ಮೆಕ್ಕಾ ಮಸೀದಿ, ಈದ್ಗಾ ಭೂಮಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಿಂತನೆ

ನೆಲಮಂಗಲ: ಮುಷ್ತಾಕ್ ಷಾ ಮಕಾನ್ ಮೆಕ್ಕಾ ಮಸೀದಿ ಮತ್ತು ಈದ್ಗಾಗೆ ಸುಮಾರು 53 ವರ್ಷಗಳ ಇತಿಹಾಸವಿದೆ. ಬೆಂಗಳೂರು ಹೊರವಲಯ ನೆಲಮಂಗಲ ನಗರದ ಕುಣಿಗಲ್ ಬೈಪಾಸ್ ಬಳಿಯ ಈ ಭೂಮಿಯಲ್ಲಿ ಸಮುದಾಯದ ಜನರಿಗೆ ಹಾಗೂ ಮುಂದಿನ ಪೀಳಿಗೆಗೆ ಅನುಕೂಲವಾಗುವಂತೆ ವಿವಿಧ ಯೋಜನೆ ಕನಸಿನೊಂದಿಗೆ ಮುಖಂಡರು ಚಿಂತನೆಯನ್ನ ನಡೆಸಿದ್ದಾರೆ.

1968ರ ಫೆಬ್ರವರಿ 8 ರಂದು ಮೈಸೂರು ಸಂಸ್ಥಾನದ ಗೆಜೆಟ್‍ನಲ್ಲಿ ಪ್ರಕಟಗೊಂಡು 3 ಎಕರೆ 10 ಗುಂಟೆ ಜಮೀನನ್ನು ವಕ್ಫ್ ಬೋರ್ಡ್‍ಗೆ ನೀಡಲಾಯಿತು. ಕೆಲವರು ದುರುದ್ದೇಶದಿಂದ ಬೆಲೆ ಬಾಳುವ ಈ ಭೂಮಿಯನ್ನ ಕಬಳಿಸಲು ಮುಂದಾಗಿದ್ದರು. ಹೀಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳು ಸಂಕ್ಷಿಪ್ತವಾಗಿ ಪರಿಗಣಿಸಿ ಸಮುದಾಯದ ಜನರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲು ಈ ವೇಳೆ ಮುಖಂಡರು ಮನವಿ ಮಾಡಿದರು.

ಮುಂದೆ ಎಲ್ಲರ ಸಹಮತದಿಂದ ಇಲ್ಲಿ ಸುಮಾರು 2 ಸಾವಿರ ಮಂದಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ಮೈದಾನ ಅದರ ಸುತ್ತಮುತ್ತಲಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಟ್ಟು ಹಸಿರೀಕಣ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಮಸೀದಿಯ ಆವರಣದಲ್ಲಿ 50 ಹಾಸಿಗೆಗಳ ಆಸ್ಪತ್ರೆ, ಶಾಲೆ, ಕಲ್ಯಾಣ ಮಂಟಪ ನಿರ್ಮಿಸುವ ಯೋಜನೆಯನ್ನು ದಾನಿಗಳ ನೆರವು ಸರ್ಕಾರದ ಅನುದಾನವನ್ನು ಪಡೆದು ಜಾರಿಗೊಳಿಸಲು ನಿರ್ಧರಿಸಲಾಗಿದೆ. ಇದನ್ನೂ ಓದಿ: ಮಂಗಳೂರಿನಲ್ಲಿ ನಡೀತಿರುವ ಭಯೋತ್ಪಾದಕ ಚಟುವಟಿಕೆಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ: ಅರಗ ಜ್ಞಾನೇಂದ್ರ

blank

ಈಗಾಗಲೇ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಯೋಜನೆಯಡಿ ನೆರವು ನೀಡುವ ಆಶ್ವಾಸನೆಯನ್ನು ಮುಖ್ಯಮಂತ್ರಿಗಳು ನೀಡಿದ್ದು, ಸಮಾಜದ ಬಂಧುಗಳು ನೆರವಿನ ಹಸ್ತ ಚಾಚಿರುವುದು ನಮ್ಮ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಆನೆ ಬಲ ಬಂದಂತಾಗಿದೆ. ಈ ಅಭಿವೃದ್ಧಿ ಕಾರ್ಯಕ್ರಮದ ಬಗ್ಗೆ ಇತ್ತೀಚೆಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರನ್ನು ಭೇಟಿ ಮಾಡಿ ಚರ್ಚಿಸಲಾಗಿದೆ ಎಂದರು. ಇದನ್ನೂ ಓದಿ: ನಮ್ಮ ಪಾರ್ಟಿಗೆ ಸಿದ್ಧಾಂತವಿದೆ, ಬೇರೆಯವರಂತೆ ಮಾಡಲ್ಲ-ಸತೀಶ್ ಜಾರಕಿಹೊಳಿ

blank

ಈ ವೇಳೆ ಮಾಜಿ ಶಾಸಕ ಎಂ.ನಾಗರಾಜ್, ನೆಲಮಂಗಲ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಸ್.ಮಲ್ಲಯ್ಯ, ಶಾವೀಜ್ ಅಹಮದ್ ಅಧ್ಯಕ್ಷರು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ, ಸೈಯದ್ ಅಹಮದ್ ಜಿಲ್ಲಾಧ್ಯಕ್ಷರು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ, ಅಬ್ದುಲ್ ಕರೀಂ ಷರೀಪ್ ಅಧ್ಯಕ್ಷರು, ಮೊಹಮ್ಮದ್ ಸಾಧಿಕ್ ಅಹಮದ್ ಪ್ರಧಾನ ಕಾರ್ಯದರ್ಶಿ, ಸಲೀಲ್ ಉಪಾಧ್ಯಕ್ಷರು ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

Source: publictv.in Source link