ಆಟಗಾರರ ಅಂತಿಮ ಪಟ್ಟಿ ನೀಡೋಕೆ ಇವತ್ತೇ ಲಾಸ್ಟ್​ ಡೇಟ್ -ಐಪಿಎಲ್​​ ಫ್ರಾಂಚೈಸಿಗಳಿಗೆ ಟೆನ್ಷನ್

ಆಟಗಾರರ ಅಂತಿಮ ಪಟ್ಟಿ ನೀಡೋಕೆ ಇವತ್ತೇ ಲಾಸ್ಟ್​ ಡೇಟ್ -ಐಪಿಎಲ್​​ ಫ್ರಾಂಚೈಸಿಗಳಿಗೆ ಟೆನ್ಷನ್

ಎಲ್ಲಾ ತೊಡಕುಗಳು ನಿವಾರಣೆಯಾಗಿ ಇನ್ನೇನು ಒಂದು ತಿಂಗಳಲ್ಲಿ ಐಪಿಎಲ್​ ಪುನಾರಂಭವಾಗಲಿದೆ ಅನ್ನೋವಾಗ್ಲೆ, ಫ್ರಾಂಚೈಸಿಗಳು ಮತ್ತೆ ಬಿಸಿಸಿಐ ನಡೆಗೆ ಗರಂ ಆಗಿವೆ. ಬಿಸಿಸಿಐನ ಹೊಸ ನಿರ್ಧಾರ ಫ್ರಾಂಚೈಸಿಗಳ ಸಿದ್ಧತೆಗೆ ಮತ್ತೆ ಹಿನ್ನಡೆಯಾಗ್ತಿದೆ. ಅಷ್ಟಕ್ಕೂ ಬಿಸಿಸಿಐ ಕೈಗೊಂಡ ನಿರ್ಧಾರ ಏನು.? ಇಲ್ಲಿದೆ ನೋಡಿ ಡಿಟೇಲ್ಸ್​​

ಐಪಿಎಲ್​ ಆರಂಭಕ್ಕೆ ಇನ್ನು ಕೇವಲ 30 ದಿನಗಳು ಮಾತ್ರ ಬಾಕಿ. ಈ ಮೂವತ್ತು ದಿನಗಳಲ್ಲಿ ಸುರಕ್ಷಿತವಾಗಿ ಯುಎಇ ತಲುಪೋದು, ಟೂರ್ನಿಗೆ ಸಿದ್ಧತೆ ನಡೆಸೋದೇ ಫ್ರಾಂಚೈಸಿಗಳ ಪಾಲಿಗೆ ಸರ್ಕಸ್​ ಆಗಿ ಮಾರ್ಪಟ್ಟಿದೆ. ಇದರ ನಡುವೆಯೇ ಆಟಗಾರರ ಅಂತಿಮ ಪಟ್ಟಿಯನ್ನ ನೀಡುವಂತೆ ಸೂಚಿಸಿರುವ ಬಿಸಿಸಿಐನ ನಡೆ ಫ್ರಾಂಚೈಸಿಗಳಿಗೆ ಹೊಸ ತಲೆ ನೋವು ತಂದಿಟ್ಟಿದೆ.

blank

ಆಟಗಾರರ ಲಭ್ಯತೆ ಬಗ್ಗೆ ಸಿಗದ ಸ್ಪಷ್ಟತೆ, ಫ್ರಾಂಚೈಸಿಗಳಿಗೆ ಟೆನ್ಷನ್​..!
ಐಪಿಎಲ್​ ಮರು ಆಯೋಜನೆಯಾಗುತ್ತೆ ಎಂಬ ಸುದ್ದಿ ಹೊರ ಬಿದ್ದ ದಿನದಿಂದ ಆರಂಭವಾಗಿರುವ ಫ್ರಾಂಚೈಸಿಗಳು ಹಾಗೂ ಬಿಸಿಸಿಐ ನಡುವಿನ ಗೊಂದಲಗಳು ಇನ್ನೂ ನಿವಾರಣೆಯಾಗಿಲ್ಲ. ಅಂತಿಮವಾಗಿ ಸೆಪ್ಟೆಂಬರ್​ 19ರಿಂದ ಐಪಿಎಲ್​ ಆರಂಭಕ್ಕೆ ಮಹೂರ್ತವಿಟ್ಟ ಬಿಸಿಸಿಐ, ವಾರದ ಹಿಂದಷ್ಟೇ ಇಂಗ್ಲೆಂಡ್​, ಆಸ್ಟ್ರೇಲಿಯಾ ಆಟಗಾರರ ಲಭ್ಯತೆ ಬಗ್ಗೆ ಮಾಹಿತಿ ನೀಡಿದೆ. ಇದೀಗ ಅದರ ಬೆನ್ನಲ್ಲೇ ಅಂತಿಮ ಪಟ್ಟಿಯನ್ನ ನೀಡಲು ಇಂದೇ ಲಾಸ್ಟ್​​ ಡೇಟ್​ ಎಂದು ಫ್ರಾಂಚೈಸಿಗಳಿಗೆ ಸೂಚನೆ ನೀಡಿದೆ..

