ಉಳಿದ 4 ಸ್ಥಾನಗಳಿಗೆ ಹೆಚ್ಚಿದ ಪೈಪೋಟಿ.. ಮತ್ತೆ ರೆಬೆಲ್​ ಆಗ್ತಾರಾ ಅತೃಪ್ತ ಶಾಸಕರು?

ಉಳಿದ 4 ಸ್ಥಾನಗಳಿಗೆ ಹೆಚ್ಚಿದ ಪೈಪೋಟಿ.. ಮತ್ತೆ ರೆಬೆಲ್​ ಆಗ್ತಾರಾ ಅತೃಪ್ತ ಶಾಸಕರು?

ರಾಜ್ಯ ಬಿಜೆಪಿಯಲ್ಲಿ ಸಂಪುಟ ವಿಸ್ತರಣೆ ಅಧಿವೇಶನಕ್ಕೂ ಮೊದಲೋ.. ಬಳಿಕವೋ.. ಎಂಬ ಗೊಂದಲ ಉಂಟಾಗಿದೆ. ಈ ಕುರಿತು ಕೇಸರಿ ಪಡೆಯಲ್ಲಿ ಜಿಜ್ಞಾಸೆ ಉಂಟಾಯ್ತಾ ಎನ್ನಲಾಗ್ತಿದೆ.ಅಧಿವೇಶನಕ್ಕೂ ಮೊದಲೇ ಸಂಪುಟ ವಿಸ್ತರಣೆ ಮಾಡುವ ಮೂಲಕ ಭುಗಿಲೆದ್ದಿರುವ ಅಸಮಾಧಾನ ಶಮನ ಮಾಡುತ್ತಾರೋ, ಇಲ್ಲವೇ ಅಧಿವೇಶನದ ಬಳಿಕ ಕೈಹಾಕುತ್ತಾರೋ ಎಂಬ ಗೊಂದಲ ಮೂಡಿಸಿದೆ.

ಸದ್ಯ ಈ ಮೊದಲು ಅಸಮಾಧಾನ ಹೊರ ಹಾಕಿದ್ದ ಸಚಿವಾಕಾಂಕ್ಷಿಗಳು ಸದ್ಯ ಸೈಲೆಂಟ್ ಆಗಿದ್ದು ಸಿಎಂ ಬೊಮ್ಮಯಿ ಕೂಡ ನಿರಾಳರಾಗಿದ್ದರು. ಆದರೆ ಈಗ ಸಂಪುಟ ವಿಸ್ತರಣೆಯ ಮಾತುಗಳು ಕೇಸರಿ ಪಡೆಯಲ್ಲಿ ಚಾಲ್ತಿ ಪಡೆದಿದೆ. ಈಗಾಗಲೇ ಖಾಲಿ‌ ಉಳಿದಿರುವ ನಾಲ್ಕು ಸ್ಥಾನಗಳಿಗೆ ಹಲವು ಸಚಿವಾಕಾಂಕ್ಷಿಗಳಿಂದ ಪೈಪೋಟಿ ಆರಂಭವಾಗಿದೆ ಎನ್ನಲಾಗ್ತಿದೆ. ಸಂಪುಟ ವಿಸ್ತರಣೆ ವೇಳೆ ಶತಾಯಗತಾಯ ಪ್ರಯತ್ನ ಮಾಡಿ ಸಚಿವ ಸ್ಥಾನ ಪಡೆಯಲೇಬೇಕೆಂದು ಪೈಪೋಟಿ ನಡೆಸುತ್ತಿದ್ದಾರಂತೆ.

ಇದನ್ನೂ ಓದಿ: ಖಾತೆ ಬದಲಾವಣೆ ಸುದ್ದಿಗೆ ಸದ್ದು ಮಾಡದ MTB -ಅಸಮಾಧಾನ ಬಳಿಕ ಸೈಲೆಂಟ್​ ಆಗಿದ್ದೇಕೆ?

ಪೂರ್ಣಪ್ರಮಾಣದಲ್ಲಿ ಒಮ್ಮೆ ಸಂಪುಟ ಭರ್ತಿಯಾದರೆ ಮತ್ತೆ ಅವಕಾಶ ಸಿಗುವುದಿಲ್ಲವೆಂಬ ಕಾರಣಕ್ಕೆ ಪ್ರಬಲ ಸಚಿವಾಕಾಂಕ್ಷಿಗಳು ಪೈಪೋಟಿಗಿಳಿದಿದ್ದಾರೆ. ಒಂದು ಕಡೆ ಪಕ್ಷ ನಿಷ್ಠರಿಂದ ಸಚಿವ ಸ್ಥಾನದ ಗುದ್ದಾಟ ಶುರುವಾಗಿದ್ರೆ, ಮತ್ತೊಂದೆಡೆ‌ ಬಿಎಸ್‌ವೈ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದವರಿಂದ ಪೈಪೋಟಿ ಶುರುವಾಗಿದೆ.

ಕಮಲ ಪಡೆಯ ಪ್ರಭಾವಿ ನಾಯಕರಾದ, ಬಾಲಚಂದ್ರ ಜಾರಕಿಹೊಳಿ, ಸಿ.ಪಿ ಯೋಗೇಶ್ವರ್, ಬಸನಗೌಡ ಪಾಟೀಲ್ ಯತ್ನಾಳ್, ರೇಣುಕಾಚಾರ್ಯ, ರಾಜೂಗೌಡ, ರಾಜಕುಮಾರ್ ಪಾಟೀಲ್, ಚಂದ್ರಪ್ಪ, ಮಹೇಶ್ ಕುಮಟಳ್ಳಿ, ದತ್ತಾತ್ರೇಯ ಪಾಟೀಲ್, ಮಾಡಾಳ್ ವಿರೂಪಾಕ್ಷಪ್ಪ, ಎನ್​. ಮಹೇಶ್, ಎಂ.ಪಿ ಕುಮಾರಸ್ವಾಮಿ ಸೇರಿದಂತೆ ಹಲವರಿಂದ ಪೈಪೋಟಿ ನಡೆದಿದೆ ಎಂದು ಅಂದಾಜಿಸಲಾಗಿದೆ.
ಅಷ್ಟೇ ಏಕೆ ಸಿ.ಪಿ. ಯೋಗೇಶ್ವರ್​, ಯತ್ನಾಳ್ ಗೆ ಏನಾದ್ರೂ ಅವಕಾಶ ಕೊಟ್ಟರೆ ಪುತ್ರ ಬಿ.ವೈ ವಿಜಯೇಂದ್ರ ಪರವಾಗಿ ಬಿಎಸ್‌ವೈ ಪಟ್ಟು ಹಿಡಿಯುವ ಸಾಧ್ಯತೆಗಳಿವೆ ಎನ್ನಲಾಗ್ತಿದೆ.

ಇದನ್ನೂ ಓದಿ: ಸೋನಿಯಾ ನೇತೃತ್ವದಲ್ಲಿ ಇಂದು ವಿಪಕ್ಷಗಳ ಸಭೆ; ಜೆಡಿಎಸ್ ಸ್ಟ್ಯಾಂಡ್ ಏನು ಗೊತ್ತಾ..?

Source: newsfirstlive.com Source link