ಮೊಹರಂ ಪ್ರಯುಕ್ತ ಬೆಂಕಿ ಕೆಂಡದ ಸ್ನಾನ ಮಾಡಿದ ಭಕ್ತಗಣ..

ಮೊಹರಂ ಪ್ರಯುಕ್ತ ಬೆಂಕಿ ಕೆಂಡದ ಸ್ನಾನ ಮಾಡಿದ ಭಕ್ತಗಣ..

ಬಳ್ಳಾರಿ: ಮೊಹರಂ ಹಬ್ಬದ ಪ್ರಯುಕ್ತ ಭಕ್ತರು ಕೆಂಡದ ಸ್ನಾನ ಮಾಡಿದ ಘಟನೆ ವಿಜಯನಗರ ಜಿಲ್ಲೆಯ ಹಡಗಲಿ ತಾಲೂಕಿನ ಬಸಾಪುರ ಗ್ರಾಮದಲ್ಲಿ ನಡೆದಿದೆ.

ಬಸಾಪುರ ಗ್ರಾಮದ ಫಕೀರಸ್ವಾಮಿ ದರ್ಗಾದ ಮುಂದೆ ಪ್ರತಿ ವರ್ಷ ಮೊಹರಂ ಪ್ರಯುಕ್ತ ಗ್ರಾಮಸ್ಥರು ಈ ಆಚರಣೆಯನ್ನು ನಡೆಸಿಕೊಂಡು ಬಂದಿದ್ದಾರೆ. ಹೀಗೆ ಕೆಂಡವನ್ನು ಮೈ ಮೇಲೆ ಹಾಕಿಸಿಕೊಂಡರೆ ತಮ್ಮ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಭಕ್ತರದ್ದು. ಈ ಕೆಂಡದ ಸ್ನಾನದಲ್ಲಿ ಭಾಗಿಯಾಗಲು ಬೇರೆ ಬೇರೆ ಜಿಲ್ಲೆಗಳಿಂದ ಭಕ್ತರು ಆಗಮಿಸಿದ್ದಾರೆ. ಆದರೆ ಸ್ವಲ್ಪ ಎಚ್ಚರ ತಪ್ಪಿದ್ರೂ ಅಪಾಯ ಕಟ್ಟಿಟ್ಟ ಬುತ್ತಿ.

blank

ಮೊಹರಂ ಕತ್ತಲ ರಾತ್ರಿಯಂದು ಕೆಂಡದಿಂದ ಸ್ನಾನ ಮಾಡಲು ಭಕ್ತರು ತಲೆ ಮೇಲೆ ಬಟ್ಟೆ ಹಾಕಿಕೊಂಡು ಸಾಲುಗಟ್ಟಿ ಕುಳಿತುಕೊಳ್ಳುತ್ತಾರೆ. ಬಳಿಕ ಒಬ್ಬ ವ್ಯಕ್ತಿ ಕೆಂಡವನ್ನು ಭಕ್ತರ ತಲೆಮೇಲೆ ಸುರಿಯುತ್ತಾನೆ. ನಂತರ ಹಿಂದೆ ನಿಂತ ಜನರು ಭಕ್ತರ ಮೇಲೆ ನೀರು ಎರಚುತ್ತಾರೆ. ಇದು ಮೊದಲಿನಿಂದ ನಡೆದುಕೊಂಡ ಬಂದ ಪದ್ಧತಿಯಂತೆ. ಇಷ್ಟಾರ್ಥ ಸಿದ್ಧಿಸುವಂತೆ ಹರಿಕೆ ಕಟ್ಟಿಕೊಂಡ ಮೇಲೆ ಮೂರು ವರ್ಷ ಬೆಂಕಿಯ ಕೆಂಡ ಸ್ನಾನ ಮಾಡುವ ವಾಡಿಕೆ ಇದೆಯಂತೆ.

blank

Source: newsfirstlive.com Source link