ಕೇಂದ್ರ ಸಚಿವ ನಾರಾಯಣಸ್ವಾಮಿ ಯಡವಟ್ಟು: ಹುತಾತ್ಮ ಸೈನಿಕನ ಬದಲಾಗಿ ಜೀವಂತ ಸೈನಿಕನ ಮನೆಗೆ ಹೋಗಿ ಸಾಂತ್ವನ

ಕೇಂದ್ರ ಸಚಿವ ನಾರಾಯಣಸ್ವಾಮಿ ಯಡವಟ್ಟು: ಹುತಾತ್ಮ ಸೈನಿಕನ ಬದಲಾಗಿ ಜೀವಂತ ಸೈನಿಕನ ಮನೆಗೆ ಹೋಗಿ ಸಾಂತ್ವನ

ಗದಗ: ಮೃತಪಟ್ಟ ಯೋಧನ ಕುಟುಂಬದ ನಿವಾಸಕ್ಕೆ ಭೇಟಿ‌ ನೀಡಬೇಕಿದ್ದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು, ಮಾಹಿತಿ ಕೊರತೆಯಿಂದಾಗಿ ಹಾಲಿ ಸೈನಿಕನ ಮನೆಗೆ ತೆರಳಿ ಕುಟುಂಬಕ್ಕೆ‌ ಸಾಂತ್ವನ ಹೇಳಿರುವ ಘಟನೆ ಗದಗದಲ್ಲಿ ನಡೆದಿದೆ.

ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಗದಗದಲ್ಲಿ ನಿನ್ನೆ ಜನಾಶೀರ್ವಾದ ಕಾರ್ಯಕ್ರಮ ನಡೆಸಿದ್ದರು, ಈ ವೇಳೆ ಗದಗ ತಾಲೂಕಿನ ಮುಳಗುಂದ ಪಟ್ಟಣದ ಮೃತ ಯೋಧನ ಕುಟುಂಬಕ್ಕೆ ಭೇಟಿ ನೀಡಬೇಕಿದ್ದ ಸಚಿವರು, ಮಾಹಿತಿ ಕೊರತೆಯಿಂದ ಹಾಲಿ ಯೋಧನ ಮನೆಗೆ ಭೇಟಿ ನೀಡಿ ಸಾಂತ್ವನದ ಮಾತುಗಳನ್ನು ಹೇಳಿದ್ದಾರೆ.

ಕಳೆದ ಒಂದೂವರೆ ವರ್ಷದ ಹಿಂದೆ ರೈಲು ಅಪಘಾತದಲ್ಲಿ ಗದಗ ತಾಲ್ಲೂಕಿನ ಮುಳಗುಂದ ಪಟ್ಟಣದ ಯೋಧ ಬಸವರಾಜ ಹಿರೇಮಠ ಮೃತಪಟ್ಟಿದ್ದರು. ಮಹಾರಾಷ್ಟ್ರದ ಪುಣೆಯಲ್ಲಿ ಬಸವರಾಜ ಹಿರೇಮಠ ಅವರು ಕರ್ತವ್ಯನಿರತನಾಗಿದ್ದ ವೇಳೆ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವರು ಬಸವರಾಜ ಕುಟುಂಬಕ್ಕೆ ತೆರಳಿ ಸಾಂತ್ವನ ಹೇಳಿ, ಧೈರ್ಯ ತುಂಬಬೇಕಿತ್ತು.

blank

ಆದರೆ, ಸದ್ಯ ಜಮ್ಮು‌ ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧ ರವಿಕುಮಾರ ಕಟ್ಟಿಮನಿ ಮನೆಗೆ ಭೇಟಿ ನೀಡಿದ್ದ ಸಚಿವರು, ಕುಟುಂಬಸ್ಥರ ಯೋಗಕ್ಷೇಮ ವಿಚಾರಿಸಿ ಸೈನಿಕನ ಪತ್ನಿಗೆ, ಸರ್ಕಾರಿ ನೌಕರಿ ಹಾಗೂ ಜಮೀನು ಕೊಡುವ ಭರವಸೆ ನೀಡಿದ್ದರು.

ಸಚಿವರ ತರಾತುರಿ‌ ಹೇಳಿಕೆಯಿಂದ ಯೋಧ ರವಿಕುಮಾರ್ ಕುಟುಂಬಸ್ಥರು ಕ್ಷಣ ಕಾಲ ತಬ್ಬಿಬ್ಬಾಗಿಗಿದ್ದರು. ನಂತರ ಸ್ಥಳದಲ್ಲಿದ್ದ ಕಾರ್ಯಕರ್ತನೊಬ್ಬ ಹಾಲಿ ಯೋಧ ರವಿಕುಮಾರಗೆ ವಿಡಿಯೋ ಕರೆ ಮಾಡಿಸಿ ಯೋಧನನ್ನು ಮಾತನಾಡಿಸಿದಾಗ ಯಡವಟ್ಟು ಬಯಲಾಗಿದೆ. ಸ್ಥಳೀಯ ಬಿಜೆಪಿ ಮುಖಂಡರು ಸಚಿವರಿಗೆ ಸರಿಯಾದ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಯಡವಟ್ಟು ನಡೆದಿದೆ ಎನ್ನಲಾಗಿದೆ.

Source: newsfirstlive.com Source link