ಜೋ ಬೈಡನ್ ಯಡವಟ್ಟು; ₹1.5 ಲಕ್ಷ ಕೋಟಿ ಬೆಲೆಯ ಶಸ್ತ್ರಾಸ್ತ್ರ, ವಾಹನ ತಾಲಿಬಾನ್​​ ಪಾಲು

ಜೋ ಬೈಡನ್ ಯಡವಟ್ಟು; ₹1.5 ಲಕ್ಷ ಕೋಟಿ ಬೆಲೆಯ ಶಸ್ತ್ರಾಸ್ತ್ರ, ವಾಹನ ತಾಲಿಬಾನ್​​ ಪಾಲು

ಅಮೆರಿಕ ಅಧ್ಯಕ್ಷ ಜೋ ಬೈಡನ್ ಯಡವಟ್ಟು ಮೇಲೆ ಯಡವಟ್ಟು ಮಾಡಿಕೊಳ್ತಿದ್ದಾರೆ. ಇದರಿಂದ ತಾಲಿಬಾನಿಗಳಿಂದ ಅಮೆರಿಕಕ್ಕೂ ಪೆಟ್ಟು ಬೀಳುವ ಸಾಧ್ಯತೆ ಎದುರಾಗಿದೆ. ಅಮೆರಿಕ ಸೇನೆ ಅಫ್ಘಾನ್ ದೇಶವನ್ನ ತೊರೆಯೋದಷ್ಟೇ ಅಲ್ಲ ಹೊರಡುವಾಗಿ ಬರೋಬ್ಬರಿ 1.5 ಲಕ್ಷ ಕೋಟಿ ಬೆಲೆಯ ಶಸ್ತ್ರಾಸ್ತ್ರಗಳನ್ನ ಅಫ್ಘಾನಿಸ್ತಾನದಲ್ಲೇ ಬಿಟ್ಟು ಹೋಗಿದೆ. ಇದೀಗ ಈ ಶಸ್ತ್ರಾಸ್ತ್ರಗಳು ತಾಲಿಬಾನ್​ ಪಾಲಾಗಿವೆ.
ಮಷೀನ್ ಗನ್ಸ್, ಡ್ರೋನ್ಸ್, ಚಾಪರ್ಸ್​​ ಹಮ್​ವೀಗಳು, ಆರ್ಮರ್ಡ್​ ವೆಹಿಕಲ್ಸ್​ಗಳು ಸೇರಿದಂತೆ ಭಾರೀ ಶಸ್ತ್ರಾಸ್ತ್ರಗಳು ಇದೀಗ ತಾಲಿಬಾನಿಗಳ ಪಾಲಾಗಿವೆ.

ಇದನ್ನೂ ಓದಿ: ಗಲ್ಲಿ ಗಲ್ಲಿಯಲ್ಲೂ ತಾಲಿಬಾನಿಗಳು ಅಟ್ಯಾಕ್; US ಸೇನೆಗೆ ಸಹಾಯ ಮಾಡ್ತಿರೋರನ್ನ ಗಲ್ಲಿಗೇರಿಸಿ ಪ್ರತಿಕಾರ

blank

ಅಮೆರಿಕ ಮಾಡಿದ ಯಡವಟ್ಟಿನಿಂದ ಇದೀಗ ಇಡೀ ಏಷ್ಯಾಕ್ಕೇ ಸಂಕಟವಾಗಿದೆ. ದಶಕಗಳ ಹಿಂದಿನ ಹಳೆಯ ಗನ್​ಗಳನ್ನ ಬಳಸುತ್ತಿದ್ದ ತಾಲಿಬಾನಿಗಳು ಇದೀಗ ನೈಟ್ ವಿಷನ್ ಗಾಗಲ್ಸ್ ಇರೋ ಬುಲೆಟ್ ಪ್ರೂಫ್ ಹೆಲ್ಮೆಟ್​ನಂಥ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನೂ ಬಳಸುವಂತಾಗಿದೆ.

ಇದನ್ನೂ ಓದಿ: ಅಫ್ಘಾನ್​ ಸ್ವತಂತ್ರ ದಿನದಂದೇ ತಾಲಿಬಾನಿಗಳ ಅಟ್ಟಹಾಸ -ತಂದೆ ಸಾವಿಗೆ ಉಗ್ರರ ವಿರುದ್ಧ ತೊಡೆ ತಟ್ಟಿದ ಪುತ್ರ

blank

ಒಂದು ಲೆಕ್ಕಾಚಾರದ ಪ್ರಕಾರ 2003 ರಿಂದ ಅಮೆರಿಕ ಅಫ್ಘಾನಿಸ್ತಾನಕ್ಕೆ M16 ಸೇರಿದಂತೆ ಸುಮಾರು 6 ಲಕ್ಷ ಶಸ್ತ್ರಾಸ್ತ್ರಗಳನ್ನ ನೀಡಿದೆ. ಅಲ್ಲದೇ 1,62,000 ಪೀಸ್ ಸಂಪರ್ಕ ಸಾಧನಗಳನ್ನ ನೀಡಿದೆ, 16,000 ನೈಟ್ ವಿಷನ್ ಗಾಗಲ್ ಸಾಧನಗಳನ್ನ ನೀಡಿದೆ. ಅಲ್ಲದೇ 208 ಏರ್​ಕ್ರಾಫ್ಟ್​ಗಳನ್ನ 2003 ರಿಂದ 2017 ರ ಅವಧಿಯಲ್ಲಿ ಅಮೆರಿಕ ಸರ್ಕಾರ ಅಫ್ಘಾನಿಸ್ತಾನಕ್ಕೆ ನೀಡಿದೆ.

ಇದನ್ನೂ ಓದಿ: US​​​​ ಕ್ಯಾಪಿಟೊಲ್ ಪ್ರದೇಶದಲ್ಲಿ ಬಾಂಬ್​ ಬೆದರಿಕೆ; ಕಾಂಗ್ರೆಸ್​ ಲೈಬ್ರರಿ ಸುತ್ತ ಪೊಲೀಸ್ ಬಿಗಿ ​ಭದ್ರತೆ

blank

ಇವೆಲ್ಲ ಈಗ ತಾಲಿಬಾನಿಗಳ ಪಾಲಾಗಿವೆ ಎನ್ನಲಾಗಿದೆ. ಅದ್ರಲ್ಲೂ ನೈಟ್ ವಿಷನ್​ನಲ್ಲಿ ದಾಳಿ ಮಾಡಲು ಸಹಾಯವಾಗುವಂಥ ಸಾಧನಗಳು ತಾಲಿಬಾನಿಗಳ ಪಾಲಾಗಿರುವುದು ಅಪಾಯಕಾರಿ ಅಂತಲೇ ಹೇಳಲಾಗಿದೆ.

Source: newsfirstlive.com Source link