ಸಂವಿಧಾನಕ್ಕೆ ತಿದ್ದುಪಡಿ ತಂದವರು ರಾಹುಲ್ ಗಾಂಧಿ- ಸಿದ್ದರಾಮಯ್ಯ ಮತ್ತೆ ಎಡವಟ್ಟು ಹೇಳಿಕೆ

ಸಂವಿಧಾನಕ್ಕೆ ತಿದ್ದುಪಡಿ ತಂದವರು ರಾಹುಲ್ ಗಾಂಧಿ- ಸಿದ್ದರಾಮಯ್ಯ ಮತ್ತೆ ಎಡವಟ್ಟು ಹೇಳಿಕೆ

ಬೆಂಗಳೂರು: ಸಂವಿಧಾನಕ್ಕೆ ತಿದ್ದುಪಡಿ ತಂದವ್ರು ರಾಜೀವ್​ ಗಾಂಧಿ ಎಂದು ಹೇಳುವ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ್ಯ ಯಡವಟ್ಟು ಮಾಡಿಕೊಂಡಿದ್ದಾರೆ. ನಂತರ ಸಾರಿ.. ರಾಜೀವ್ ಗಾಂಧಿ ತಿದ್ದುಪಡಿ ತಂದ್ರು ಎಂದು ತಮ್ಮ ತಪ್ಪನ್ನ ಸರಿಪಡಿಸಿಕೊಂಡಿಸಿದ್ದಾರೆ.

ನಾನು ದೇವರಾಜ ಅರಸು, ರಾಜೀವ್ ಗಾಂಧಿಯವರ ಜೊತೆ ಕೆಲಸ ಮಾಡಿಲ್ಲ. ನಾನು 2006ರಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಆದೆ. ಆದರೆ ರಾಜೀವ್ ಗಾಂಧಿ, ದೇವರಾಜ ಅರಸುರವರ ಕಾರ್ಯಕ್ರಮಗಳನ್ನು ನೋಡಿದ್ದೇನೆ. ಅತ್ಯಂತ ಚಿಕ್ಕ ವಯಸ್ಸಿನಲ್ಲಿ ದೇಶದ ಚುಕ್ಕಾಣಿ ಹಿಡಿದವರು ರಾಜೀವ್ ಗಾಂಧಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಮೀಸಲಾತಿ ಜಾರಿಗೆ ತಂದಾಗ ಯಡಿಯೂರಪ್ಪ, ಈಶ್ವರಪ್ಪ, ಅನಂತ್ ಕುಮಾರ ಎಲ್ಲೋಗಿದ್ರು..?

ಮೀಸಲಾತಿ ಜಾರಿಗೆ ತಂದಾಗ ಯಡಿಯೂರಪ್ಪ, ಈಶ್ವರಪ್ಪ, ಅನಂತ್ ಕುಮಾರ ಎಲ್ಲೋಗಿದ್ರು ಬಿಜೆಪಿಯವರು ಮಹಾನ್ ಮೋಸಗಾರರು, ಸುಳ್ಳುಗಾರರು. ಇತಿಹಾಸ ತಿರುಚುವುದರಲ್ಲಿ ಬಿಜೆಪಿಯವರು ನಿಸ್ಸೀಮರು, ಕಳ್ಳರು ಎಂದು ಕಿಡಿಕಾರಿದ್ದಾರೆ. ನಮ್ಮ ಹಿಂದುಳಿದ ವಿಭಾಗದವರು ಜೋರಾಗಿ ಮಾತಾಡಬೇಕು. ರಾಮ್ ಜೋಯಿಷ್ ಕೋರ್ಟ್​ಗೆ ಹೋಗಿದ್ರು, ಅವರೇ ವಾದ ಕೂಡ ಮಾಡಿದ್ರು. ಆದರೆ, ಬಿಜೆಪಿಯವರು ರಾಮ ಜೋಯಿಸ್​ಗೆ  ಕೋರ್ಟ್​ಗೆ ಹೋಗಬೇಡಿ ಎಂದು ಹೇಳಲಿಲ್ಲ. BJPಯವರು ಎಂಥ ನಾಟಕ ಮಾಡ್ತಾರೆ ನೋಡಿ ಎಂದಿದ್ದಾರೆ.