ಬಿಸಿಸಿಐ ಏನೋ ಮಾತುಕತೆ ನಡೆಸಿ ವಿದೇಶಿ ಬೋರ್ಡ್​ಗಳನ್ನ ವಾರದ ಹಿಂದೆ ಒಪ್ಪಿಸಿದೆ. ಆದ್ರೆ ನಮ್ಮ ತಂಡದ ಆಟಗಾರರು ಇನ್ನೂ ತಮ್ಮ ಅಂತಿಮ ನಿರ್ಧಾರವನ್ನ ತಿಳಿಸಿಲ್ಲ. ಇಂತಾ ಸಂದರ್ಭದಲ್ಲಿ ಬಿಸಿಸಿಐ ಆಟಗಾರರ ಅಂತಿಮ ಪಟ್ಟಿಯನ್ನ ನೀಡಲು ಇಂದೇ ಲಾಸ್ಟ್​ ಡೇಟ್​ ಎಂದಿರೋದು ಫ್ರಾಂಚೈಸಿಗಳ ಪಿತ್ತ ಏರಿಸಿದೆ.

‘ಆಟಗಾರರು ಖಚಿತಪಡಿಸಿಲ್ಲ’..!
‘ಬಿಸಿಸಿಐ ಅಧಿಕೃತವಾಗಿ ಮಾಹಿತಿ ನೀಡುವಲ್ಲಿ ಹಿಂದುಳಿದಿದೆ. ಯಾವಾಗಲೂ ಕೊನೆಯ ಕ್ಷಣದಲ್ಲಿ ತಿಳಿಸುತ್ತದೆ. ನಾವು ಆಟಗಾರರ ಲಭ್ಯತೆಯ ಬಗ್ಗೆ ಕೇಳುತ್ತಲೇ ಇದ್ದೆವು. ಕೊನೆಗೂ ವಾರದ ಹಿಂದೆ ಅದನ್ನ ತಿಳಿಸಿದೆ. ಇದೀಗ ಅಂತಿಮ ಪಟ್ಟಿ ನೀಡಲು ಅಗಸ್ಟ್​​ 20 ಕೊನೇ ದಿನ ಎಂದಿದೆ. ಆದ್ರೆ, ನಮ್ಮ ಆಟಗಾರರು ಇನ್ನೂ ಲಭ್ಯತೆಯ ಬಗ್ಗೆ ಖಚಿತ ಪಡಿಸಿಲ್ಲ’

ಐಪಿಎಲ್​ ಫ್ರಾಂಚೈಸಿಯೊಂದರ ಅಧಿಕಾರಿ

ವೇಳಾಪಟ್ಟಿಯನ್ನ ನಿಧಾನವಾಗಿ ಪ್ರಕಟಿಸಿದ್ದು ಈಗಾಗಲೇ ಫ್ರಾಂಚೈಸಿಗಳ ಸಿದ್ಧತೆಗೆ ಹಿನ್ನಡೆಯಾಗಿದೆ. ಚೆನೈ, ಮುಂಬೈ ತಂಡಗಳನ್ನ ಹೊರತುಪಡಿಸಿದ್ರೆ, ಉಳಿದೆಲ್ಲಾ ತಂಡಗಳು ಇನ್ನೂ ಪ್ರಯಾಣದ ಪ್ಲಾನ್​ನಲ್ಲೆ ಇವೆ. ಇದರ ನಡುವೆ ಇದೀಗ ಆಟಗಾರರ ಅಂತಿಮ ಪಟ್ಟಿಯನ್ನ ಇವತ್ತೇ ನೀಡಬೇಕು ಅಂದಿರೋದು ಫ್ರಾಂಚೈಸಿಗಳನ್ನ ಗೊಂದಲಕ್ಕೆ ಸಿಲುಕಿಸಿದೆ.

Source: newsfirstlive.com Source link