ಗಣಿಧನಿ ಮೇಲೆ ವರಮಹಾಲಕ್ಷ್ಮೀ ಕೃಪೆ; ಅಂದು ಸುಷ್ಮಾರನ್ನು ಹಬ್ಬಕ್ಕೆ ಕರೆಸಿದ್ದ ಜನಾರ್ದನ​ ರೆಡ್ಡಿ

ಗಣಿಧನಿ ಮೇಲೆ ವರಮಹಾಲಕ್ಷ್ಮೀ ಕೃಪೆ; ಅಂದು ಸುಷ್ಮಾರನ್ನು ಹಬ್ಬಕ್ಕೆ ಕರೆಸಿದ್ದ ಜನಾರ್ದನ​ ರೆಡ್ಡಿ

ಬಳ್ಳಾರಿ ಗಣಿಧಣಿಯ ದಶಕಗಳ ವ್ರತಕ್ಕೆ ತಾಯಿ ವರಮಹಾಲಕ್ಷ್ಮೀ ಫಲ ನೀಡಿದ್ದಾಳೆ. ಬರೋಬ್ಬರಿ 10 ವರ್ಷದ ಬಳಿಕ ಜನಾರ್ದನ ರೆಡ್ಡಿಗೆ ಬಳ್ಳಾರಿ ಜಿಲ್ಲೆ ಪ್ರವೇಶಕ್ಕೆ ಸುಪ್ರೀಂಕೋರ್ಟ್​ ಅನುಮತಿ ಕೊಟ್ಟಿದೆ. ಈ ಮೂಲಕ ವರ್ಷಾನುಗಟ್ಟಲೇ ಮಾಡಿದ್ದ ವಿಶೇಷ ತಪಸ್ಸಿಗೆ ಆ ದೇವಿ ತಥಾಸ್ತು ಎಂದಿದ್ದಾಳೆ.

ಗಾಲಿ ಜನಾರ್ದನ ರೆಡ್ಡಿ.. ಮಾಜಿ ಸಚಿವ, ಅಕ್ರಮ ಗಣಿ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿ ಸದ್ಯ ಹೊರಗಿದ್ದಾರೆ. ಆದರೆ ರೆಡ್ಡಿಗೆ ತವರು ಪ್ರವೇಶಕ್ಕೆ ಅವಕಾಶ ಸಿಗದೇ ಅನಾಥ ಭಾವದಲ್ಲಿದ್ರು. ಈಗ ಮಾಜಿ ಸಚಿವ ಜನಾರ್ದನ ರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಪುರಸ್ಕರಿಸಿದೆ. ಸಿಬಿಐ ಆಕ್ಷೇಪದ ನಡುವೆ ಗಾಲಿ ರೆಡ್ಡಿ ಬಳ್ಳಾರಿಗೆ ತೆರಳಲು ಕೋರ್ಟ್ ಅನುಮತಿ ನೀಡಿದ್ದು ಸಾಕ್ಷಾತ್​ ವರಮಹಾಲಕ್ಷ್ಮೀ ವರ ನೀಡಿದ್ದಾಳೆ ಎಂದೇ ಬಿಂಬಿಸಲಾಗ್ತಿದೆ.

ಇದನ್ನೂ ಓದಿ: ‘ಗಣಿದಣಿ’ ಜನಾರ್ದನ ರೆಡ್ಡಿ ಮೇಲೆ ‘ವರ’ಮಹಾಲಕ್ಷ್ಮೀ ಕೃಪೆ

ಹೌದು ವರಮಹಾಲಕ್ಷ್ಮೀಯ ಪರಮ ಭಕ್ತ ಗಾಲಿ ಜನಾರ್ದನ ರೆಡ್ಡಿ. ಪ್ರತಿ ವರ್ಷ ವರಮಹಾಲಕ್ಷ್ಮೀಯ ಹಬ್ಬವನ್ನು ಬಹಳ ಸಡಗರ, ಸಂಭ್ರಮ ಅದ್ಧೂರಿಯಿಂದ ಆಚರಿಸ್ತಾರೆ.. ಇದೇ ವರ ಮಹಾಲಕ್ಷ್ಮಿ ಹಬ್ಬಕ್ಕೆ ಬಿಜೆಪಿಯ ಒಂದು ಕಾಲದ ಪ್ರಭಾವಿ ನಾಯಕಿಯಾಗಿದ್ದ ದಿ.ಸುಷ್ಮಾ ಸ್ವರಾಜ್‌ರನ್ನು ವಿಶೇಷವಾಗಿ ವರಮಹಾಲಕ್ಷ್ಮೀ ಹಬ್ಬಕ್ಕೆ ಕರೆಸಿಕೊಂಡು, ಅಮ್ಮ ಎಂದು ಸಂಬೋಧಿಸಿ ಪ್ರವರ್ಧಮಾನಕ್ಕೆ ಬಂದಿದ್ದರು ಗಾಲಿ ಜನಾರ್ದನ ರೆಡ್ಡಿ.

ಇಂದು ವರಮಹಾಲಕ್ಷ್ಮಿ ವ್ರತ. ಶ್ರಾವಣ ಮಾಸದ ಶುಕ್ಲಪಕ್ಷದ ಎರಡನೇ ಶುಕ್ರವಾರ, ಪ್ರತಿ ವರ್ಷ ವರ ಮಹಾಲಕ್ಷ್ಮಿ ವ್ರತ. ವರಮಹಾಲಕ್ಷ್ಮೀ ಹಬ್ಬದ ಹಿಂದಿನ ದಿನವೇ ಬಳ್ಳಾರಿ ಗಣಿ ಮಾಲೀಕನಿಗೆ ಬಳ್ಳಾರಿ ಪ್ರವೇಶಿಸಲು ಅನುಮತಿ ಸಿಕ್ಕಿರುವುದು ಸಾಕ್ಷಾತ್​ ತಾಯಿಯ ಕೃಪಾಶೀರ್ವಾದದಿಂದಲೇ ಎನ್ನಲಾಗ್ತಿದೆ.

Source: newsfirstlive.com Source link