಯಲ್ಲಿ ಭುಗಿಲೆದ್ದಿದ್ದ ಪೈಪೋಟಿ ಕೊನೆಗೂ ಅಂತ್ಯ ಕಂಡಂತಾಗಿದೆ. ವೈಲೆಂಟ್​ ಆದವರೆಲ್ಲ ಸದ್ಯ ಸೈಲೆಂಟ್​ ಆಗಿದ್ದು ಸಿಎಂ ಬೊಮ್ಮಾಯಿ ನಿರಾಳವಾಗಿದ್ದಾರೆ.

ಹೌದು ಮಾಜಿ ಸಿಎಂ ಬಿ. ಎಸ್​. ಯಡಿಯೂರಪ್ಪನವರ ನಂತರ ನೂತನ ಸಿಎಂ ಆಗಿ ಬಸವಾರಾಜ ಬೊಮ್ಮಾಯಿ ಆಯ್ಕೆಯಾದ ಬೆನ್ನಲ್ಲೇ ಪಕ್ಷದಲ್ಲಿ ಆಂತರಿಕ ಗುದ್ದಾಟ ಆರಂಭವಾಗಿತ್ತು. ನೂತನ ಸಚಿವ ಸಂಪುಟದ ರಚನೆ, ಸಚಿವರ ಪ್ರಮಾಣ ವಚನ, ಖಾತೆಗಳ ಹಂಚಿಕೆ, ಹಂಚಿದ ಖಾತೆಗಳ ಕುರಿತ ಅಸಮಾಧಾನ, ಹೀಗೆ ಹತ್ತು ಹಲವಾರು ಸವಾಲುಗಳು ನೂತನ ಸಿಎಂಗೆ ಆರಂಭದಲ್ಲೇ ಎದುರಾಗಿದ್ದವು.

ಇದನ್ನೂ ಓದಿ: ಖಾತೆ ಬದಲಾವಣೆ ಸುದ್ದಿಗೆ ಸದ್ದು ಮಾಡದ MTB -ಅಸಮಾಧಾನ ಬಳಿಕ ಸೈಲೆಂಟ್​ ಆಗಿದ್ದೇಕೆ?

ಸಂಪುಟ ರಚನೆಯ ವಿಚಾರದಲ್ಲಿ ಹಲವರ ಲಾಭಿ, ಸಂಪುಟ ಸೇರಲು ಹಲವರ ಪೈಪೋಟಿ, ದೆಹಲಿ ಯಾತ್ರೆ, ವರಿಷ್ಠರ ಭೇಟಿ, ಹಲವು ವಿಚಾರಗಳ ಚರ್ಚೆ, ಹೈಕಮಾಂಡ್ ಸಮ್ಮತಿಯಂತೆ ಸಂಪುಟ ರಚನೆ, ಹಿಂದೆ ಸಚಿವರಾಗಿದ್ದ ಕೆಲವರಿಗೆ ಸಚಿವ ಸ್ಥಾನ ಮಿಸ್, ಲಾಬಿ ಮಾಡಿದ್ದ ಶಾಸಕರಿಗೂ ನಿರಾಸೆಯಾಗಿತ್ತು, ಇದೆಲ್ಲದರ ನಡುವೆಯೂ ಸಿಎಂ ಬೊಮ್ಮಾಯಿ ಸಂಪುಟ ರಚಿಸಿ, ಖಾತೆ ಹಂಚಿದ್ದರು. ಈಗ ಸಚಿವಾಕಾಂಕ್ಷಿತ ಶಾಸಕರು ಪುಲ್ ಸೈಲೆಂಟ್, ಯಾವುದೇ ಅಸಮಾಧಾನ ಹೊರ ಹಾಕದೇ ಸುಮ್ಮನಿದ್ದಾರೆ.

ಇದನ್ನೂ ಓದಿ:  ಬೊಮ್ಮಾಯಿ ಹಚ್ಚಿದ ಮುಲಾಮಿಗೆ ಅರಳಿತು ‘ಆನಂದ’.. ಅಂಥದ್ದು ಏನ್ ಮಾಡಿದ್ರು CM..?

ಆದರೆ, ಖಾತೆ ಬದಲಾವಣೆ ವಿಚಾರದಲ್ಲಿ ಮಾತ್ರ ಇನ್ನೂ ಅಸಮಾಧಾನ ಮುಂದುವರೆದಿದ್ದು, ಸಿಎಂಗೆ ತಲೆನೋವಾಗಿ ಪರಿಣಮಿಸಿದೆ. ಈ ವಿಚಾರದಲ್ಲಿ ಸ್ವಪಕ್ಷೀಯರ ಸಹಕಾರ ಬಯಸಿರುವ ಸಿಎಂ ಬಸವರಾಜ ಬೊಮ್ಮಾಯಿ, ಪಾರದರ್ಶಕ ಆಡಳಿತ, ಆಡಳಿತ ಯಂತ್ರಕ್ಕೆ ವೇಗ ನೀಡುವತ್ತ ಚಿತ್ತ ಹರಿಸಿದ್ದು ಸಿಎಂಗೆ ಕಮಲ ಶಾಸಕರು ಸಾಫ್ಟ್​ ಕಾರ್ನರ್​ ತೋರಿದ್ರಾ ಎನ್ನಲಾಗ್ತಿದೆ.

ಅದೇ ವಿಶ್ವಾಸದಿಂದ ಶಾಸಕರ ಅಹವಾಲು ಆಲಿಸಿ, ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿರುವ ಸಿಎಂ, ಖಾತೆ ಬದಲಾವಣೆ ವಿಚಾರದ ಗೊಂದಲದ ನಡುವೆಯೂ ಸ್ವಪಕ್ಷೀಯ ಶಾಸಕರ ನಡೆ ಮುಖ್ಯಂತ್ರಿಗಳಿಗೆ ಸಮಾಧಾನ ತಂದಂತಿದೆ.

ಇದನ್ನೂ ಓದಿ: ಹಿಂದೂ ದೇವತೆಗಳಿಗೆ ನಾನು ಅಪಮಾನ ಮಾಡಿಲ್ಲ, ಕ್ಷಮೆ ಕೇಳಿದ್ದೇನೆ – ಸಚಿವ ಮುರುಗೇಶ್ ನಿರಾಣಿ ಸ್ಪಷ್ಟನೆ

Source: newsfirstlive.com Source link