ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಕೊಡಗಿನ ಮಾಂದಲಪಟ್ಟಿಯ ‘ಪುಷ್ಪ ಸಾಮ್ರಾಜ್ಯ’

ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಕೊಡಗಿನ ಮಾಂದಲಪಟ್ಟಿಯ ‘ಪುಷ್ಪ ಸಾಮ್ರಾಜ್ಯ’

ಧರೆಗಿಳಿದ ಸ್ವರ್ಗ ಅನ್ನೋ ಮಾತನ್ನ ನೀವೆಲ್ಲಾ ಬಹಳಷ್ಟು ಬಾರಿ ಕೇಳಿರ್ತಿರಾ. ಆದ್ರೆ ಅದನ್ನ ನೋಡಿದ್ದಿರೋ ಗೊತ್ತಿಲ್ಲ. ಇವತ್ತು ಮಾತ್ರ ನಾವು ನಿಮಗೆ ಅಕ್ಷರಶಃ ಈ ಸ್ವರ್ಗವನ್ನ ತೋರಿಸ್ತೀವಿ. ಎಲ್ಲಿದೆ ಆ ಸ್ವರ್ಗ, ಹೇಗಿದೆ ಅದು ಅನ್ನೋ ಕುತೂಹಲ ಇದೆ ಅಲ್ವಾ?

blank

ಒಂದೆಡೆ ಮಂಜಿನ ಮೆರವಣಿಗೆ..ಮತ್ತೊಂದೆಡೆ ಹಸಿರ ಹೊದಿಕೆ ಮೇಲೆ ಹೂವಿನ ರಾಶಿ.ಕಣ್ಣು ಹಾಯಿಸಿದಲ್ಲಾ ಬೆರಗಾಗುವಷ್ಟು ಸೌಂದರ್ಯ ರಾಶಿ ರಾಶಿ ಹೂವುಗಳು. ಪ್ರವಾಸಿಗರು ಪುಳಕಿತಗೊಳಿಸುವ ಹೂದೋಟ.. ಬೆಟ್ಟ ಗುಡ್ಡ.. ಬಯಲು… ಹೀಗೆ ಎಲ್ಲ ಕಡೆ ಹೂವೇ ಹೂವು..

blank

ಇದನ್ನೂ ಓದಿ: ರೈತರ ಭರ್ಜರಿ ಐಡಿಯಾ ತಂದ ಲಾಭ; ‘ಸೂರ್ಯಕಾಂತಿ ಸೆಲ್ಫಿ’ಗೆ ಎಷ್ಟು ಹಣ ಕೊಡಬೇಕು ಗೊತ್ತಾ?!

ಇದು ಮಡಿಕೇರಿ ಸಮೀಪದ ಮಾಂದಲಪಟ್ಟಿ ಬೆಟ್ಟ ಸಾಲಿನಲ್ಲಿ ಕಂಡು ಬಂದಿರೋ ಹೂವಿನ ರಾಶಿ.. ಬೆಟ್ಟದ ಮೇಲೆ ಹೂವಿನ ಕೃಷಿ ಮಾಡಿರುವ ಹಾಗೆ ಹೂ ಮಳೆ.. ಕುರುಂಜಿ ಗಿಡ ಎಂಬ ಈ ಸಸ್ಯ ಸ್ಥಳೀಯರು ಹೇಳುವಂತೆ ಆರು ವರ್ಷಗಳಿಗೊಮ್ಮೆ ಮಾತ್ರ ಹೂಬಿಟ್ಟು ನಳನಳಿಸುತ್ತದೆ. ಚುಮು ಚುಮು ಚಳಿಯ ಮಧ್ಯೆ ಮಬ್ಬು ಮಬ್ಬಾದ ಮಂಜಿನ ಕಣ್ಣಮುಚ್ಚಾಲೆ ಆಡುತ್ತೆ.. ಈ ಮಧ್ಯೆ ತಿಳಿ ನೇರಳೆ ಬಣ್ಣದಲ್ಲಿ ಕಂಗೊಳಿಸೋ ಈ ಕುರುಂಜಿ ಹೂವು ನೋಡುವುದೇ ಕಣ್ಣಿಗೆ ಆನಂದ, ಅದೊಂದು ಹಬ್ಬ..

blank

ಮಾಂದಲಪಟ್ಟಿ ವರ್ಷ ಪೂರ್ತಿ ಹಸಿರಿನಿಂದ ಕಂಗೊಳಿಸುತ್ತಿರುತ್ತದೆ. ಈ ಹಸಿರು ಸೃಷ್ಟಿಯಾಗುವುದು ಇದೇ ಕುರುಂಜಿ ಗಿಡದಿಂದ. ಆದ್ರೆ ಆರು ವರ್ಷಗಳಿಗೊಮ್ಮೆ ಮಾತ್ರ ಈ ಗಿಡ ಹೂ ಬಿಟ್ಟಾಗ ಅಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಹೂವಿನ ಅಲೆಯೇ ಸೃಷ್ಟಿಯಾಗುತ್ತದೆ. ಹಾಗಾಗಿ ಈ ಸಮಯದಲ್ಲಿ ಮಾಂದಲಪಟ್ಟಿಗೆ ಆಗಮಿಸುವ ಪ್ರವಾಸಿಗರ ಪಾಲಿಗೆ ಇದೊಂದು ಬೋನಸ್. ಇನ್ನೊಂದು ವಾರದವರೆಗೆ ಈ ಹೂವು ಹೀಗೆ ನಳನಳಿಸುತ್ತದೆ. ಹೀಗಾಗಿ ಈ ಅವಧಿಯಲ್ಲಿ ಭೇಟಿ ನೀಡೋ ಪ್ರವಾಸಿಗರ ಕಣ್ಣುಗಳಿಗೆ ಹಬ್ಬವೋ ಹಬ್ಬ..

blank

ಏನೇ ಆದ್ರೂ ಸದ್ಯಕ್ಕಂತೂ ಮಾಂದಲಪಟ್ಟಿ ಧರೆಗಿಳಿದ ಸ್ವರ್ಗದಂತಿದೆ. ಕಲ್ಪನೆಯ ಸ್ವರ್ಗಕ್ಕಿಂತ ಕಣ್ಣಿಗೆ ಕಾಣುವ, ಅನುಭವಕ್ಕೆ ನಿಲುಕುವ ಸ್ವರ್ಗದಂತಿದೆ. ಈ ಸ್ವರ್ಗದಲ್ಲಿ ಒಂದಷ್ಟು ಹೊತ್ತು ಜಾಲಿಯಾಗಿ ಎಂಜಾಯ್ ಮಾಡುವುದು ನಿಜಕ್ಕು ಅವಿಸ್ಮರಣೀಯ.

ವಿಶೇಷ ವರದಿ: ಯುಗ ದೇವಯ್ಯ, ನ್ಯೂಸ್​ಫಸ್ಟ್​, ಕೊಡಗು

Source: newsfirstlive.com Source link