ಶಾಸ್ತ್ರಿ ನಿರ್ಗಮನದಿಂದ ಕೊಹ್ಲಿ ನಾಯಕತ್ವಕ್ಕೆ ಸಂಚಕಾರ..! ನಾಯಕತ್ವದಿಂದ ಕೆಳಗಿಳಿತ್ತಾರಾ ವಿರಾಟ್?

ಶಾಸ್ತ್ರಿ ನಿರ್ಗಮನದಿಂದ ಕೊಹ್ಲಿ ನಾಯಕತ್ವಕ್ಕೆ ಸಂಚಕಾರ..! ನಾಯಕತ್ವದಿಂದ ಕೆಳಗಿಳಿತ್ತಾರಾ ವಿರಾಟ್?

ಟಿ20 ವಿಶ್ವಕಪ್​​ ಬಳಿಕ ಹೆಡ್ ಕೋಚ್ ರವಿ ಶಾಸ್ತ್ರಿ, ಕೋಚ್ ಹುದ್ದೆಯನ್ನ ತೊರೆಯುತ್ತಾರೆಂಬ ಚರ್ಚೆ ನಡೀತಿದೆ. ಈ ಚರ್ಚೆಯ ಜೊತೆಗೆ ವಿರಾಟ್ ನಾಯಕತ್ವದಿಂದ ಕೆಳಗಿಳಿಯುತ್ತಾರಾ ಎಂಬ ಹೊಸ ಚರ್ಚೆಯೂ ಹುಟ್ಟಿಕೊಂಡಿದೆ.

ಸದ್ಯ ವಿಶ್ವ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾದ್ದೇ ಬಿಸಿ ಬಿಸಿ ಚರ್ಚೆ. ಟೆಸ್ಟ್​ ಸರಣಿಯಲ್ಲಿನ ಪ್ರದರ್ಶನ, ಕೋಚ್ ರವಿ ಶಾಸ್ತ್ರಿ, ಐಪಿಎಲ್ ಆಯೋಜನೆ. ಹೀಗೆ ವಿವಿಧ ವಿಚಾರಗಳು ಚರ್ಚೆಯ ಕೇಂದ್ರ ಬಿಂದುವಾಗಿದೆ. ಈ ಪೈಕಿ ಟಿ20 ವಿಶ್ವಕಪ್​​ ಬಳಿಕ ಹೆಡ್​​ ಕೋಚ್ ರವಿ ಶಾಸ್ತ್ರಿ ಪದತ್ಯಾಗ ಮಾಡ್ತಾರಾ ಎಂಬ ಸುದ್ದಿಯಂತೂ, ಸಖತ್ ಸದ್ದು ಮಾಡ್ತಿದೆ. ಈ ಬೆನ್ನಲ್ಲೇ ಈಗ ಟೀಮ್ ಇಂಡಿಯಾ ಸಾರಥ್ಯವೂ ಬದಲಾಗುತ್ತಾ ಎಂಬ ಹೊಸ ಚರ್ಚೆಗೂ ನಾಂದಿಯಾಡಿದೆ.

blank

ಹೌದು..! ಟಿ20 ವಿಶ್ವಕಪ್​ ಬೆನ್ನಲ್ಲೇ ಕೋಚ್​​​ ರವಿ ಶಾಸ್ತ್ರಿ ಜೊತೆಗಿನ ಒಪ್ಪಂದ ಅಂತ್ಯಗೊಳ್ಳಲಿದೆ. ಬಳಿಕ ಟೀಮ್ ಇಂಡಿಯಾಕ್ಕೆ ನೂತನ ಕೋಚ್​ ನೇಮಕವಾಗೋದು ಬಹುತೇಕ ಖಚಿತ. ಅಕಸ್ಮಾತ್​​ ಕೋಚ್ ರವಿ ಶಾಸ್ತ್ರಿಯ ನಿರ್ಗಮನವಾದರೆ, ಇದು ವಿರಾಟ್​ ಪರ್ವದ ಅಂತ್ಯಕ್ಕೆ ಬುನಾದಿ ಅಂತಾನೇ, ಕ್ರಿಕೆಟ್ ಪಂಡಿತರು ವಿಶ್ಲೇಷಿಸಲಾಗ್ತಿದೆ.

