ಧರೆಗಿಳಿದ ದೇವತೆನಾ..? ಭೂಮಿಗಳಿದ ಮಹಾಲಕ್ಷ್ಮೀನಾ..? ಈ ‘ಖುಷಿ’ ಯಾರು ಗೊತ್ತಾ?!

ಧರೆಗಿಳಿದ ದೇವತೆನಾ..? ಭೂಮಿಗಳಿದ ಮಹಾಲಕ್ಷ್ಮೀನಾ..? ಈ ‘ಖುಷಿ’ ಯಾರು ಗೊತ್ತಾ?!

ಪ್ರತಿಯೊಬ್ಬ ಮಹಿಳೆಯನ್ನೂ ಮಹಾಲಕ್ಷ್ಮೀ ಅಂಶ ಅಂತಾರೆ. ತಾಯಿಯಾಗಿ, ಪತ್ನಿಯಾಗಿ, ಸೋದರಿಯಾಗಿ ಮನೆ ಮತ್ತು ಮನ ಬೆಳಗೋ ಶಕ್ತಿ ಇವರು.. ಅಂಥ ಶಕ್ತಿಯ ಸಾಮರ್ಥ್ಯ ಸಾರುವ ವರಮಹಾಲಕ್ಷ್ಮೀ ಹಬ್ಬ ಇಂದು.

blank ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ “ದಿಯಾ” ಸಿನಿಮಾ ಖ್ಯಾತಿಯ ನಟಿ ಖುಷಿ ರವಿ ಬಹಳ ಅದ್ಭುತವಾದ ಫೋಟೋಶೂಟ್​ ಒಂದನ್ನ ಮಾಡಿಸಿದ್ದಾರೆ.. ಈ ಫೋಟೋಶೂಟ್​ನಲ್ಲಿ ಖುಷಿ ಸಾಕ್ಷಾತ್​ ಧರೆಗಿಳಿದ ಮಹಾಲಕ್ಷ್ಮಿಯಂತೆ ಕಾಣಿಸುತ್ತಿದ್ದಾರೆ. ಬಿಳಿ ಮತ್ತು ಗೋಲ್ಡನ್​ ಬಣ್ಣದ ಸೀರೆ ಧರಿಸಿ ಚೆಂದದ ಆಭರಣಗಳನ್ನು ತೊಟ್ಟು ಖುಷಿ ದೇವತೆಯಂತೆ ಕಂಗೊಳ್ಳಿಸಿದ್ದಾರೆ.

blank

 

ಇನ್ನು ಖುಷಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಈ ಅದ್ಭುತವಾದ ಫೋಟೋಶೂಟ್​ನ ಪೋಟೋಗಳನ್ನು ಶೇರ್​ ಮಾಡಿದ್ದಾರೆ. ಸದ್ಯ ಖುಷಿಯ ಈ ಮಹಾಲಕ್ಷ್ಮಿ ಅವತಾರವನ್ನು ಕಂಡ ಅವರ ಅಭಿಮಾನಿಗಳು ಅವರ ಫೋಟೋಗಳಿಗೆ ಕಮೆಂಟ್​ಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಇನೂ ಕೆಲ ಅಭಿಮಾನಿಗಳು ನೀವು ಸಕ್ಷಾತ್​ ಮಹಾಲಕ್ಷ್ಮಿಯಂತೆ ಕಾಣಿಸುತ್ತಿದ್ದಿರಾ ಅಂತಾ ಖುಷಿ ಫೋಟೋಸ್​ಗೆ ಕಮೆಂಟ್​ ಮಾಡುತ್ತಿದ್ದಾರೆ.

blank

ಸದ್ಯ ದಿಯಾ ಖುಷಿಯವರು ಸ್ಫೂಕಿ ಕಾಲೇಜು ರಿಲೀಸ್​​​ಗೆ ಸಿದ್ಧವಾಗುತ್ತಿದೆ.. ನಕ್ಷೆ ಅನ್ನೊ ಸಿನಿಮಾವನ್ನ ಓಟಿಟಿ ಜಗತ್ತಿಗೆ ಅರ್ಪಣೆ ಮಾಡಲು ಸಜ್ಜಾಗಿದ್ದಾರೆ.. ಇದ್ರ ಜೊತೆಗೆ ದಿಯಾ ಸಿನಿಮಾದ ಸಹಾ ಪ್ರೇಮಿ ಪೃಥ್ವಿ ಅಂಬರ್ ಜೊತೆ ಹೆಸರಿಡದ ಚಿತ್ರವೊಂದಕ್ಕೆ ಕೆಲಸ ಮಾಡ್ತಿದ್ದಾರೆ.

blank

 

ತಮಿಳಿನ ಆಲ್ಬಂ ಒಂದರಲ್ಲಿ ದಿಯಾ ಕುಣಿದು ಬಂದಿದ್ದಾರೆ.. ಆದಿನಗಳು ಚೇತನ್ ಜೊತೆ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಸಿನಿಮಾ ಮಾಡಲಿದ್ದಾರೆ.. ಚೇತನ್ ಸಿನಿಮಾದ ಮೂಲಕ ಟಾಲಿವುಡ್​​ಗೂ ದಿಯಾ ಬಲಗಾಲಿಡಲಿದ್ದಾರೆ.. ಇದ್ರಜೊತೆಗೆ ಒಂದು ಶಾರ್ಟ್ ಫಿಲ್ಮ್ ಕೂಡ ಮಾಡಿದ್ದಾರಂತೆ.. ಒಟ್ಟಿನಲ್ಲಿ ದಿಯಾ ಖ್ಯಾತಿಯ ಖುಷಿ ಸಿನಿಮಾಗಳಲ್ಲಿ ಫುಲ್​ ಬ್ಯುಸಿಯೊ ಬ್ಯುಸಿ.

blank

blank

blank

blank

blank

 

 

Source: newsfirstlive.com Source link