ಮೊಹರಂ- ಕೆಂಡ ಹಾಯುವ ಮುನ್ನ ಕೆರೆಯಲ್ಲಿ ಮುಳುಗಿ ಯುವಕರು ಸಾವು

ಧಾರವಾಡ: ಕೆರೆಯಲ್ಲಿ ಮುಳುಗಿ ಇಬ್ಬರು ಯುವಕರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಮುಳಮುತ್ತಲ ಗ್ರಾಮದಲ್ಲಿ ನಡೆದಿದೆ.

ಕಾಶೀಂ ನದಾಫ(24) ಹಾಗೂ ಶರೀಫ ನದಾಫ(20) ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ದುರ್ದೈವಿಗಳು. ಮೊಹರಂ ಹಬ್ಬ ಹಿನ್ನೆಲೆಯಲ್ಲಿ ಕಾಶೀಂ ಹಾಗೂ ಇನ್ನಿಬ್ಬರು ಮುಳಮುತ್ತಲ ಗ್ರಾಮದ ಕೆರೆಗೆ ಸ್ನಾನಕ್ಕೆ ಹೋಗಿದ್ದರು. ಸ್ನಾನ ಮುಗಿಸಿ ಮೊಹರಂ ಹಬ್ಬದ ಕೆಂಡ ಹಾಯಲು ಹೋಗಬೇಕಿದ್ದ ಈ ಯುವಕರು, ಕೆರೆಗೆ ಬಂದು ಇಜಲು ಇಳಿದಿದ್ದಾರೆ. ಇದನ್ನೂ ಓದಿ: ಕೇಂದ್ರ ಸಚಿವರ ಎಡವಟ್ಟು- ಹುತಾತ್ಮ ಯೋಧನ ಬದಲು, ಕರ್ತವ್ಯ ನಿರತ ಯೋಧನ ಕುಟುಂಬಕ್ಕೆ ಸಾಂತ್ವನ

ಈ ವೇಳೆ ಕೆರೆಯ ಪಕ್ಕದಲ್ಲೇ ಇದ್ದ ಶರೀಫ್ ಕೆರೆಯಲ್ಲಿ ಮುಳುಗುತಿದ್ದ ಇಬ್ಬರನ್ನು ಹೊರ ತೆಗೆದಿದ್ದಾನೆ. ನಂತರ ಶರೀಫ್ ಕಾಶೀಂ ನನ್ನು ಉಳಿಸಲು ಹೋದಾಗ ಕಾಶೀಂ ಹಾಗೂ ಶರೀಫ್ ಇಬ್ಬರೂ ಮುಳುಗಿ ಸಾವನ್ನಪ್ಪಿದಾರೆ. ಸ್ಥಳದಲ್ಲಿದ್ದ ಗ್ರಾಮಸ್ಥರು ಸಾವನ್ನಪ್ಪಿದ ಯುವಕರ ಶವಗಳನ್ನು ಕೆರೆಯಿಂದ ಹೊರ ತೆಗೆದಿದ್ದು, ಗರಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Source: publictv.in Source link