ಪವರ್ ಸ್ಟಾರ್ ಪವರ್ ಫುಲ್ ವರ್ಕೌಟ್ – ಅಭಿಮಾನಿಗಳಿಗೆ ವಿಭಿನ್ನವಾಗಿ ವಿಶ್

ಬೆಂಗಳೂರು: ಇಂದು ಎಲ್ಲೆಡೆ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ. ಈ ವಿಶೇಷ ದಿನದಂದು ಸ್ಯಾಂಡಲ್‍ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ರವರು ವರ್ಕೌಟ್ ಮಾಡುತ್ತಿರುವ ಪವರ್ ಫುಲ್ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ವಿಭಿನ್ನವಾಗಿ ಹಬ್ಬಕ್ಕೆ ಶುಭಾಶಯ ತಿಳಿಸಿದ್ದಾರೆ.

ಚಂದನವನದಲ್ಲಿ ತಮ್ಮದೇ ಆದ ಅಭಿನಯ, ಡ್ಯಾನ್ಸ್ ಹಾಗೂ ಸ್ಟಂಟ್ಸ್ ಮೂಲಕವೇ ಕನ್ನಡ ಪ್ರೇಕ್ಷಕರ ಮನಗೆದ್ದಿರುವ ಪುನೀತ್ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಯಾವುದೇ ಕಷ್ಟಕರ ಪಾತ್ರ ಕೊಟ್ಟರೂ ಸುಲಭವಾಗಿ ನಟಿಸಿ ಸೈ ಎನಿಸಿಕೊಳ್ಳುವ ಪುನೀತ್ ಮೊದಲಿನಿಂದಲೂ ಸಖತ್ ಫಿಟ್ ಹಾಗೂ ಆ್ಯಕ್ಟೀವ್ ಆಗಿದ್ದಾರೆ. ಸದ್ಯ ಪುನೀತ್ ತಮ್ಮ ಮನೆಯಲ್ಲಿರುವ ಜಿಮ್‍ನಲ್ಲಿ ಸಖತ್ ವರ್ಕೌಟ್ ಮಾಡಿದ್ದು, ಈ ವೀಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ದ್ವಿತ್ವ ಸಿನಿಮಾಗೆ ಪುನೀತ್ ರಾಜ್‍ಕುಮಾರ್ ಜೋಡಿಯಾದ ತ್ರಿಷಾ ಕೃಷ್ಣ

ವೀಡಿಯೋದಲ್ಲಿ ಪುನೀತ್ ಹಸಿರು ಕಲರ್ ಟಿ-ಶರ್ಟ್ ಹಾಗೂ ಶಾಟ್ರ್ಸ್ ಧರಿಸಿ ಕಿಕ್ ಬಾಕ್ಸಿಂಗ್ ಬ್ಯಾಗ್‍ಗೆ ಒದೆಯುತ್ತಿರುವುದನ್ನು ಕಾಣಬಹುದಾಗಿದೆ. ವೀಡಿಯೋ ಜೊತೆಗೆ ಆರೋಗ್ಯವೇ ನಿಜವಾದ ಸಂಪತ್ತು ಎಂಬುವುದನ್ನು ನಾವು ಅರಿತುಕೊಳ್ಳೋಣ. ಹ್ಯಾಪಿ ವರಮಹಾಲಕ್ಷ್ಮೀ ಎಂದು ಎಂದು ವಿಶ್ ಮಾಡಿದ್ದಾರೆ.

blank

ಇತ್ತೀಚೆಗಷ್ಟೇ ನಗರದ ಖಾಸಗಿ ಹೋಟೆಲ್‍ನಲ್ಲಿ ಡಾ. ರಾಜ್ ಕುಮಾರ್ ಅಕಾಡೆಮಿಯಿಂದ ಡಾ. ರಾಜ್‍ಕುಮಾರ್ ಲರ್ನಿಂಗ್ ಆ್ಯಪ್‍ನನ್ನು ಲೋಕಾರ್ಪಣೆ ಸಮಾರಂಭ ನಡೆಯಿತು. ಪುನೀತ್ ರಾಜ್‌ಕುಮಾರ್‌ರವರು ಈ ಆ್ಯಪ್‍ನ ಬ್ರಾಂಡ್ ಅಂಬಾಸಿಡರ್ ಆಗಿದ್ದು, ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿಯವರು ಅಪ್ಪು ನೀವು ಫಾರ್ಮಲ್ ಎಜುಕೇಶನ್ ಬಗ್ಗೆ ಕಲಿಯಲಿಲ್ಲ ಅಂದರೂ ಪರವಾಗಿಲ್ಲ. ಫಾರ್ಮಲ್ ಎಜುಕೇಶನ್ ಮುಖ್ಯವಲ್ಲ. ಜ್ಞಾನ ಬಹಳ ಮುಖ್ಯ. ಜ್ಞಾನದಿಂದಲೇ ವಿದ್ಯೆ. ನೀವೊಬ್ಬರು ಐಕಾನ್ ಎಂದು ಹಾಡಿ ಹೊಗಳಿದ್ದರು.  ಇದನ್ನೂ ಓದಿ:ಅಪ್ಪು ಡೋಂಟ್‍ವರಿ, ನೀವು ಓದಿಲ್ಲ ಆದ್ರೂ ನೀವೊಬ್ಬರು ಐಕಾನ್: ಬೊಮ್ಮಾಯಿ

Source: publictv.in Source link