ಅಫ್ಘಾನ್​ನಲ್ಲಿ ಅರಾಜಕತೆ..ಸಿಲಿಕಾನ್​ ಸಿಟಿಯಲ್ಲಿ ಗಗನಕ್ಕೇರಿದ ಡ್ರೈ ಫ್ರೂಟ್ಸ್ ಬೆಲೆ

ಅಫ್ಘಾನ್​ನಲ್ಲಿ ಅರಾಜಕತೆ..ಸಿಲಿಕಾನ್​ ಸಿಟಿಯಲ್ಲಿ ಗಗನಕ್ಕೇರಿದ ಡ್ರೈ ಫ್ರೂಟ್ಸ್ ಬೆಲೆ

ಬೆಂಗಳೂರು: ಅಫ್ಘಾನ್​ನಲ್ಲಿ ಅರಾಜಕತೆ ಉಂಟಾಗಿ, ಅಫ್ಘಾನ್​ ತಾಲಿಬಾನ್​ ವಶದಲ್ಲಿರೊದ್ರಿಂದ ವ್ಯಾಪಾರ ವಹಿವಾಟಿನ ಮೇಲೆ ತೀವ್ರ ಪೆಟ್ಟು ಬಿದ್ದಿದೆ. ಅಫ್ಘಾನ್ ದೇಶದಿಂದ ಯಾವುದೇ ಕಚ್ಚಾ ವಸ್ತುಗಳು, ಪದಾರ್ಥಗಳು ಸದ್ಯ ಆಮದಾಗುತ್ತಿಲ್ಲವಾದರಿಂದ ಆಮದಿನ ಕೊರತೆ ಉಂಟಾಗಿ ದೇಶದಲ್ಲಿ ಡ್ರೈ ಫ್ರೂಟ್ಸ್​ಗಳ ದರದಲ್ಲಿ ಭಾರೀ ಏರಿಕೆ ಕಂಡಿದ್ದು, ಸಿಲಿಕಾನ್​ ಸಿಟಿಗೂ ದರ ಹೆಚ್ಚಳದ ಬಿಸಿ ತಟ್ಟಿದೆ.

blank

ಹೌದು ಅಫ್ಘಾನ್​ನಲ್ಲಿ ತಾಲಿಬಾನಿಗಳ ಅಟ್ಟಹಾಸ ದೇಶದ ವ್ಯಾಪಾರ, ವಹಿವಾಟಿನ ಮೇಲೂ ಪರಿಣಾಮ ಬೀರಿದೆ. ವಿಶ್ವದಲ್ಲೇ ಅತ್ಯುತ್ತಮ ಡ್ರೈ ಫ್ರೂಟ್ಸ್ ಗೆ ಹೆಸರುವಾಸಿಯಾದ ದೇಶ ಅಫ್ಘಾನಿಸ್ತಾನ. ಇಲ್ಲಿಯ ಡ್ರೈ ಫ್ರೂಟ್ಸ್ ಗೆ ವಿಶ್ವದರ್ಜೆಯ ಮಾನ್ಯತೆ ಇದೆ. ಅಷ್ಟೇ ಯಾಕೆ ನಮ್ಮ ಸಿಲಿಕಾನ್​ ಸಿಟಿಗೂ ಕೂಡ ಡ್ರೈ ಫ್ರೂಟ್ಸ್ ಅಫ್ಘಾನಿಸ್ತಾನದಿಂದಲೇ ಬರ್ತಿತ್ತು.