ಇದನ್ನೂ ಓದಿ: ‘ಹುತಾತ್ಮರಾದ ಸೋನಿಯಾ ಗಾಂಧಿ.. ಸಾರಿ ಇಂದಿರಾ ಗಾಂಧಿ’ -ಭಾಷಣದ ವೇಳೆ ಡಿಕೆಎಸ್​ ಎಡವಟ್ಟು

ಹೋಗಲಿ ಬಿಡಪ್ಪ ಎಂದು ಪುಟ್ಟರಂಗ ಶೆಟ್ಟಿಗೆ ಹೇಳಿದೆ..
ಪುಟ್ಟರಂಗ ಶೆಟ್ಟಿಗೆ ಕುಮಾರಸ್ವಾಮಿ ಬೈದು, ಜಾತಿ ಗಣತಿ ತೆಗೆದುಕೊಳ್ಳದಂತೆ ಮಾಡಿದ್ರು. ಪುಟ್ಟರಂಗ ಶೆಟ್ಟಿ ಹೆದರಿ ಜಾತಿ ಗಣತಿ ತೆಗೆದುಕೊಳ್ಳಲಿಲ್ಲ. ನಾನು ಸಮ್ಮಿಶ್ರ ಸರ್ಕಾರದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷನಾಗಿದ್ದೆ. ಹೋಗಲಿ ಬಿಡಪ್ಪ ಎಂದು ಪುಟ್ಟರಂಗ ಶೆಟ್ಟಿಗೆ ಹೇಳಿದೆ.. ಇದು ಸತ್ಯ. ಕುಮಾರಸ್ವಾಮಿ, ಸಿದ್ದರಾಮಯ್ಯ ಹೇಳಿ ಜಾತಿ ಗಣತಿ ಬರೆಸಿದ್ದಾರೆ ಅಂತಾರೆ.. ನಾ ಇನ್ನೂ ಅದನ್ನ ತೆಗೆದುಕೊಂಡೇ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇದನ್ನೂ ಓದಿ: ಕೈ ನಾಯಕರ ಎಡವಟ್ಟು; 75 ನೇ ಗಣರಾಜ್ಯೋತ್ಸವ ಆಚರಿಸ್ತಿದ್ದೀವಿ ಎಂದ ಜಮೀರ್

ಏನಪ್ಪ BJP ಹೋಗ್ಬಿಟ್ಟಿಯಾ ಅಂದ್ರೆ ಎಲ್ಲಿದ್ದರೂ ನಿಮ್ಮ ಕಡೆನೇ ಕನಣ್ಣ ಅಂತಾರೆ..

ಕುಮಾರಸ್ವಾಮಿ ಹೇಳ್ತಾನೆ ಸಿದ್ದರಾಮಯ್ಯನೇ ಬರೆಸಿದವರು ಅಂತ. ಇದಕ್ಕಿಂತ ಸುಳ್ಳು ಮತ್ತೊಂದಿಲ್ಲ. ಕೆಲವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂದು ಹೆಚ್​​ಡಿಕೆ ವಿರುದ್ಧವೂ ಸಿದ್ದರಾಮಯ್ಯ ಆಕ್ರೀಶ ಹೊರಹಾಕಿದ್ದಾರೆ. ಏನಪ್ಪ BJP ಹೋಗ್ಬಿಟ್ಟಿಯಾ ಅಂದ್ರೆ ಎಲ್ಲಿದ್ದರೂ ನಿಮ್ಮ ಕಡೆನೇ ಕನಣ್ಣ ಅಂತಾರೆ. ಅವರು ಎಂಥ ಕಳ್ಳರು ನೋಡಿ ಎಂದು ವಲಸಿಗರ ಬಗ್ಗೆಯೂ ಸಿದ್ದರಾಮಯ್ಯ ಚಾಟಿ ಬೀಸಿದರು.

Source: newsfirstlive.com Source link