ಟಿಫಿನ್ ಬಾಕ್ಸ್ ಬಾಂಬ್​ ಪತ್ತೆ ಕೇಸ್; ಪಂಜಾಬ್​​​ನಲ್ಲಿ NIA ದಾಳಿ, ಭಿಂದ್ರನ್​​ವಾಲೆ ಸಂಬಂಧಿ ಅರೆಸ್ಟ್

ಟಿಫಿನ್ ಬಾಕ್ಸ್ ಬಾಂಬ್​ ಪತ್ತೆ ಕೇಸ್; ಪಂಜಾಬ್​​​ನಲ್ಲಿ NIA ದಾಳಿ, ಭಿಂದ್ರನ್​​ವಾಲೆ ಸಂಬಂಧಿ ಅರೆಸ್ಟ್

ನವದೆಹಲಿ: ಇತ್ತೀಚೆಗೆ ಅಮೃತ್​​ಸರ್​ದಲ್ಲಿ ಟಿಫಿನ್ ಬಾಂಬ್​ಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ರಾಷ್ಟ್ರೀಯ ಭದ್ರತಾದಳದ ಅಧಿಕಾರಿಗಳು ನಿನ್ನೆ ಮಧ್ಯರಾತ್ರಿ ಮಾಜಿ ಅಕಾಲ್ ತಖ್ತ್​​ನ ಜಾಥೇದಾರ್ ಜಸ್ಬಿರ್ ಸಿಂಗ್ ರೋಡೆ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಮಧ್ಯರಾತ್ರಿ ವೇಳೆಗೆ ಜಸ್ಬಿರ್ ಸಿಂಗ್ ರೋಡೆ ಮನೆ ಮೇಲೆ ದಾಳಿ ನಡೆಸಿದ 20ಕ್ಕೂ ಹೆಚ್ಚು ಎನ್​ಐಎ ಅಧಿಕಾರಿಗಳು ಅವರ ಪುತ್ರ ಗುರ್​​ಮುಖ್ ಸಿಂಗ್​ನನ್ನ ಬಂಧಿಸಿದ್ದಾರೆ. ಈತ ಖಾಲಿಸ್ತಾನಿ ಉಗ್ರ ಜರ್ನೇಲ್​ ಸಿಂಗ್ ಭಿಂದ್ರನ್​​ವಾಲೆ ಸಂಬಂಧಿ ಕೂಡ ಆಗಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: ಡ್ರೋಣ್ ಮೂಲಕ ಅಮೃತಸರದಲ್ಲಿ ​ಟಿಫಿನ್ ಬಾಕ್ಸ್ ಬಾಂಬ್, ಆರ್​ಡಿಎಕ್ಸ್ ಡ್ರಾಪ್​ -ಪಾಕ್ ಕೈವಾಡ ಶಂಕೆ

ಅಮೃತ್​ ಸರ್​​ನಲ್ಲಿ ವಶಪಡಿಸಿಕೊಳ್ಳಲಾದ ಟಿಫಿನ್ ಬಾಕ್ಸ್ ಬಾಂಬ್ ಪ್ರಕರಣಕ್ಕೂ ಜಸ್ಬಿರ್ ಸಿಂಗ್ ಸಹೋದರ ಲಖ್​ಬಿರ್ ಸಿಂಗ್​ಗೂ ಸಂಬಂಧವಿದೆ ಎಂದು ಎನ್​ಐಎ ಶಂಕಿಸಿದೆಯಂತೆ. ಲಖ್​ಬಿರ್ ಸಿಂಗ್ ಸದ್ಯ ಪಾಕಿಸ್ತಾನದಲ್ಲಿ ಸೆಟಲ್ ಆಗಿದ್ದು ಅಲ್ಲಿ ಅಂತಾರಾಷ್ಟ್ರೀಯ ಸಿಖ್ ಯೂತ್ ಫೆಡರೇಷನ್​ನ ನೇತೃತ್ವ ವಹಿಸಿಕೊಂಡಿದ್ದಾನಂತೆ.

ಲಖ್​ಬಿರ್ ಸಿಂಗ್ ಪಾಕಿಸ್ತಾನದಿಂದ ಸ್ಫೋಟಕಗಳನ್ನ ರವಾನಿಸುತ್ತಿದ್ದು ಅವುಗಳನ್ನ ಸಹೋದರ ಪುತ್ರ ಗುರ್​ಮುಖ್ ಸಿಂಗ್ ಇಲ್ಲಿ ಕಲೆಕ್ಟ್ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪ ಈ ಇಬ್ಬರ ಮೇಲಿದೆ. ಇನ್ನು ದಾಳಿವೇಳೆ ಮನೆಯಲ್ಲಿ ಯಾವುದೇ ಸ್ಫೋಟಕಗಳು ಪತ್ತೆಯಾಗಿಲ್ಲ ಎನ್ನಲಾಗಿದೆ.

Source: newsfirstlive.com Source link