ಟ್ರೈಲರ್ ರಿಲೀಸ್​ ಮಾಡಿ ‘ರತ್ನನ್​ ಪ್ರಪಂಚ’ದ ಝಲಕ್​ ತೋರಿಸಿದ ಡಾಲಿ

ಟ್ರೈಲರ್ ರಿಲೀಸ್​ ಮಾಡಿ ‘ರತ್ನನ್​ ಪ್ರಪಂಚ’ದ ಝಲಕ್​ ತೋರಿಸಿದ ಡಾಲಿ

ಸಿನಿಮಾ ಅನ್ನೋದೇ ಒಂದು ಕಲ್ಪನೆಯ ಪ್ರಪಂಚ.. ನಿರ್ದೇಶಕನ ಕಲಾ ಕುಂಚದಲ್ಲಿ ಅರಳುತ್ತೆ ಈ ಸಿನಿ ಪ್ರಪಂಚ.. ಈಗ ಕನ್ನಡ ಸಿನಿಮಾ ಪ್ರಪಂಚಕ್ಕೆ ಬರುತ್ತಿದೆ ಡಾಲಿ ಧನಂಜಯ್ ಅವರ ‘‘ರತ್ನನ್ ಪ್ರಪಂಚ’’ ನಮ್ಮ ಡಾಲಿಯ ‘ರತ್ನನ್ ಪ್ರಪಂಚ’ ಹೇಗಿದೆ? ಆ ಪ್ರಪಂಚದಲ್ಲಿ ಯಾರ್ ಯಾರ್ ಇದ್ದಾರೆ..? ಅನ್ನೋ ಮಸ್ತ್ ಮುನ್ನೋಟ ಮತ್ತು ಮಸ್ತ್ ಮಾಹಿತಿ ನಿಮಗಾಗಿ..

blank

ಡಾಲಿ ಧನಂಜಯ್ ತಾನೆಂಥ ನಟ, ಪ್ಲಸ್ ಘಟ ಅನ್ನೋದನ್ನ ಈಗಾಗಲೇ ತನ್ನ ಸಿನಿಮಾಗಳ ವಿಭಿನ್ನ ಪಾತ್ರಗಳ ಮೂಲಕ ಸಾಬೀತು ಮಾಡಿ ತೋರಿಸಿದ್ದಾರೆ. ಅಭಿನಯ ವಿಚಾರದಲ್ಲಿ ಡಾಲಿ ಧನಂಜಯ್ ಅವರನ್ನ ನಟ ರಾಕ್ಷಸ ಎನ್ನುತ್ತೆ ಅಭಿಮಾನಿ ಕುಲ.. ಡಾಲಿ ನಟನೆಯ ಎಂಥದ್ದು ಅನ್ನೋದಕ್ಕೆ ಕನ್ನಡಿ ಹಿಡಿಯುವಂಥಹ ಸಿನಿಮಾವೊಂದು ಬರುತ್ತಿದೆ.. ಅದುವೇ ‘ರತ್ನನ್ ಪ್ರಪಂಚ’.. ವರಮಹಾಲಕ್ಷ್ಮೀ ಹಬ್ಬಕ್ಕೆ ‘ರತ್ನನ ಪ್ರಪಂಚ’ದ ಇಂಟರೆಸ್ಟಿಂಗ್ ಮುನ್ನೋಟವನ್ನ ಚಿತ್ರತಂಡ ಹೊರ ಬಿಟ್ಟು ಚಿತ್ರಪ್ರೇಮಿಗಳ ಎದೆಯೊಳಗೆ ಕುತೂಹಲದ ಚಿಟ್ಟೆಯನ್ನ ಬಿಟ್ಟಿದೆ..

blank

ಟಗರು ಸಿನಿಮಾದ ನಂತರ ಧನಂಜಯ್ ; ಡಾಲಿ ಧನಂಜಯ್ ಆದ್ರು..

ಫಸ್ಟ್ ಇನ್ನಿಂಗ್ಸ್​​ನಲ್ಲಿ ಸರಿಯಾಗಿ ಬ್ಯಾಟ್ ಬೀಸದ ಬ್ಯಾಟ್ಸ್ ಮ್ಯಾನ್ ಸೆಕೆಂಡ್ ಇನ್ನಿಂಗ್ಸ್​ನಲ್ಲಿ ಸೆಂಚುರಿ ಬಾರಿಸಿದಂಗೆ, ಧನಂಜಯ್ ಡಾಲಿ ಆದ ನಂತರ ಅವರ ಸಿನಿಮಾಗಳ ಗತ್ತು ಗಮತ್ತೇ ಚೆಂಜ್ ಆಯ್ತು.. ಸಾಲು ಸಾಲು ಬಹುನಿರೀಕ್ಷಿತ ಸಿನಿಮಾಗಳಲ್ಲಿ ಡಾಲಿ ಧನಂಜಯ್ ಇಂತಿದ್ದಾರೆ. ಕೆಲ ದಿನಗಳ ಹಿಂದೆ ‘ಮಾನ್ಸೂನ್ ರಾಗ’ ಟೀಸರ್ ಹಾಗೂ ‘ಬಡವ ರಾಸ್ಕಲ್’ ಸಿನಿಮಾ ಉಡುಪಿ ಹೋಟೆಲ್ ಹಾಡಿನಿಂದ ಇಂಪ್ರೆಸ್ ಮಾಡಿದ್ದ ಡಾಲಿ ಈಗ ರತ್ನನ್ ಪ್ರಪಂಚದಲ್ಲಿ ಸುತ್ತಾಕುತ್ತಿದ್ದಾರೆ.