ಶಾಸ್ತ್ರಿ ನಿರ್ಗಮನ, ನೂತನ ಸಾರಥಿ ನೇಮಕಕ್ಕೆ ವೇದಿಕೆ?
ರವಿ ಶಾಸ್ತ್ರಿ-ವಿರಾಟ್​ ಕೊಹ್ಲಿ ಟೀಮ್ ಇಂಡಿಯಾದ ಸಕ್ಸಸ್​​ಫುಲ್ ಜೋಡಿ. ತಂಡದ ಯಶಸ್ಸಿನಲ್ಲಿ ಈ ಇಬ್ಬರ ಪಾತ್ರ, ಬಹು ದೊಡ್ಡದೇ. ಕೊಹ್ಲಿ ಅಗ್ರ ಶ್ರೇಷ್ಠ ನಾಯಕನಾಗಿರುವ ಹಿಂದೆ, ರವಿ ಶಾಸ್ತ್ರಿ ಪಾತ್ರ ಮಹತ್ವದ್ದಾಗಿದೆ. ಆದ್ರೆ ಪ್ರತಿ ಹಂತದಲ್ಲೂ ಕೊಹ್ಲಿ ಬೆನ್ನಿಗೆ ನಿಲ್ಲೋ ಶಾಸ್ತ್ರಿ, ವಿಶ್ವಕಪ್​ ಬಳಿಕ ನಿರ್ಗಮಿಸಿದರೆ, ಇದು ಕೊಹ್ಲಿಗೆ ಉಂಟಾಗುವ ಬಹುದೊಡ್ಡ ಹಿನ್ನಡೆಯೇ ಆಗಲಿದೆ. ಕೊಹ್ಲಿ ಜೊತೆಗಿನ ಹೊಂದಾಣಿಕೆ ಕಷ್ಟ ಸಾಧ್ಯ ಅನ್ನೋದು ಕುಂಬ್ಳೆ ಅವಧಿಯಲ್ಲೇ ಫ್ರೂವ್ ಆಗಿದೆ. ಹೀಗಾಗಿ ಶಾಸ್ತ್ರಿ ನಿರ್ಗಮನ ವಿರಾಟ್​ ಕೊಹ್ಲಿಗೆ ಸಂಚಕಾರವಾಗುವ ಎಲ್ಲಾ ಸಾಧ್ಯತೆ ಇದೆ. ನೂತನ ಕೋಚ್​ ಜೊತೆಗೆ ನಾಯಕನ ನೇಮಕಕ್ಕೆ ವೇದಿಕೆಯಾಗಿ ಮಾರ್ಪಡುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

blank

ಟಿ20 ವಿಶ್ವಕಪ್ ಮೇಲೆ ಕೊಹ್ಲಿ ನಾಯಕತ್ವದ ಭವಿಷ್ಯ!
ನಾಯಕ ವಿರಾಟ್ ಕೊಹ್ಲಿ ಪ್ರಸಕ್ತ ಕಾಲದ ಸರ್ವಶ್ರೇಷ್ಠ ಆಟಗಾರ ಎಂಬುದರಲ್ಲಿ ಎರಡು ಮಾತಿಲ್ಲ. ಆದ್ರೆ ಕೊಹ್ಲಿಯ ನಾಯಕತ್ವದ ವಿಚಾರವಾಗಿ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಅಗ್ರಗಣ್ಯ ನಾಯಕನಾಗಿಯೂ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ.. ಇದು ವಿರಾಟ್​ ನಾಯಕತ್ವವನ್ನ ಪ್ರಶ್ನೆ ಮಾಡುವಂತೆ ಮಾಡಿದೆ. ಹೀಗಾಗಿ ಟಿ20 ವಿಶ್ವಕಪ್, ವಿರಾಟ್ ಕೊಹ್ಲಿ ನಾಯಕತ್ವಕ್ಕೆ ಅಗ್ನಿಪರೀಕ್ಷೆಯಾಗಿದೆ.

Source: newsfirstlive.com Source link