blank

ಆದರೆ ಅಫ್ಘಾನ್​ನಲ್ಲಿ ತಾಲಿಬಾಣಿಗಳ ತಾಂಡವ ಮುಂದುವರೆದಿದ್ದು ಅತಂರಾಷ್ಟ್ರೀಯ ರಫ್ತು-ಆಮದಿನ ವ್ಯವಹಾರ ಸಂಪೂರ್ಣ ಬಂದ್​ ಆಗಿದೆ. ಪರಿಣಾಮ ಭಾರತಕ್ಕಷ್ಟೇ ಅಲ್ಲ ಈಡೀ ರಾಷ್ಟ್ರಕ್ಕೆ ಡ್ರೈ ಫ್ರೂಟ್ಸ್​ ರಫ್ತು ಮಾಡ್ತಿದ್ದ ಅಫ್ಘಾನ್​ ಸೈಲೆಂಟ್​ ಆಗಿದೆ. ಇದರ ಪರಿಣಾಮ ದೇಶದ ಮಾರುಕಟ್ಟೆಯ ಮೇಲೂ ಬಿದ್ದಿದ್ದು, ಡ್ರೈ ಫ್ರೂಟ್ಸ್ ಗಳ ದರದಲ್ಲಿ ಈ ಹಿಂದಿನ ದರಕ್ಕಿಂತ ಶೇಕಡಾ 80 ರಿಂದ ಶೇ. 90 ರಷ್ಟು ದರ ಏರಿಕೆ ಕಂಡಿದೆ.

blank

ಇನ್ನು ಅಫ್ಘನ್ ನಿಂದ ಬೆಂಗಳೂರಿಗೆ ಬರ್ತಾ ಇದ್ದ ಪ್ರಮುಖ ಡ್ರೈ ಫ್ರೂಟ್ಸ್ ಗಳು ಯಾವುವು.. ಅವುಗಳ ಬೆಲೆ ಎಷ್ಟಾಗಿದೆ ಅಂತ ನೋಡೋದಾದ್ರೆ..

  1. blank
  1. ಅಂಜುರಾ ಈ ಹಿಂದೆ ಒಂದು ಕೆಜಿಗೆ 1400 ರೂ, ಇದ್ದ ಬೆಲೆ ಈಗ 2400 ರೂಪಾಯಿ ಆಗಿದೆ.
  2. ಪೈನ್ ನಟ್ಸ್ ವೈಟ್ ಈ ಹಿಂದೆ ಒಂದು ಕೆಜಿಗೆ 5400 ರೂ, ಈಗ ಇದರ ಬೆಲೆ 8800ರೂಪಾಯಿ
  3. ಪೈನ್ ನಟ್ಸ್ ವಿತ್ ಸೆಲ್ಸ್ ಈ ಹಿಂದೆ ಒಂದು ಕೆಜಿಗೆ 3800 ರೂ ಇದ್ದ ಬೆಲೆ ಈಗ 5400 ರೂಪಾಯಿ
  4. ಗ್ರೀನ್ ಗ್ರೇಪ್ಸ್ ಈ ಹಿಂದೆ ಒಂದು ಕೆಜಿಗೆ 540 ರೂಪಾಯಿ, ಈಗ ಒಂದು ಕೆಜಿಗೆ 920 ರೂಪಾಯಿ
  5. ಸಾಫ್ರಾನ್ (ಕೇಸರಿ) 1 ಗ್ರಾಂ ಗೆ ಈ ಹಿಂದೆ 195 ರೂಪಾಯಿ, ಈಗ 1 ಗ್ರಾಂ ಗೆ 395 ರೂಪಾಯಿ
  6. ಬಾದಾಮಿ ಈ ಹಿಂದೆ ಒಂದು ಕೆಜಿಗೆ 1200 ರೂಪಾಯಿ, ಈಗ ಒಂದು ಕೆಜಿಗೆ 2200 ರೂಪಾಯಿ
  7. ಡ್ರೈ ಆಪ್ರಿಕೊಟ್ (Apricot) ಈ ಹಿಂದೆ ಒಂದು ಕೆಜಿಗೆ 540 ರೂಪಾಯಿ, ಈಗ ಒಂದು ಕೆಜಿಗೆ 850 ರೂಪಾಯಿ
  8. ಬ್ಲಾಕ್ ಗ್ರೇಪ್ಸ್ ಈ ಹಿಂದೆ ಒಂದು ಕೆಜಿಗೆ 700 ರೂಪಾಯಿ ಇತ್ತು, ಈಗ ಒಂದು ಕೆಜಿಗೆ 1200 ರೂಪಾಯಿ

ವಿಶೇಷ ವರದಿ: ಶಿವಪ್ರಸಾದ್ ಎಂ.ಆರ್, ಮೆಟ್ರೋ ಬ್ಯೂರೋ

Source: newsfirstlive.com Source link