ಸರಳ ಸುಂದರವಾಗಿ ರತ್ನನ್ ಪ್ರಪಂಚ ಸಿನಿಮಾ ಮುಹೂರ್ತ ಹನ್ನೊಂದು ತಿಂಗಳ ಹಿಂದೆ ಸರಳವಾಗಿ ಆಗಿತ್ತು. ಆಗಿನಿಂದ ಈಗ ಟ್ರೈಲರ್ ಬರೋವರೆಗೂ ಆಗೊಂದು ಈಗೊಂದು ಪೋಸ್ಟರ್ ಬಿಟ್ಟು ಅಪ್​ಡೇಟ್ಸ್ ಕೊಡ್ತಿತ್ತು ರತ್ನನ್ ಪ್ರಪಂಚ ಸಿನಿ ಪ್ರಪಂಚ.. ಈಗ ಟ್ರೈಲರ್ ಬಿಟ್ಟು ನಾವು ರಿಲೀಸ್​​ಗೆ ರೆಡಿ ಅನ್ನೋ ಸುಂದರ ಸೂಚನೆ ಕೊಟ್ತಿದೆ ಚಿತ್ರತಂಡ..

blank

ರೋಹಿತ್ ಪದಕಿ ನಿರ್ದೇಶನದಲ್ಲಿ ಯೋಗಿ. ಜಿ.ರಾಜ್ ಹಾಗೂ ಹೊಂಬಾಳೆಯ ಕಾರ್ತಿಕ್ ಗೌಡ ನಿರ್ಮಾಣದಲ್ಲಿ ರತ್ನನ್ ಪ್ರಪಂಚ ಸಿನಿಮಾ ಮೂಡಿ ಬರುತ್ತಿದೆ.. ಡಾಲಿ ಜೊತೆಗೆ ರೆಬಾ ಜಾನ್ ಕಂಗೊಳಿಸಿದ್ದಾರೆ.. ಬಹುದಿನಗಳ ನಂತರ ಉಮಾಶ್ರೀ ಅದ್ಭುತ ಪಾತ್ರದ ಮೂಲಕ ಸಿನಿ ಲೋಕಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಹಿರಿಯ ನಟಿ ಶೃತಿ , ಅನುಪ್ರಭಾಕರ್, ರವಿಶಂಕರ್ ಗೌಡ , ವೈನಿಧಿ , ಅಚ್ಯುತ್ ಕುಮಾರ್ , ರಾಜೇಶ್ ನಟರಂಗ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ.

ರತ್ನನ್ ಪ್ರಪಂಚ ಚಿತ್ರದ ತಾರಾಗಣದ ಮತ್ತೊಂದು ವಿಶೇಷ ವಿಲನ್ ಪಾತ್ರದಾರಿ.. ಹೀರೋ ಆಗಿ ಗೀತಾ ಬ್ಯಾಂಗಲ್ ಸ್ಟೋರ್, ಪ್ರಿಮಿಯರ್ ಪದ್ಮಿನಿ ಹಾಗೂ ಮತ್ತೆ ಉದ್ಭವ ಸಿನಿಮಾದಲ್ಲಿ ಮಿಂಚಿದ್ದ ಪ್ರಮೋದ್ ಈ ರತ್ನನ್ ಪ್ರಪಂಚದಲ್ಲಿ ವಿಲನ್ ಆಗಿ ಘರ್ಜಿಸಿದ್ದಾರೆ.

ಒಟ್ಟಿನಲ್ಲಿ ರತ್ನನ ಪ್ರಪಂಚ ಚಿತ್ರದ ಟ್ರೈಲರ್​​​​ ನೋಡಿದ ಜನ ಮನ ಇಂಪ್ರೇಸ್ ಆಗುತ್ತಿದ್ದು ಯಾವಾಗ ಸಿನಿಮಾ ರಿಲೀಸ್ ಎಂದು ಆಕಾಶ ನೋಡ್ತಿದೆ..

Source: newsfirstlive.com Source link